ಬೆಳೆ ಕಳೆದುಕೊಂಡ ರೈತನನ್ನ ಖುದ್ದು ಭೇಟಿಯಾಗಿ ₹20ಸಾವಿರ ಹಣ ನೀಡಿದ ಹೆಚ್​ಡಿಕೆ

ಬೆಳೆ ಕಳೆದುಕೊಂಡ ರೈತನನ್ನ ಖುದ್ದು ಭೇಟಿಯಾಗಿ ₹20ಸಾವಿರ ಹಣ ನೀಡಿದ ಹೆಚ್​ಡಿಕೆ

ಮಂಡ್ಯ: ಭತ್ತದ ಬೆಳೆ‌ ನಾಶದ ಬಗ್ಗೆ ರೈತರೊಬ್ಬರು ಫೇಸ್‌ಬುಕ್‌‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಹಿನ್ನೆಲೆ ಬೆಳೆ ಕಳೆದುಕೊಂಡ ರೈತ ಗೌರಿಶಂಕರ್​ರನ್ನ ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ ಭೇಟಿಯಾಗಿದ್ದಾರೆ.

ಮದ್ದೂರು ತಾಲ್ಲೂಕಿನ ಬೊಮ್ಮಸಮುದ್ರದ ರೈತ ಗೌರಿಶಂಕರ್‌ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳೆ ಕಟಾವು ಮಾಡಲಾಗಿತ್ತು. ಕೆರೆ ಕೋಡಿ ಒಡೆದು ಕೋಯ್ಲು ಮಾಡಿದ್ದ ಬೆಳೆ ಸಂಪೂರ್ಣ ಜಲಾವೃತವಾಗಿತ್ತು. ಈ ಕುರಿತು ರೈತ ಗೌರಿಶಂಕರ್ ಬೆಳೆಯನ್ನ ವಿಡಿಯೋ ಮಾಡಿ ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ್ದರು. ಇದನ್ನ ಗಮನಿಸಿದ ಕುಮಾರಸ್ವಾಮಿ ಇಂದು ಅವರನ್ನ ಭೇಟಿ‌ ಮಾಡಿ ಅವ್ರಿಗೆ  20 ಸಾವಿರ ಪರಿಹಾರ ನೀಡಿ ರೈತನಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.

The post ಬೆಳೆ ಕಳೆದುಕೊಂಡ ರೈತನನ್ನ ಖುದ್ದು ಭೇಟಿಯಾಗಿ ₹20ಸಾವಿರ ಹಣ ನೀಡಿದ ಹೆಚ್​ಡಿಕೆ appeared first on News First Kannada.

Source: newsfirstlive.com

Source link