ರಾಜ್ಯದಲ್ಲಿ 1.60%ಗೆ ಇಳಿದ ಕೊರೊನಾ ಪಾಸಿಟಿವಿಟಿ ರೇಟ್; 2,530 ಮಂದಿಗೆ ಸೋಂಕು

ರಾಜ್ಯದಲ್ಲಿ 1.60%ಗೆ ಇಳಿದ ಕೊರೊನಾ ಪಾಸಿಟಿವಿಟಿ ರೇಟ್; 2,530 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯಾದ್ಯಂತ ಇಂದು 31,896 ಱಪಿಡ್ ಆ್ಯಂಟಿಜೆನ್ ಟೆಸ್ಟ್​ ಹಾಗೂ 1,25,656 ಆರ್​ಟಿಪಿಸಿಆರ್​ ಟೆಸ್ಟ್​ಗಳು ಸೇರಿದಂತೆ 1,57,552 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು 2,530 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 28,64,868ಕ್ಕೆ ಏರಿಕೆಯಾಗಿದೆ.

ಇಂದು 3,344 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.. ಈವರೆಗೆ ಒಟ್ಟು 27,90,453 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಸೋಂಕಿನಿಂದಾಗಿ 62 ಮಂದಿ ಸಾವನ್ನಪ್ಪಿದ್ದು ಈವರೆಗೆ ಒಟ್ಟು 35,663 ಮಂದಿ ಕೊರೊನಾಗೆ ಬಲಿಯಾದಂತಾಗಿದೆ. ಸದ್ಯ ರಾಜ್ಯದಲ್ಲಿ 38,729 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳುತ್ತಿವೆ

The post ರಾಜ್ಯದಲ್ಲಿ 1.60%ಗೆ ಇಳಿದ ಕೊರೊನಾ ಪಾಸಿಟಿವಿಟಿ ರೇಟ್; 2,530 ಮಂದಿಗೆ ಸೋಂಕು appeared first on News First Kannada.

Source: newsfirstlive.com

Source link