ಕ್ರಷರ್ ಘಟಕದಲ್ಲಿ ಹಗಲಿನಲ್ಲೇ ಬ್ಲಾಸ್ಟ್: ಕಲ್ಲುಬಡಿದು ಓರ್ವ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಕ್ರಷರ್ ಘಟಕದಲ್ಲಿ ಹಗಲಿನಲ್ಲೇ ಬ್ಲಾಸ್ಟ್: ಕಲ್ಲುಬಡಿದು ಓರ್ವ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ವಿಜಯಪುರ: ಜಲ್ಲಿ ಕಲ್ಲು ಹಾಗೂ ಕ್ರಷರ್ ಘಟಕದಲ್ಲಿ ಬ್ಲಾಸ್ಟ್ ನಡೆಸಿದ ಪರಿಣಾಮ ಕಲ್ಲು ಸಿಡಿದು ರಸ್ತೆ ಬದಿ ನಿಂತಿದ್ದ ಮೂವರು ಗಾಯಗೊಂಡು ಆಸ್ಪತ್ರೆಯಲ್ಲಿ ಮೂವರ ಪೈಕಿ ಓರ್ವ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ.

ವಿಜಯಪುರ ತಾಲೂಕಿನ ಅಲಿಯಾಬಾದ್ ಕಲ್ಲು ಕ್ರಷರ್ ಘಟಕದ ಬಳಿ ಘಟನೆ ನಡೆದಿದ್ದು ಸಾವಳಗಿ ಕಲ್ಲು ಕ್ರಷರ್ ಘಟಕದಲ್ಲಿನ ಕಲ್ಲಿನ ಕಣಿಯಲ್ಲಿ ಬ್ಲಾಸ್ಟ್ ಮಾಡಲಾಗಿದೆ. ಮೂವರು ಗಾಯಾಳುಗಳನ್ನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಈ ವೇಳೆ ಮೋಹನ್ ನಾಯ್ಕ್ (45) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಗಿರೀಶ್ ಹಳ್ಳಿ ಹಾಗೂ ಸಚಿನ್ ಹಳ್ಳಿ ಗಾಯಗೊಂಡಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ.. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ರಾತ್ರಿ ವೇಳೆ ಬ್ಲಾಸ್ಟ್ ಮಾಡುವ ಬದಲು ಹಗಲಿನಲ್ಲಿಯೇ ಬ್ಲಾಸ್ಟ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಸಾವಳಗಿ ಕ್ರಷರ್ ಘಟಕದವರು ಕಲ್ಲು ತೆಗೆಯಲು ಬ್ಲಾಸ್ಟ್ ಮಾಡಿದ್ದು.. ಅಕ್ಕಪಕ್ಕದ ಕ್ರಷರ್ ಘಟಕದವರು ಈಗಾಗಲೇ ಬ್ಲಾಸ್ಟ್ ಬೇಡ ಅಂದರೂ ಬ್ಲಾಸ್ಟ್ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಘಟನೆ ಬಳಿಕ ಸಾವಳಗಿ‌ ಕ್ರಷರ್ ಘಟಕದಲ್ಲಿದ್ದವರು ಪರಾರಿಯಾಗಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿ ಮೃತನ ಸಂಬಂಧಿಕರು ಜಮಾಯಿಸಿದ್ದು ಕುಟುಂಬಸ್ಥರ ರೋಧನ ಮುಗಿಲು ಮುಟ್ಟುವಂತಿದೆ. ಸಾವಳಗಿ ಕ್ರಷರ್ ಘಟಕದ ಮಾಲೀಕರ ಮೇಲೆ ಸೂಕ್ತ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ಕ್ರಷರ್ ಘಟಕದಲ್ಲಿ ಹಗಲಿನಲ್ಲೇ ಬ್ಲಾಸ್ಟ್: ಕಲ್ಲುಬಡಿದು ಓರ್ವ ಸಾವು, ಇಬ್ಬರ ಸ್ಥಿತಿ ಚಿಂತಾಜನಕ appeared first on News First Kannada.

Source: newsfirstlive.com

Source link