ವಿದ್ಯಾರ್ಥಿಗಳ ಗಮನಕ್ಕೆ: SSLC & 1st PUC ಫಲಿತಾಂಶ ಇಂದಿನಿಂದ ಆನ್​ಲೈನ್​ನಲ್ಲಿ ಲಭ್ಯ

ವಿದ್ಯಾರ್ಥಿಗಳ ಗಮನಕ್ಕೆ: SSLC & 1st PUC ಫಲಿತಾಂಶ ಇಂದಿನಿಂದ ಆನ್​ಲೈನ್​ನಲ್ಲಿ ಲಭ್ಯ

ಬೆಂಗಳೂರು: ಜುಲೈ 20ರೊಳಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಲಿದೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಆರ್. ಹೇಳಿಕೆ ನೀಡಿದ್ದಾರೆ.

ಫಲಿತಾಂಶ ನೀಡಲು ಸಿದ್ಧತೆಯಲ್ಲಿ ತೊಡಗಿಕೊಂಡ ಪಿಯು ಬೋರ್ಡ್.. 10ನೇ ತರಗತಿ & ಪ್ರಥಮ ಪಿಯು ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳಿಗೆ ಇಂದು ಇಲಾಖೆಯ SATs ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಲು ಅವಕಾಶ ನೀಡಲಾಗಿದೆ.

ಇಂದು ಸಂಜೆ 4 ಗಂಟೆಯಿಂದ ಇಲಾಖೆಯ SATs ವೆಬ್ ವೈಟ್ sts.Karnataka.gov.in  ನಲ್ಲಿ ಮಾಹಿತಿ ಲಭ್ಯವಾಗಲಿದೆ. ಇಂದಿನಿಂದ ಜುಲೈ 10ರವರೆಗೂ ಫಲಿತಾಂಶ ವೀಕ್ಷಿಸಲು ಅವಕಾಶ ನೀಡಲಾಗಿದೆ.

10ನೇ ತರಗತಿ & ಪ್ರಥಮ ಪಿಯುಸಿ ಅಂಕದಲ್ಲಿ ಏದಾದರೂ ತಪ್ಪುಗಳಿದ್ದರೆ ಜುಲೈ 12ರ ಒಳಗಾಗಿ ವ್ಯಾಸಾಂಗ ಮಾಡಿದ ಕಾಲೇಜುಗಳ ಗಮನಕ್ಕೆ ವಿದ್ಯಾರ್ಥಿಗಳು ತರಬಹುದು. ಅಂಕಪಟ್ಟಿಯಲ್ಲಿದ್ದ ಅಂಕಕ್ಕೂ, SATs ನಲ್ಲಿ ದಾಖಲಾಗಿರುವ ಅಂಕದಲ್ಲಿ ವ್ಯತ್ಯಾಸವಿದ್ದರೆ ಕಾಲೇಜಿನ‌ ಆಡಳಿತ ಮಂಡಳಿಗೆ ಮಾಹಿತಿ ನೀಡಿ ಸರಿಪಡಿಸಬಹುದು.. ತಿದ್ದುಪಡಿಗೆ ಎರಡು ದಿನಗಳ ಕಾಲ ಕಾಲಾವಕಾಶ ನೀಡಲಾಗಿದೆ ಎಂದು  ನ್ಯೂಸ್ ಫಸ್ಟ್ ಗೆ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಆರ್. ಹೇಳಿಕೆ ನೀಡಿದ್ದಾರೆ.

The post ವಿದ್ಯಾರ್ಥಿಗಳ ಗಮನಕ್ಕೆ: SSLC & 1st PUC ಫಲಿತಾಂಶ ಇಂದಿನಿಂದ ಆನ್​ಲೈನ್​ನಲ್ಲಿ ಲಭ್ಯ appeared first on News First Kannada.

Source: newsfirstlive.com

Source link