‘ಅವರೇ ಮಣ್ಣಾಗೋದು.. ನನ್ನನ್ನ ಕೆರಳಿಸಬೇಡಿ..’- ಸುಮಲತಾ ಆರೋಪಕ್ಕೆ ಕಿಡಿಯಾದ ಹೆಚ್​ಡಿಕೆ

‘ಅವರೇ ಮಣ್ಣಾಗೋದು.. ನನ್ನನ್ನ ಕೆರಳಿಸಬೇಡಿ..’- ಸುಮಲತಾ ಆರೋಪಕ್ಕೆ ಕಿಡಿಯಾದ ಹೆಚ್​ಡಿಕೆ

ಮಂಡ್ಯ: ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಮತ್ತೆ ಹೇಳಿಕೆ ಕೊಟ್ಟಿದ್ದಾರೆ. 

ಸಂಸದ ಪ್ರತಾಪ್‌ಸಿಂಹ ಸುದೀರ್ಘವಾಗಿ ಮಾತನಾಡಿದ್ದಾರೆ. ಯಾರೋ ಕೊಡುವ ಹೇಳಿಕೆಗಿಂತ ವಾಸ್ತವ ನೋಡಬೇಕು ಅಂತ ಪ್ರತಾಪ್‌ಸಿಂಹ ಹೇಳಿದ್ದಾರೆ. ನನ್ನನ್ನ ತೇಜೋವಧೆ ಮಾಡುವ ನಿಟ್ಟಿನಲ್ಲಿ ಹೇಳಿಕೆ ತಿರುಚಬೇಡಿ. ಕೈ ಮುಗಿದು ಬೇಡುತ್ತೇನೆ, ನನ್ನ ಬಗ್ಗೆ ಅಪಪ್ರಚಾರ ಬೇಡ. ನನ್ನ ಹೇಳಿಕೆಗೆ ಬಣ್ಣ ಕಟ್ಟಿ, ವೈಭವೀಕರಿಸಬೇಡಿ‌ ಅಂತ ಕುಮಾರಸ್ವಾಮಿ ಮಾತನಾಡಿದ್ದಾರೆ.

ಅಷ್ಟೇ ಅಲ್ಲದೇ, ಮಂಡ್ಯ ಚುನಾವಣೆಯಲ್ಲಿ ಮಾಡಿದಂತೆ ಈಗಲೂ ಮಾಡಬೇಡಿ. ಇದರಿಂದ ನನಗೇನು ನಷ್ಟವಿಲ್ಲ.ರಾಜ್ಯದಲ್ಲಿ ಬೇರೆ ಏನು ವಿಚಾರ ಇಲ್ಲವೇನೋ ಎಂಬಂತೆ ಈ ವಿಚಾರ ಬಿಂಬಿಸುತ್ತಿದ್ದೀರ‌. ಟೆಲಿಪೋನ್ ಟ್ಯಾಪಿಂಗ್ ಆರೋಪ ವಿಚಾರದಲ್ಲಿ, ನಾನು ಟ್ಯಾಪಿಂಗ್ ಮಾಡುವುದಾದ್ರೆ ಸರ್ಕಾರ ಕಳೆದುಕೊಳ್ತಿದ್ನ. ಸರ್ಕಾರ ಬಿದ್ದ ಮೇಲೂ ಆಡಿಯೋ ಟ್ಯಾಪಿಂಗ್ ಮುಳುವು ಅಂತ ಬಿಂಬಿಸಿದ್ರಿ,
ನಾನು ಭಾವನಾತ್ಮಕ ಜೀವಿ ಇನ್ನೂ ಉಳಿದ್ದಿದ್ದೀನಿ‌.

14 ತಿಂಗಳಲ್ಲಿ ನಾನು ಏನು ಕೆಲಸ ಮಾಡಿದ್ರೂ ನೀವು ಯಾವ ಸರ್ಟಿಫಿಕೇಟ್​ನೂ ಕೊಡಲಿಲ್ಲ. ಈಗಲೂ ಹೇಳೋದಿಷ್ಟೇ.. ನನ್ನನ್ನ ಫಿನಿಶ್ ಮಾಡ್ತೀನಿ ಅಂತ ಯಾರಾದ್ರೂ ಅಂದುಕೊಂಡಿದ್ರೆ ಇದರಿಂದ ನಮ್ಮ ಪೊಲಿಟಿಕಲ್ ಕೆರಿಯರ್ ಹಾಳು ಮಾಡಲು ಸಾಧ್ಯವಿಲ್ಲ. ಇನ್ನೂ 100 ವರ್ಷ ಹೋದ್ರೂ ಡ್ಯಾಂ ಅಲ್ಲಾಡಲ್ಲ.. ನನ್ನ ಕಾಲದಲ್ಲಿ ನಾನು ನಾನು ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಹೆಚ್​ಡಿಕೆ ಹೇಳಿದರು.

ಮಾಧ್ಯಮದವರು.. ಸುಮಲತಾ ಅವರು ಅವರ ಹೆಸರೇಳಿದ್ರೆ ಮಣ್ಣಾಗೋಗ್ತೀರ ಅಂದಿದ್ದಾರೆ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಹೆಚ್​ಡಿಕೆ.. ಯಾರು..? ಅವರೇ ಮಣ್ಣಾಗೋದು.. ನನ್ನನ್ನ ಕೆರಳಿಸಬೇಡಿ.. ಅದರ ಬಗ್ಗೆ ಚರ್ಚೆ ಮಾಡಬೇಡಿ ಎಂದರು.

The post ‘ಅವರೇ ಮಣ್ಣಾಗೋದು.. ನನ್ನನ್ನ ಕೆರಳಿಸಬೇಡಿ..’- ಸುಮಲತಾ ಆರೋಪಕ್ಕೆ ಕಿಡಿಯಾದ ಹೆಚ್​ಡಿಕೆ appeared first on News First Kannada.

Source: newsfirstlive.com

Source link