ಅಗ್ರಜನಿಗೆ ಪುನೀತ್ ಡೈರೆಕ್ಟರ್ ಆ್ಯಕ್ಷನ್ ಕಟ್? ಜಗ್ಗೇಶ್​​​ಗೆ ಕತೆ ರೆಡಿ ಮಾಡಿದ್ರಾ ಸಂತೋಷ್ ಆನಂದ್​ರಾಮ್?

ಅಗ್ರಜನಿಗೆ ಪುನೀತ್ ಡೈರೆಕ್ಟರ್ ಆ್ಯಕ್ಷನ್ ಕಟ್? ಜಗ್ಗೇಶ್​​​ಗೆ ಕತೆ ರೆಡಿ ಮಾಡಿದ್ರಾ ಸಂತೋಷ್ ಆನಂದ್​ರಾಮ್?

ಸ್ಯಾಂಡಲ್​ವುಡ್ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಯುವರತ್ನ ಸಿನಿಮಾದ ನಂತರ ನೆಕ್ಸ್ಟ್ ಯಾವ ಸಿನಿಮಾವನ್ನ ಯಾರ ಜೊತೆ ಮಾಡ್ತಾರೆ ಅನ್ನೋ ಕುತೂಹಲ ಎಲ್ಲರಲ್ಲಿತ್ತು. ಅವರೇ ಹೇಳ್ದಂಗೆ ಪುನೀತ್ ರಾಜ್ ಕುಮಾರ್ ಅವರ ಜೊತೆ ಮೂರನೇ ಬಾರಿಗೆ ಹೊಂಬಾಳೆ ಫಿಲಂಸ್​ನಲ್ಲಿ ಸಿನಿಮಾ ಮಾಡ್ತಾರೆ ಎಂದಾಗಿತ್ತು. ಆದ್ರೆ ವಿಷಯ ಬೇರೆನೇ ಇದೆ ಹಾಗಾದ್ರೆ ಏನ್​ ಆ ವಿಷಯ ಅಂತೀರಾ ಈ ಸ್ಟೋರಿ ನೋಡಿ.

‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’, ‘ರಾಜಕುಮಾರ’ ಹಾಗೂ ಯುವರತ್ನ ನಂತ ಬ್ಯಾಕ್​ ಟು ಬ್ಯಾಕ್​ ಬ್ಲಾಕ್​ ಬಸ್ಟರ್​ ಸಿನಿಮಾ ನೀಡಿದ ಸಂತೋಷ್ ಆನಂದ್ ರಾಮ್, ರೈಟರ್ ಆಗಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಅಸೋಸಿಯೆಟ್ ಡೈರೆಕ್ಟರ್ ಆಗಿ ದುಡಿದು ಡೈರೆಕ್ಟರ್ ಪಟ್ಟಕ್ಕೇ ಏರಿದವರು. ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಮೊದಲ ಸಿನಿಮಾದಲ್ಲೇ ಸಕ್ಸಸ್ ಎಂಬ ಜಾಕ್​ಪಾಟ್​ ಹೊಡೆದವರು.

blank

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ರಾಜಕುಮಾರ ಮತ್ತು ಯುವರತ್ನ ಸಿನಿಮಾಗಳನ್ನ ಮಾಡಿ ಗೆದ್ದಿರುವ ಸಂತೋಷ್ ಆನಂದ್ ರಾಮ್ ಮುಂದೇನು ಮಾಡ್ತಾರೆ ಅನ್ನೊ ಪ್ರಶ್ನೆಗೆ ಅವರಿಂದಲೇ ಈ ಹಿಂದೆ ಉತ್ತರ ಕೂಡ ಸಿಕ್ಕಿತ್ತು.‘‘ಮೂರನೇ ಬಾರಿಗೆ ಹೊಂಬಾಳೆ ಫಿಲಂಸ್​ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕತ್ವದಲ್ಲಿ ಸಿನಿಮಾ ಮಾಡ್ತಿವಿ’’ ಎಂದು ಹೇಳಲಾಗಿತ್ತು.

ಆದ್ರೆ ಇಲ್ಲಿಯ ವರೆಗೆ ಸಿನಿಮಾದ ಬಗ್ಗೆ ಚಿಕ್ಕ ಸುಳಿವು ಕೂಡ ಹೊರ ಬಂದಿರಲಿಲ್ಲ. ಸಂತೋಷ್ ಆನಂದ್ ರಾಮ್ ಸಿನಿಮಾ ಒಂದರ ಸ್ಕ್ರೀಪ್ಟ್ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಅನ್ನೋ ಸುದ್ದಿ ಮಾತ್ರ ಕನ್ಫರ್ಮ ಆಗಿತ್ತು. ಆದ್ರೆ ಯಾರಿಗೆ ಸಂತೋಷ್ ದಿಗ್ಧರ್ಶನ ಅನ್ನೋದೇ ಸಸ್ಪೆನ್ಸ್ ಆಗಿತ್ತು. ಆದ್ರೆ ಈಗ ಒಂದು ಸೂಪರ್ ಸುಳಿವು ಚಿತ್ರಪ್ರೇಮಿಗಳಿಗೆ ಲಭ್ಯವಾಗಿದೆ..

ಮೊಟ್ಟ ಮೊದಲು ಸಂತೋಷ್ ಆನಂದ್ ರಾಮ್ ಕೆಲಸ ಮಾಡಿದ್ದು ಯಾವ ಚಿತ್ರಕ್ಕೆ ಅನ್ನೊ ಪ್ರಶ್ನೆಗೆ ನೀವು ಕೊಡಬಹುದಾದ ಉತ್ತರ ಯಶ್ ಅವರ ‘ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ’ ಆದ್ರೆ ನಿಮ್ಮ ಊಹೆಯ ಉತ್ತರ ತಪ್ಪು. ಸಂತೋಷ್ ಆನಂದ್ ರಾಮ್​ ಮೊಟ್ಟ ಮೊದಲು ಕೆಲಸ ಮಾಡಿದ್ದು ನವರಸ ನಾಯಕ ಜಗ್ಗೇಶ್ ಅಭಿನಯದ ಅಗ್ರಜ ಚಿತ್ರದಲ್ಲಿ. ಅಗ್ರಜ ಅನ್ನೋ ಸಿನಿಮಾದಲ್ಲಿ ಡೈರೆಕ್ಷನ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡಿದ್ದಾರೆ ಸಂತೋಷ್. ಈಗ ಬಂದಿರೋ ಸಿನಿ ರಹಸ್ಯ ಮಾಹಿತಿಯ ಪ್ರಕಾರ ಸಂತೋಷ್ ಆನಂದ್ ರಾಮ್ ಅವರ ಮುಂದಿನ ಸಿನಿಮಾ ಹೊಂಬಾಳೆ ಫಿಲಂಸ್​ನ ಜೊತೆ ಆದ್ರೆ ಹೀರೋ ಪುನೀತ್ ರಾಜ್ ಕುಮಾರ್ ಅಲ್ಲ, ಮತ್ಯಾರು ಅನ್ನೋ ಫ್ಯೂಚರ್ ಪ್ರಶ್ನೆಗೆ ಪ್ರಸೆಂಟ್ ಉತ್ತರ ನವರಸ ನಾಯಕ ಜಗ್ಗೇಶ್.

ಜಗ್ಗೇಶ್ ಚಿತ್ರಕ್ಕೆ ಸಾರಥಿಯಾಗ್ತಾರಾ ಸಂತೋಷ್..?

ಯೇಸ್​ ಹೀಗೊಂದು ಸುದ್ದಿ ಗಾಂಧಿನಗರದ ಗೂಡಿನಲ್ಲಿದೆ ಸಂತೋಷ್ ಆನಂದ್ ರಾಮ್ ಸದ್ದಿಲ್ಲದೆ ಹೊಸ ಸ್ಕ್ರೀಪ್ಟ್ ಕಾರ್ಯದಲ್ಲಿದ್ದಾರೆ, ಅದು ಜಗ್ಗೇಶ್ ಅವರ ಮುಂದಿನ ಸಿನಿಮಾಕ್ಕಾಗಿ ಎನ್ನುತ್ತಿದೆ ನಮ್ಮ ಸುದ್ದಿಯ ಮೂಲ. ಸಂತೋಷ್ ಆನಂದ್ ರಾಮ್ ಅವರ ಸಿನಿಮಾಗಳೆಂದ್ರೆ ಜಗ್ಗೇಶ್ ಅವರಿಗೆ ಎಲ್ಲಿಲ್ಲದ ಪ್ರೀತಿ. ರಾಜಕುಮಾರ ಚಿತ್ರವನ್ನ ಡಬ್ಬಿಂಗ್ನಲ್ಲೇ ನೋಡಿದ್ದ ಜಗ್ಗಣ್ಣ ಈ ಸಿನಿಮಾ ಸೂಪರ್ ಹಿಟ್ ಆಗುತ್ತೆ ಅನ್ನೋ ಭವಿಷ್ಯ ನುಡಿದಿದ್ರು. ಫ್ಯಾಮಿಲಿ ಆ್ಯಕ್ಷನ್ ಎಂಟರ್ಟೈನರ್ ಫುಲ್ ಹಾಸ್ಯ ಮಿಶ್ರಿತ ಸಿನಿಮಾವನ್ನ ಒಂದು ಚೈಂಜ್ ಓವರ್ ಆಗಿ ಮಾಡೋಣ ಅನ್ನೋದು ಸಂತೋಷ್ ಆನಂದ್ ರಾಮ್ ಅವರ ಕಲ್ಪನೆಯಾಗಿರಬಹುದು..

ಸಂತೋಷ್ – ಜಗೇಶ್ ಅವರ ಸಿನಿಮಾದ ಬಗ್ಗೆ ಸ್ಕ್ರೀಪ್ಟಿಂಗ್ ಜೋರಾಗಿಯೇ ಆಗುತ್ತಿದೆಯಂತೆ, ಒಟ್ಟಿನಲ್ಲಿ ಸಂತೋಷ್ ಆನಂದ್ ರಾಮ್ ಅವರ ಮುಂದಿನ ಸಿನಿಮಾದ ನಡೆ ನುಡಿ ಸದ್ಯಕ್ಕಂತು ನಿಗೂಢವಾಗಿದೆ. ಹೊಂಬಾಳೆ ಬ್ಯಾನರ್​ನಲ್ಲಿ ಸಂತೋಷ್ ಯಾವ ಹೀರೋ ಜೊತೆ ಸಿನಿಮಾ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕು ಅಷ್ಟೇ.

The post ಅಗ್ರಜನಿಗೆ ಪುನೀತ್ ಡೈರೆಕ್ಟರ್ ಆ್ಯಕ್ಷನ್ ಕಟ್? ಜಗ್ಗೇಶ್​​​ಗೆ ಕತೆ ರೆಡಿ ಮಾಡಿದ್ರಾ ಸಂತೋಷ್ ಆನಂದ್​ರಾಮ್? appeared first on News First Kannada.

Source: newsfirstlive.com

Source link