ಲಾಕ್ಡೌನ್​​ನಲ್ಲಿ ಕಡುಬಡವನ ಕೈ ಹಿಡೀತು ಯೂಟ್ಯೂಬ್; ಕೂಲಿ ಮಾಡ್ತಿದ್ದವನಿಂದ ಈಗ ಲಕ್ಷ ಲಕ್ಷ ಗಳಿಕೆ

ಲಾಕ್ಡೌನ್​​ನಲ್ಲಿ ಕಡುಬಡವನ ಕೈ ಹಿಡೀತು ಯೂಟ್ಯೂಬ್; ಕೂಲಿ ಮಾಡ್ತಿದ್ದವನಿಂದ ಈಗ ಲಕ್ಷ ಲಕ್ಷ ಗಳಿಕೆ

ಲಾಕ್​ಡೌನ್​​ ಸಂದರ್ಭದಲ್ಲಿ ಯಾವುದೇ ಕೆಲಸವಿಲ್ಲದೆ ಒಪ್ಪತ್ತೂ ಊಟಕ್ಕೂ ಪರದಾಡುತ್ತಿದ್ದ ಬಡ ಕೂಲಿ ಕಾರ್ಮಿಕನೋರ್ವ ಯೂಟ್ಯೂಬ್​​ ಮೂಲಕವೇ ಲಕ್ಷಾಂತರ ಹಣ ದುಡಿದ ಕಾರಣ ಭಾರೀ ಸುದ್ದಿಯಲ್ಲಿದ್ದಾನೆ. ಒರಿಸ್ಸಾದ ಸಂಬಲ್‍ಪುರ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಸೇರಿದ ಐಸ್ಯಾಕ್ ಮುಂಡಾ ಯೂಟ್ಯೂಬ್​​ನಲ್ಲೇ ಲಕ್ಷ ಲಕ್ಷ ಹಣಗಳಿಸಿದ ಯುವಕ.

ದೇಶದಲ್ಲಿ ಕೊರೋನಾ ಹಾವಳಿ ಜೋರಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2020ರಿಂದಲೇ ಎಲ್ಲೆಡೆ ಲಾಕ್ಡೌನ್​​ ಹೇರಿಕೆ ಮಾಡಿತ್ತು. ದಿಢೀರ್​​ ಲಾಕ್ಡೌನ್​​ನಿಂದ ಕೆಲಸ ಕಳೆದುಕೊಂಡ ಐಸ್ಯಾಕ್​​ ಮುಂಡಾ,  3 ಸಾವಿರ ರೂಪಾಯಿ ಸಾಲ ಪಡೆದು ಬಳಸಿದ ಮೊಬೈಲ್​​ವೊಂದನ್ನ ಖರೀದಿಸಿದರು. ಆಗಾಗ ತನ್ನ ಸ್ನೇಹಿತರ ಮೊಬೈಲ್​​ನಲ್ಲಿ ಯೂಟ್ಯೂಬರ್ಸ್​ ವಿಡಿಯೋ ನೋಡಿ ಸ್ಫೂರ್ತಿ ಪಡೆದುಕೊಂಡಿದ್ದರಂತೆ.

blank

ಮೊದಲ ಬಾರಿಗೆ ‘ರೈಸ್ ಅಂಡ್​​​ ಇಂಡಿಯನ್ ಸಾಂಬರ್ ಫಾಸ್ಟ್ ಈಟಿಂಗ್’ ಎಂಬ ಶೀರ್ಷಿಕೆ ನೀಡಿ ವಿಡಿಯೋವೊಂದನ್ನು ಅಪ್ಲೋಡ್​​ ಮಾಡಿದ್ರು. ಒಂದು ತಟ್ಟೆಯಲ್ಲಿ ಬಿಸಿ ಅನ್ನವನ್ನು ಚೂರ್​​ ದಾಲ್​​​​ ಜತೆಗೆ ಕೆಲವು ಕರಿದ ಹಸಿಮೆಣಸಿನ ಕಾಯಿಗಳು ಮತ್ತು ಹಸಿ ಟೊಮ್ಯಾಟದೊಂದಿಗೆ ಕಲಿಸಿ ತಿನ್ನುವ ವಿಡಿಯೋ ಇದಾಗಿತ್ತು. ಈ ವಿಡಿಯೋ ಲಕ್ಷಾಂತರ ಜನ ನೋಡಿದ ಕಾರಣ ದಾಖಲೆ ನಿರ್ಮಿಸಿದ.

ತಾನು ಅಪ್ಲೋಡ್​ ಮಾಡಿದ ವಿಡಿಯೋ ವಿಕ್ಷಣೆ ಹೆಚ್ಚಾಗುತ್ತಲೇ ಹೋಯ್ತು. ಇದರಿಂದ ತನ್ನ ಯೂಟ್ಯೂಬ್​ ಚಾನೆಲ್​​ ಜನಪ್ರಿಯತೆಯೂ ಹೆಚ್ಚಾಯ್ತು. ಹೀಗಾಗಿ ಮುಂಡಾ ಮತ್ತಷ್ಟು ವಿಡಿಯೋಗಳನ್ನು ಅಪ್ಲೋಡ್​ ಮಾಡಿದರು. ಕೆಲವೇ ತಿಂಗಳಲ್ಲಿ ಯೂಟ್ಯೂಬ್​​​​ನಲ್ಲಿ ಮುಂಡಾ ಮೂರು ಲಕ್ಷ ರೂಪಾಯಿ ಗಳಿಸಿ ಬದುಕು ಕಟ್ಟಿಕೊಂಡರು.

blank

ವಿಡಿಯೋ ಮಾಡಲು ನಾನು 3 ಸಾವಿರ ಸಾಲ ಪಡೆದು ಮೊಬೈಲ್​ ಖರೀದಿಸಿದೆ. ಬಳಿಕ ನಾನು ಮಾಡಿದ ಮೊದಲ ವಿಡಿಯೋ 5 ಲಕ್ಷ ಜನರಿಗೆ ತಲುಪಿತ್ತು. ಸಾವಿರಾರು ಜನರ ಪ್ರತಿಕ್ರಿಯೆಗಳು ಬಂದವು. ಹಳ್ಳಿಯಲ್ಲಿ ನಮ್ಮ ಸಮುದಾಯದವರು ಹೇಗೆ ಆಹಾರ ಸೇವಿಸುತ್ತಾರೆ, ನಮ್ಮ ಫುಡ್​ ಸ್ಟೈಲ್​​ ಹೇಗಿರುತ್ತೇ ಎಂದು ವಿಡಿಯೋ ಮಾಡಿ ಹಾಕುತ್ತಿದ್ದೇನೆ. ಇದರಿಂದ ನನಗೆ ಆದಾಯ ಇದೆ. ಹೀಗಾಗಿ ಕೂಲಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದೇನೆ ಎನ್ನುತ್ತಾರೆ ಮುಂಡಾ.

ನನ್ನ ಮೊದಲ ವಿಡಿಯೋಗೆ ನನಗೇ 37 ಸಾವಿರ ಬಂತು. ಇದುವರೆಗೂ 256 ವಿಡಿಯೋ ಅಪ್ಲೋಡ್​ ಮಾಡಿದ್ದೇನೆ. ಚಾನೆಲ್​​ಗೆ ಒಟ್ಟು 7.29 ಲಕ್ಷ ಚಂದಾದಾರರು ಇದ್ದಾರೆ ಎಂದರು.

The post ಲಾಕ್ಡೌನ್​​ನಲ್ಲಿ ಕಡುಬಡವನ ಕೈ ಹಿಡೀತು ಯೂಟ್ಯೂಬ್; ಕೂಲಿ ಮಾಡ್ತಿದ್ದವನಿಂದ ಈಗ ಲಕ್ಷ ಲಕ್ಷ ಗಳಿಕೆ appeared first on News First Kannada.

Source: newsfirstlive.com

Source link