ಧ್ರುವ ಸರ್ಜಾರ 5ನೇ ಸಿನಿಮಾಗೆ ಸಿದ್ಧತೆ; ನಡೆಯಿತು ಸ್ಕ್ರಿಪ್ಟ್​ಗೆ ಪೂಜೆ​

ಧ್ರುವ ಸರ್ಜಾರ 5ನೇ ಸಿನಿಮಾಗೆ ಸಿದ್ಧತೆ; ನಡೆಯಿತು ಸ್ಕ್ರಿಪ್ಟ್​ಗೆ ಪೂಜೆ​

ಕಳೆದ ದಿನ ನಾವು ನಿಮ್​ಗೆ ಹೇಳಿದ್ವಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಐದನೇ ಸಿನಿಮಾ ಈ ಏಳನೇ ತಾರೀಕು ಶುರುವಾಗುತ್ತೆ ಅಂತ.. ಈಗ ಧ್ರುವ ಸರ್ಜಾ 5ನೇ ಸಿನಿಮಾದ ಸ್ಟೋರಿಗೆ ಸೂಪರ್ ಸಾಕ್ಷಿ ಸಿಕ್ಕಿದೆ. ಅದ್ಧೂರಿ ಸಿನಿಮಾ ಎ.ಪಿ.ಅರ್ಜುನ್, ಧ್ರುವ ಸರ್ಜಾ ಜೋಡಿ ಮತ್ತೊಮ್ಮೆ ಮೋಡಿ ಮಾಡಲು ಮುಂದಾಗಿದೆ.

ಪೊಗರು, ಸಿನಿಮಾದ ನಂತರ ಧ್ರುವ ಸರ್ಜಾ ದುಬಾರಿ ಸಿನಿಮಾದ ಮುಹೂರ್ತವಾಗಿತ್ತು. ಆದ್ರೆ, ಎಲ್ಲವೂ ನಮ್ಮ ಕೈಯಲ್ಲಿ ಇಲ್ಲ ನೋಡಿ.. ಸದ್ಯಕ್ಕೆ ದುಬಾರಿ ಡ್ರಾಪ್ ಆಗಿದೆ. ವಾಟ್ ನೆಕ್ಸ್ಟ್​ ಧ್ರುವ ಸರ್ಜಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. 9 ವರ್ಷದ ನಂತರ ಅದ್ದೂರಿ ಸಿನಿಮಾವನ್ನ ಮಾಡಿದ್ದ ಎ.ಪಿ.ಅರ್ಜುನ್ – ಧ್ರುವ ಸರ್ಜಾ ಜೋಡಿ ಸಿನಿಮಾ ಮೋಡಿ ಮಾಡಲು ಮುಂದಾಗಿದೆ. ನಿರ್ಮಾಪಕ ಉದಯ್ ಕೆ ಮಹ್ತಾ, ಧ್ರುವ ಸರ್ಜಾ ಸಿನಿ ಕನಸಿಗೆ ಅಂಬಾರಿ ಎ.ಪಿ ಅರ್ಜುನ್ ಸಾರಥಿಯಾಗಿದ್ದಾರೆ.

ಉದಯ್ ಕೆ.ಮೇಹ್ತಾ ನಿರ್ಮಾಣದ ಧ್ರುವ ಸರ್ಜಾ ನಟನೆಯ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಶ್ರೀ, ಆಂಜನೇಯ ಸ್ವಾಮಿಯ ಪರಮ ಭಕ್ತನಾಗಿರೋ ಧ್ರುವ ಸರ್ಜಾ ಚೆನ್ನೈನಲ್ಲಿ ತನ್ನ ಮಾವ ಕಟ್ಟಿಸಿರುವ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನ ಉದ್ಘಾಟನೆಯಲ್ಲಿ ಪಾಲ್ಗೊಂಡ ನಂತರ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ವೀರಾಂಜನೇಯ ಸ್ವಾಮಿ ಸನ್ನಿಧಾನದಲ್ಲಿ ಧ್ರುವ ಅವರ ಹೊಸ ಸಿನಿಮಾ ಸ್ಕ್ರಿಪ್ಟ್ ಪೂಜೆ ಸರಳವಾಗಿ ಆಗಿದೆ. 9 ವರ್ಷದ ನಂತರ ಎ.ಪಿ.ಅರ್ಜುನ್ ಮತ್ತು ಧ್ರುವ ಸರ್ಜಾ ಮಾಡ್ತಿರೋ ಹೊಸ ಸಿನಿಮಾದ ಹೆಸರೇನು ಅನ್ನೋ ಕುತೂಹಲ ಈಗ ಚಿತ್ರಪ್ರೇಮಿಗಳಲ್ಲಿ ಶುರುವಾಗಿದೆ.. ಒಂದು ಮಾಹಿತಿಯ ಪ್ರಕಾರ ‘ಮಾರ್ಟಿನ್’ ಅನ್ನೋ ಹೆಸರನ್ನ ಧ್ರುವ-ಅರ್ಜುನ್ ಸಿನಿ ಕಾಂಬೋಕ್ಕೆ ಇಡೋ ಸಾಧ್ಯತೆ ಎನ್ನಲಾಗುತ್ತಿದೆ.. ಸದ್ಯ ಮಾರ್ಟಿನ್ ಎಂದು ಹೇಳಲಾಗುತ್ತಿರೋ ಸಿನಿಮಾದ ಸ್ಕ್ರಿಪ್ಟ್ ಪೂಜೆಯಾಗಿದ್ದು ಮುಂದಿನ ತಿಂಗಳು, ಅಂದ್ರೆ ಆಗಸ್ಟ್ 12ನೇ ತಾರೀಖ್ ಸಿನಿಮಾದ ಮುಹೂರ್ತವಾಗಲಿದೆ.

The post ಧ್ರುವ ಸರ್ಜಾರ 5ನೇ ಸಿನಿಮಾಗೆ ಸಿದ್ಧತೆ; ನಡೆಯಿತು ಸ್ಕ್ರಿಪ್ಟ್​ಗೆ ಪೂಜೆ​ appeared first on News First Kannada.

Source: newsfirstlive.com

Source link