ಕೆಆರ್​​ಎಸ್​​ ಡ್ಯಾಂಗೆ ಕಲ್ಲು ಹೊಡೆಯದಂತೆ ಸುಮಲತಾಗೆ ನಿಖಿಲ್​ ಸಲಹೆ

ಕೆಆರ್​​ಎಸ್​​ ಡ್ಯಾಂಗೆ ಕಲ್ಲು ಹೊಡೆಯದಂತೆ ಸುಮಲತಾಗೆ ನಿಖಿಲ್​ ಸಲಹೆ

ಕೋಲಾರ: ಕೆಆರ್​ಎಸ್​ ಡ್ಯಾಂ ಗೆ ಕಲ್ಲು ಹೊಡೆಯುವ‌ ಕೆಲಸ ಮಾಡದಂತೆ ಮಂಡ್ಯ ಸಂಸದೆ ಸುಮಾಲತಾ ಅವರಿಗೆ ಜೆಡಿಎಸ್ ಯುವ ನಾಯಕ ನಿಖಿಲ್‌ಕುಮಾರ್ ಸ್ವಾಮಿ ಸಲಹೆ ನೀಡಿದ್ದಾರೆ.

ಮಂಡ್ಯದಲ್ಲಿನ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿದ ನಿಖಿಲ್​​, ಕೆಆರ್​ಎಸ್ ಡ್ಯಾಂಗೆ ಇತಿಹಾಸವಿದೆ, ಮೀಡಿಯ ಮುಂದೆ‌ ಫೋಕಸ್​​ಗಾಗಿ ಮಂಡ್ಯ ಜನತೆಯಲ್ಲಿ ಆತಂಕ ಸೃಷ್ಟಿ ಮಾಡಬೇಡಿ. ಕೆಆರ್​ಎಸ್​ ಡ್ಯಾಂ ಬಿರುಕು ಬಿಟ್ಟಿದೆ ಎಂಬ ವಿಚಾರವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಡ್ಯಾಂ ಬಿರುಕು ಬಿಟ್ಟಿದ್ದರೆ ಟೆಕ್ನಿಕಲ್​ ಟೀಂ ಇದೆ. ಸರ್ಕಾರ ಅದರ ಬಗ್ಗೆ ಉತ್ತರ ಕೊಡ್ತಾರೆ. ಈ ರೀತಿ ಗೊಂದಲ ಹೇಳಿಕೆಯಿಂದ‌ ಮಂಡ್ಯ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಆದ್ದರಿಂದ ಕೆಆರ್​​ಎಸ್​​ ಡ್ಯಾಂ ಗೆ ಕಲ್ಲು ಹೊಡೆಯುವ‌ ಕೆಲಸ ಮಾಡದಂತೆ ಸಂಸದೆ ಸುಮಾಲತಾಗೆ ಸಲಹೆ ನೀಡಿದ್ದಾರೆ.

blank

ನನ್ನ ತಮ್ಮನಿಗೆ ಸರ್ಟಿಫಿಕೇಟ್​ ಕೊಟ್ಟಿದಕ್ಕೆ ಧನ್ಯವಾದ..
ಸುಮಲತಾ ಅವರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ, ಜೆಡಿಎಸ್​ ಪಕ್ಷ, ಕುಮಾರಸ್ವಾಮಿ, ದೇವೇಗೌಡರು, ರಾಜ್ಯದ ಸಂಪತ್ತನ್ನು ಉಳಿಸುವ ಕೆಲಸ ಮಾಡಿದ್ದಾರೆ, ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅಲ್ಲದೇ ಸುಮಲತಾ ಅವರು ನನ್ನ ತಮ್ಮನ ಪೊಲಿಟಿಕಲ್ ಸರ್ಟಿಫಿಕೇಟ್​ ಕೊಟ್ಟಿದ್ದಾರೆ ಅದಕ್ಕೆ ಅಭಿನಂದನೆಗಳು.

ಆದರೆ ಮಂಡ್ಯದ ಸಂಸದರನ್ನಾಗಿ ಜನ ಆಯ್ಕೆ ಮಾಡಿದ್ದಾರೆ ಜನರ ಋಣ ತೀರಿಸಿಕೊಳ್ಳುವ ಕೆಲಸ ಮಾಡಿ. ಈ ರೀತಿಯ ವೈಯಕ್ತಿಕ ಕಲ್ಲೆರಚಾಟ ಮಾಡಿಕೊಂಡು ಟೀಕೆ ಮಾಡುವುದು ಬೇಡ. ನಾನು ಒಬ್ಬ ನಾಗರಿಕನಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸುಮ್ಮನೆ ಆರೋಪ ಮಾಡೋದು, ಮಾಧ್ಯಮಗಳ ಗಮನ ತಮ್ಮತ್ತ ಸೆಳೆಯುವುದು ಸರಿಯಲ್ಲ. ರಾಜ್ಯದ ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ಸಂಸದರ ಈ ಮಾರ್ಗ ಸರಿಯಲ್ಲ.

ಇದನ್ನೂ ಓದಿ: KRS ಡ್ಯಾಂ ಬಿರುಕು ವಿಚಾರ: ಪರೋಕ್ಷವಾಗಿ ಸುಮಲತಾ ವಿರುದ್ಧ ಪ್ರತಾಪ್ ಸಿಂಹ ಕಿಡಿ

blank

ಮಂಡ್ಯ ಸೋಲನ್ನು ಒಪ್ಪಿಕೊಂಡಿದ್ದೇನೆ..
ಎಲ್ಲಿ ಗೆದ್ದಿದ್ದಾರೋ ಅಲ್ಲೇ ಸೋಲಿಸುತ್ತೇನೆ ಎಂಬ ಹೆಚ್​ಡಿಕೆ ಹೇಳಿಕೆ ವಿಚಾರ, ನಾನು ಮಂಡ್ಯದ ಚುನಾವಣೆಯಲ್ಲಿ ಸೋತಿದ್ದೇನೆ ನಾನು ಸೋಲು ಒಪ್ಪಿಕೊಂಡಿದ್ದೇನೆ. ಆದರೆ ಐದುಮುಕ್ಕಾಲು ಲಕ್ಷ ಜನ ಮತ ಹಾಕಿದ್ದಾರೆ ಬೇಜಾರಿಲ್ಲ. ಈಗ ಅವರು ಸಂಸದರಾಗಿದ್ದಾರೆ ಅದರ ಋಣ ತೀರಿಸುವ ಕೆಲಸ ಮಾಡಲಿ. ಯುವ ಜೆಡಿಎಸ್ ಅಧ್ಯಕ್ಷನಾಗಿ ರಾಜ್ಯದಲ್ಲಿ‌ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಯುವಕರಿಗೆ ಮುಂದಿನ‌ ವಿಧಾನಸಭೆಯಲ್ಲಿ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡುತ್ತೇವೆ. ರಾಜ್ಯದಲ್ಲಿ ಇನ್ನೂ 22 ತಿಂಗಳಲ್ಲಿ ಚುನಾವಣೆ ಎದುರಾಗುತ್ತದೆ. ನಾನು ಕೂಡ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇನೆ ಎಂದರು.

The post ಕೆಆರ್​​ಎಸ್​​ ಡ್ಯಾಂಗೆ ಕಲ್ಲು ಹೊಡೆಯದಂತೆ ಸುಮಲತಾಗೆ ನಿಖಿಲ್​ ಸಲಹೆ appeared first on News First Kannada.

Source: newsfirstlive.com

Source link