‘ಅಂಬರೀಶ್​​ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗೆ ಇಲ್ಲ’

‘ಅಂಬರೀಶ್​​ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗೆ ಇಲ್ಲ’

ಬೆಂಗಳೂರು: ಕೆಆರ್​​ಎಸ್​​ ಜಲಾಶಯ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಮತ್ತು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ನಡುವಿನ ಮಾತಿನ ಸಮರವೀಗ ವೈಯಕ್ತಿಕ ಕೆಸರೆರಚಾಟಕ್ಕೆ ತಿರುಗಿದೆ. ಅಂಬರೀಶ್​​ ಮುಂದೆ ಕೈಕಟ್ಟಿ ನಿಲ್ಲೋಕೆ ನಾನೇನು​​​ ಗುಲಾಮನೇ? ಎನ್ನುವ ಮೂಲಕ ಸುಮಲತಾ ವಿರುದ್ಧ ಎಚ್​ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೀಗ ಎಚ್​​ಡಿಕೆ ಹೇಳಿಕೆಗೆ ಸುಮಲತಾ ತಿರುಗೇಟು ನೀಡಿದ್ದಾರೆ.

ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಎಚ್​​ಡಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುಮಲತಾ, ಅಂಬರೀಶ್​​​ ಬಗ್ಗೆ ಮಾತಾಡೋ ಯೋಗ್ಯತೆ ಯಾರಿಗೂ ಇಲ್ಲ. ಅಂಬರೀಶ್​​​ ಮಾಡಿರುವ ಸಾಧನೆ ಇವರಿಂದ ಸಾಧ್ಯವಿಲ್ಲ. ಸುಮ್ಮನೇ ಅಂಬರೀಶ್ ಕಾಲದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು ಎಂದು ಆರೋಪಿಸಿದ್ದಾರೆ. ಜೊತೆಗೆ ನಟೋರಿಯಸ್​ ಎಂಬ ಪದ ಬಳಕೆ ಮಾಡಿದ್ದಾರೆ. ಇದ್ಯಾವ ಕಾರಣಕ್ಕಾಗಿ ಬಳಸಿದರು ಎಂದು ಗೊತ್ತಿಲ್ಲ. ಜೆಡಿಎಸ್​​ನವರಿಗೆ ಈ ಪದದ ಅರ್ಥವೇ ಗೊತ್ತಿಲ್ಲ ಎಂದು ಕೆಂಡಕಾರಿದರು.

blank

ಗಣಿಕಾರಿಕೆ ಹಿಂದೆ ಜೆಡಿಎಸ್​ ಶಾಸಕರು

ನಾನು ಭ್ರಷ್ಟಾಚಾರ ಮಾಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ನಿಮ್ಮಂತ ಭ್ರಷ್ಟೆ ನಾನಲ್ಲ. ಮಂಡ್ಯದ ಜನರ ಆಶೀರ್ವಾದ ನನ್ನ ಮೇಲಿದೆ. ಇಂತಹ ಭ್ರಷ್ಟ ಜನಪ್ರತಿನಿಧಿಗಳಿಗೆ ನಾನು ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಮಂಡ್ಯದಲ್ಲಿ ಎಲ್ಲೆಲ್ಲಿ ಗಣಿಗಾರಿಕೆ ಇದೆಯೋ ಅಲ್ಲಿ ಜೆಡಿಎಸ್​ ಸ್ಥಳೀಯ ಶಾಸಕರ ಕೈವಾಡ ಇದೆ. ಅಕ್ರಮ ಗಣಿಕಾರಿಕೆ ರಕ್ಷಿಸಲು ಇವರು ಪ್ರಯತ್ನಿಸುತ್ತಿದ್ದಾರೆ. ನಾನು ಹೋದ ಕಡೆಯಲ್ಲಾ ಸ್ಥಳೀಯ ಶಾಸಕರ ಬೆಂಬಲಿಗರು ತಡೆಯುತ್ತಿದ್ದಾರೆ ಎಂದು ಸುಮಲತಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ಅಂಬರೀಶ್ -ಶಾಸಕ ರವೀಂದ್ರ ಶ್ರೀಕಂಠಯ್ಯ ಹೊಸ ಬಾಂಬ್

ನನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ

ನನಗೆ ಸಿಕ್ಕ ಮಾಹಿತಿ ಆಧರಿಸಿ ನಾನು ಎಲ್ಲಿಗೆ ಬೇಕಾದರೂ ಹೋಗುತ್ತೇನೆ. ನನ್ನ ತಡೆಯುವ ಹಕ್ಕು ಯಾರಿಗೂ ಇಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್​ಗೆ ಜನ ತಕ್ಕ ಪಠ ಕಲಿಸಲಿದ್ದಾರೆ. ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸಂಬಂಧ ರಾಜ್ಯ ಗಣಿಗಾರಿಕೆ ಸಚಿವರೊಂದಿಗೆ ಮಾತಾಡಿದ್ದೇನೆ. ಕಾನೂನಿನ ಮೂಲಕ ಇದಕ್ಕೆ ತಡೆ ತರುತ್ತೇನೆ ಎಂದು ಸವಾಲ್​​ ಹಾಕಿದರು.

ಕೆಆರ್​ಎಸ್ ಮುಂದೆ ನನ್ನ ಮಲಗಿಸಿ ಎಂದು ಎಚ್​ಡಿಕೆ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಯನ್ನು ಹೇಗೆ ನೀಡಲು ಸಾಧ್ಯ..?ಹೆಣ್ಣುಮಕ್ಕಳ ಬಗ್ಗೆ ಗೌರವ ಇಲ್ಲ. ನನ್ನ ಮೇಲೆ ಬೇಕಂತಲೇ ದಾಳಿ ನಡೆಸುತ್ತಿದ್ದಾರೆ. ನಾನು ಇವರ ದಾಳಿಗೆ ಹೆದರೋಲ್ಲ. ಮಂಡ್ಯ ಜನರಿಗಾಗಿ ನನ್ನ ಸೇವೆ ಮುಂದುವರಿಸಲಿದ್ದೇನೆ ಎಂದು ತಿಳಿಸಿದರು.

blank

ಇದನ್ನೂ ಓದಿ: ಅಂಬರೀಶ್​ ಮುಂದೆ ಕೈಕಟ್ಟಿ ನಿಲ್ಲೋಕೆ ನಾನೇನ್​​​ ಗುಲಾಮನೇ.. ಹಿಂಗ್ಯಾಕ್ ಕೇಳಿದ್ರು ಹೆಚ್​ಡಿಕೆ?

ಭ್ರಷ್ಟಾ ಚಾರದ ದಾಖಲೆ ಬಿಡುಗಡೆ ಮಾಡಿ

ಅಂಬರೀಶ್​ ಕಾಲದಲ್ಲೇ ಗಣಿಕಾರಿಕೆ ಶುರುವಾದದ್ದು ಎಂದು ಆರೋಪಿಸಲಾಗುತ್ತಿದೆ. ಇವರಿಗೆ ಬೇಕಾದಾಗ ಅಂಬರೀಶ್​​ ಹೆಸರನ್ನು ಬಳಿಸಿಕೊಳ್ಳುತ್ತಿದ್ದಾರೆ. ಅಂಬರೀಶ್​​ ಹೆಸರು ಎತ್ತೋಕೆ ಎಚ್​ಡಿಕೆಗೆ ಯೋಗ್ಯತೆ ಇಲ್ಲ. ಒಂದು ವೇಳೆ ಅಂಬರೀಶ್​ ಕಾಲದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಚಾಲೆಂಜ್​ ಮಾಡಿದರು.

blank

The post ‘ಅಂಬರೀಶ್​​ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗೆ ಇಲ್ಲ’ appeared first on News First Kannada.

Source: newsfirstlive.com

Source link