KRS ಡ್ಯಾಂ ಬಗ್ಗೆ ಮಾತಾಡ್ತಿರೋರೆಲ್ಲ ದೊಡ್ಡವರು -ಡಿ.ಕೆ. ಶಿವಕುಮಾರ್

KRS ಡ್ಯಾಂ ಬಗ್ಗೆ ಮಾತಾಡ್ತಿರೋರೆಲ್ಲ ದೊಡ್ಡವರು -ಡಿ.ಕೆ. ಶಿವಕುಮಾರ್

ತುಮಕೂರು: ಮಾಜಿ ಮುಖ್ಯಮಂತ್ರಿ ಎಚ್​​.ಡಿ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ನಡುವಿನ ಶೀತಲ ಸಮರವೀಗ ತಾರಕಕ್ಕೇರಿದೆ. ಇಬ್ಬರ ಮಧ್ಯೆಯ ಕಾಳಗದ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗಲೇ ಈ ವಿಚಾರವಾಗಿ ಮಾಧ್ಯಮಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಪ್ರತಿಕ್ರಿಯಿಸಿದ್ದಾರೆ.

ಇಂದು ಕುಣಿಗಲ್​​ನಲ್ಲಿ ಮಾತಾಡಿದ ಡಿ.ಕೆ. ಶಿವಕುಮಾರ್​​​, ಸುಮಲತಾ ಮತ್ತು ಎಚ್​​ಡಿಕೆ ನಡುವೆ ಕಿತ್ತಾಟದ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಇಬ್ಬರು ತಮಗೆ ಬೇಕಾದ ವಾದಗಳನ್ನು ಮುಂದುವರೆಸಿದ್ದಾರೆ. ಇದರ ಬಗ್ಗೆ ನಾನು ಹೇಳುವುದೇನಿಲ್ಲ ಎಂದರು.

ಇನ್ನು, ಕೆಆರ್​​ಎಸ್​​ ಜಲಾಶಯ ಬಿರುಕು ಬಿಟ್ಟ ವಿಚಾರದ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಲಿ. ಸರ್ಕಾರ ಅಧಿಕಾರಿಗಳಿಗೆ ಸಂಬಳ ನೀಡುತ್ತಿರುವಾಗ ನಾವ್ಯಾಕೆ ಕಿತ್ತಾಡಬೇಕು. ನನಗೆ ಜಲಾಶಯದ ಸ್ಥಿತಿಗತಿ ಕುರಿತು ಏನೂ ಗೊತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ‘ಅಂಬರೀಶ್​​ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗೆ ಇಲ್ಲ’

ಡ್ಯಾಂ ಸ್ಥಿತಿಗತಿ ಬಗ್ಗೆ ಪ್ರತೀ ವರ್ಷ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಜಲಾಶಯ ನೋಡಿಕೊಳ್ಳುವ ಸಲುವಾಗಿಯೇ ಸರ್ಕಾರ ಅಧಿಕಾರಿಗಳನ್ನು ನೇಮಿಸಿದೆ. ಕೆಆರ್​ಎಸ್​ ಡ್ಯಾಂಗೂ ರಾಜಕೀಯ ವ್ಯಕ್ತಿಗಳಿಗೂ ಏನ್​ ಸಂಬಂಧ? ಇದರ ಬಗ್ಗೆ ಮಾತಾಡುತ್ತಿರುವ ಎಲ್ಲರೂ ದೊಡ್ಡವರು. ಹೀಗಾಗಿ ನಾನೇನು ಮಾತಾಡಲ್ಲ ಎಂದು ನುಣುಚಿಕೊಂಡರು.

The post KRS ಡ್ಯಾಂ ಬಗ್ಗೆ ಮಾತಾಡ್ತಿರೋರೆಲ್ಲ ದೊಡ್ಡವರು -ಡಿ.ಕೆ. ಶಿವಕುಮಾರ್ appeared first on News First Kannada.

Source: newsfirstlive.com

Source link