ಸಮುದ್ರದ ಅಬ್ಬರ ನೋಡಲು ಬಂದ ಸಚಿವನ ದೌಲತ್ತು; ಕಾಲಿಗೆ ನೀರು ತಾಗುತ್ತೆ ಅಂತ ತಂದ್ರು ಹೊತ್ತು

ಸಮುದ್ರದ ಅಬ್ಬರ ನೋಡಲು ಬಂದ ಸಚಿವನ ದೌಲತ್ತು; ಕಾಲಿಗೆ ನೀರು ತಾಗುತ್ತೆ ಅಂತ ತಂದ್ರು ಹೊತ್ತು

ಚೆನ್ನೈ: ತಮಿಳುನಾಡು ಮೀನುಗಾರಿಕಾ ಸಚಿವರ ಶೂಗಳು ನೀರು ತಾಗಿಬಿಡುತ್ತದೆನ್ನುವ ಕಾರಣಕ್ಕೆ ಮೀನುಗಾರರೇ ಸಚಿವರನ್ನು ಹೊತ್ತೊಯ್ದ ಘಟನೆ ತಮಿಳುನಾಡಿನ ಪಳವೇರ್ಕಾಡುವಿನಲ್ಲಿ ನಡೆದಿದೆ.

ಸಮುದ್ರದ ಅಲೆಯುಬ್ಬರದ ಬಗ್ಗೆ ಪರಿಶೀಲನೆ ನಡೆಸಲು ತಮಿಳುನಾಡಿನ ಮೀನುಗಾರಿಕಾ ಸಚಿವ ಅನಿತಾ ರಾಧಾಕೃಷ್ಣನ್ ತೆರಳಿದ್ದರು. ಈ ವೇಳೆ ಬೋಟ್​ನಲ್ಲಿ ಕೂರು ಸಮುದ್ರದೊಳಗೆ ತೆರಳಿದ ಸಚಿವ ಕೆಲಹೊತ್ತಿನ ನಂತರ ದಡಕ್ಕೆ ವಾಪಸ್ಸಾಗಿದ್ದಾರೆ. ಈ ವೇಳೆ ದಡದಲ್ಲಿ ನೀರಿದ್ದಿದ್ದರಿಂದ ಸಚಿವರು ತಮ್ಮ ಚಪ್ಪಲಿ ತೇವವಾಗುತ್ತದೆಂದು ಬೋಟ್​ನಿಂದ ಇಳಿಯಲು ತಡವರಿಸಿದ್ದಾರೆ. ಮೀನುಗಾರರು ಚೇರ್​ ಒಂದನ್ನು ಇಟ್ಟು ಸಚಿವರು ಸರಾಗವಾಗಿ ಇಳಿಯಲು ಅನುಕೂಲ ಮಾಡಿಕೊಟ್ಟಿದ್ದಾರೆ.

blank

ಚೇರ್ ಹಾಕಿದ್ದರೂ ಇಳಿಯಲು ಹಿಂದೆ ಮುಂದೆ ನೋಡಿದ ಸಚಿವರನ್ನ ನಂತರ ಮೀನುಗಾರರೇ ಸೇರಿ ದಡದವರೆಗೆ ಹೊತ್ತೊಯ್ದಿದ್ದಾರೆ. ಸಚಿವರನ್ನ ಮೀನುಗಾರರು ಹೊತ್ತೊಯ್ಯುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಸಚಿವರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

The post ಸಮುದ್ರದ ಅಬ್ಬರ ನೋಡಲು ಬಂದ ಸಚಿವನ ದೌಲತ್ತು; ಕಾಲಿಗೆ ನೀರು ತಾಗುತ್ತೆ ಅಂತ ತಂದ್ರು ಹೊತ್ತು appeared first on News First Kannada.

Source: newsfirstlive.com

Source link