ಆಭರಣ ವ್ಯಾಪಾರಸ್ಥರಿಗೆ ಕಿರುಕುಳ, ಪೊಲೀಸರಿಗೆ ಚಾಟಿ ಬೀಸಿದ ಹೈಕೋರ್ಟ್

ಆಭರಣ ವ್ಯಾಪಾರಸ್ಥರಿಗೆ ಕಿರುಕುಳ, ಪೊಲೀಸರಿಗೆ ಚಾಟಿ ಬೀಸಿದ ಹೈಕೋರ್ಟ್

ಬೆಂಗಳೂರು: ಪೊಲೀಸರು ಕಿರುಕುಳ ನೀಡ್ತಿದ್ದಾರೆ ಎಂದು ಹೈಕೋರ್ಟ್​ ಮೇಟ್ಟಿಲೇರಿದ್ದ ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಹೈಕೋರ್ಟ್​ ಗುಡ್​ನ್ಯೂಸ್​ ನೀಡಿದೆ.  ಕಳ್ಳತನ ಪ್ರಕರಣಗಳಲ್ಲಿ ಆಭರಣ ವ್ಯಾಪಾರಸ್ಥರಿಗೆ ಕಿರುಕುಳ ನೀಡಿ, ಅರೆಸ್ಟ್​ ಮಾಡುವದಾಗಿ ಬೆದರಿಸಿ, ಅಕ್ರಮವಾಗಿ ಚಿನ್ನಭರಣಕ್ಕೆ ಬೇಡಿಕೆಯಿಡುತ್ತಿದ್ದರು ಎಂದು ಆರೋಪಿಸಿ ಹೈಕೋರ್ಟ್​ ಮೇಟ್ಟಿಲೇರಿದ್ದರು.

ವಿಚಾರಣೆ ನಡೆಸಿ ತೀರ್ಪು ನೀಡಿದ ನ್ಯಾಯಾಲಯ ತನಿಖೆ ನೆಪದಲ್ಲಿ ದೌರ್ಜನ್ಯ ಎಸಗುತ್ತಿದ್ದ ಪೊಲೀಸರಿಗೆ ಚಾಟಿ ಬೀಸಿದೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಸಂಕೇತ ಏಣಗಿ ಅವರ ವಾದ ಆಲಿಸಿದ ನಾಯಮೂರ್ತಿ. ನರೇಂದರ್​ ಚಿನ್ನಾಭರಣಗಳ ಕಳ್ಳತನಕ್ಕೆ ಇಲಾಖಾ ನಿರ್ದೇಶನ ಪಾಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿ, ಆಭರಣ ವ್ಯಾಪಾರಸ್ಥರಿಗೆ ಕಿರುಕುಳ ಕಂಡು ಬಂದಲ್ಲಿ ಗಂಭೀರವಾಗಿ ಪರಿಗಣಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ಜೊತೆಗೆ 6 ವಾರದೊಳಗೆ ದೂರು ಇತ್ಯರ್ಥಗೊಳಿಸಲು ನಿರ್ದೇಶನ ನೀಡಿ ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗಳಿಗೂ ಸೂಚನೆ ನೀಡಿದ್ದಾರೆ.

The post ಆಭರಣ ವ್ಯಾಪಾರಸ್ಥರಿಗೆ ಕಿರುಕುಳ, ಪೊಲೀಸರಿಗೆ ಚಾಟಿ ಬೀಸಿದ ಹೈಕೋರ್ಟ್ appeared first on News First Kannada.

Source: newsfirstlive.com

Source link