ಌಕ್ಸಿಡೆಂಟ್​ ಆದ ವ್ಯಕ್ತಿಯನ್ನ ತಮ್ಮದೇ ಕಾರ್​ನಲ್ಲಿ ಆಸ್ಪತ್ರೆಗೆ ಕಳಿಸಿದ ಡಿ.ಕೆ. ಶಿವಕುಮಾರ್

ಌಕ್ಸಿಡೆಂಟ್​ ಆದ ವ್ಯಕ್ತಿಯನ್ನ ತಮ್ಮದೇ ಕಾರ್​ನಲ್ಲಿ ಆಸ್ಪತ್ರೆಗೆ ಕಳಿಸಿದ ಡಿ.ಕೆ. ಶಿವಕುಮಾರ್

ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.

ಇಂದು ಕುಣಿಗಲ್​ಗೆ ಆಗಮಿಸಿದ್ದ ಡಿ.ಕೆ. ಶಿವಕುಮಾರ ತಾಲೂಕಿನ ಚಿಕ್ಕಕೆರೆ ಮಾರ್ಗದಲ್ಲಿ ಪ್ರಯಾಣಿಸುತ್ತಿರುವಾಗ ವ್ಯಕ್ತಿಯೊರ್ವ ಬೈಕ್​ ಅಪಘಾತದಲ್ಲಿ ಗಾಯಗೊಂಡಿದ್ದನ್ನು ಕಂಡು ತಕ್ಷಣವೇ ಕಾರು ನಿಲ್ಲಿಸಿದ್ದಾರೆ. ಕೆಳಗಿಳಿದು ಗಾಯಗೊಂಡ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ ಅವರ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ಌಕ್ಸಿಡೆಂಟ್​ ಆದ ವ್ಯಕ್ತಿಯನ್ನ ತಮ್ಮದೇ ಕಾರ್​ನಲ್ಲಿ ಆಸ್ಪತ್ರೆಗೆ ಕಳಿಸಿದ ಡಿ.ಕೆ. ಶಿವಕುಮಾರ್ appeared first on News First Kannada.

Source: newsfirstlive.com

Source link