ಹಿಂಬದಿ ಚಲಿಸಿದ ವಾಹನ ಆರು ಜನ ಆಸ್ಪತ್ರೆಗೆ ದಾಖಲು

ಹಿಂಬದಿ ಚಲಿಸಿದ ವಾಹನ ಆರು ಜನ ಆಸ್ಪತ್ರೆಗೆ ದಾಖಲು

ಚಿಕ್ಕಮಗಳೂರು: ವಾಹನ ಹಿಂದಕ್ಕೆ ಚಲಿಸಿದ ಪರಿಣಾಮ 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಕಾಫಿ ಎಸ್ಟೇಟ್​ನಲ್ಲಿ ನಡೆದಿದೆ.

ನಿಂತಿದ್ದ ವಾಹನ ಏಕಾಏಕಿ ಹಿಂದಕ್ಕೆ ಚಲಿಸಿದ್ದು ಹಿಂಬದಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಹರಿದಿದೆ, ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರು ಗಂಭೀರಗೊಂಡ 6 ಜನ ಕಾರ್ಮಿಕರನ್ನು ತಕ್ಷಣ ಅಂಬ್ಯೂಲೆನ್ಸ್​ ಮೂಲಕ ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕಾರ್ಮಿಕರು ಕೊಟ್ಟಿಗೆಹಾರ ಮತ್ತು ಸಬ್ಲೆಯಿಂದ ಕಾಫಿ ತೋಟಕ್ಕೆ ಕೆಲಸಕ್ಕೆ ಬಂದಿದ್ದರು ಎನ್ನಲಾಗಿದೆ.

The post ಹಿಂಬದಿ ಚಲಿಸಿದ ವಾಹನ ಆರು ಜನ ಆಸ್ಪತ್ರೆಗೆ ದಾಖಲು appeared first on News First Kannada.

Source: newsfirstlive.com

Source link