ಎಚ್ಚರಿಕೆ: ನಾಳೆಯಿಂದ 3-4 ದಿನ ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ

ಎಚ್ಚರಿಕೆ: ನಾಳೆಯಿಂದ 3-4 ದಿನ ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ

ಬೆಂಗಳೂರು: ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್ ಪಾಟೀಲ್ ಜುಲೈ 8 ರಿಂದ 12ರವರೆಗೆ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದಾರೆ.

ಜುಲೈ 11ರಂದು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಗಳಿದ್ದು ಪರಿಣಾಮ ಕರಾವಳಿ, ದಕ್ಷಿಣ ಹಾಗೂ ಉತ್ತರ ಕರ್ನಾಟಕ ಒಳನಾಡು ಪ್ರದೇಶಗಳಲ್ಲಿ ಮಳೆಯಾಗುವ ಮೂನ್ಸೂಚನೆಯಿದ್ದು ಕರಾವಳಿ ಭಾಗದಲ್ಲಿ ಜುಲೈ 8 ರಂದು ಯೆಲ್ಲೋ ಅಲರ್ಟ್​, ಜುಲೈ 9 ರಿಂದ 12 ರವರೆಗೆ ಆರೇಂಜ್​ ಅಲರ್ಟ್​ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಕೂಡ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು ಅಲ್ಲಿ ಕೂಡ ಜುಲೈ 11 ಮತ್ತು 12 ರಂದು ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ, ಇನ್ನು ಬೆಂಗಳೂರಿನಾದ್ಯಂತ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಗಳಿದ್ದು ಅಲರ್ಟ್​ ಆಗಿರುವಂತೆ ಸೂಚಿಸಿದೆ.

The post ಎಚ್ಚರಿಕೆ: ನಾಳೆಯಿಂದ 3-4 ದಿನ ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ appeared first on News First Kannada.

Source: newsfirstlive.com

Source link