ಹೆಂಗವ್ರೆ ನೋಡಿ ಹೊಸ ಪೊಲೀಸ್ ಜಾಕ್ವೆಲಿನ್..? ಆದ್ರೆ ಮನುಷ್ಯರಿಗೆ ಅಲ್ಲ ಕಣ್ರಿ..!

ಹೆಂಗವ್ರೆ ನೋಡಿ ಹೊಸ ಪೊಲೀಸ್ ಜಾಕ್ವೆಲಿನ್..? ಆದ್ರೆ ಮನುಷ್ಯರಿಗೆ ಅಲ್ಲ ಕಣ್ರಿ..!

ನಟ ಸೈಫ್ ಅಲಿಖಾನ್ ಮತ್ತು ಅರ್ಜುನ್​ ಕಪೂರ್ ಅವರ ಬಹುನಿರೀಕ್ಷಿತ ಚಿತ್ರ ಭೂತ್​​ ಪೊಲೀಸ್ ಸಿನಿಮಾದಲ್ಲಿ ಬಿಟೌನ್​​ ಬೆಡಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್​ ಕಾಣಿಸಿಕೊಳ್ಳುತ್ತಿದ್ದಾರೆ. ಭೂತ್​​ ಪೊಲೀಸ್ ಹಾರರ್​ ಸಿನಿಮಾ ಆಗಿದ್ದು, ಜಾಕ್ವೆಲಿನ್ ಫರ್ನಾಂಡಿಸ್ ಗೋಸ್ಟ್​ ಬಸ್ಟರ್​​ ಪಾತ್ರದಲ್ಲಿ ನಟಿಸುತ್ತಿದ್ದಾರೆ.

blank

ಇನ್ನು, ಭೂತ್​ ಪೊಲೀಸ್​​​ ಸಿನಿಮಾದಲ್ಲಿ ಕನಿಕಾ ದೆವ್ವದ ಪಾತ್ರ ಮಾಡುತ್ತಿರುವ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್​ ಲುಕ್​ ರಿಲೀಸ್​​ ಆಗಿದೆ. ರಾಡ್​ ಈಸ್​​ ದಿ ಲಾಜಿಕ್​ ಆಫ್​ ಫೂಲ್ಸ್ ಎಂಬ ನಾನ್ನುಡಿ ಜಾಕ್ವೆಲಿನ್​​​ ಪಾತ್ರವನ್ನು ವಿವರಿಸುತ್ತದೆ.

ಜಾಕ್ವೆಲಿನ್ ಫರ್ನಾಂಡಿಸ್, ಅರ್ಜುನ್​ ಕಪೂರ್​​, ಸೈಫ್​​ ಅಲಿಖಾನ್​​ ಜೊತೆಗೆ ಯಾಮಿ ಗೌತಮ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪವನ್ ಕಿರ್ಪಲಾನಿ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

blank

ಧರ್ಮಶಾಲಾ, ಪಾಲಂಪುರ ಮತ್ತು ಡಾಲ್ಹೌಸಿಯಲ್ಲಿ ಭೂತ್​​ ಪೊಲೀಸ್​ ಚಿತ್ರೀಕರಣ ನಡೆಯಲಿದೆ. ಈ ಚಿತ್ರವೂ ಕಾಮಿಡಿ ಅಂಡ್​​ ಹಾರರ್​​ ಸಿನಿಮಾವಾಗಿದ್ದು, ಅಭಿಮಾನಿಗಳಿಗೆ ವಿಭಿನ್ನ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

The post ಹೆಂಗವ್ರೆ ನೋಡಿ ಹೊಸ ಪೊಲೀಸ್ ಜಾಕ್ವೆಲಿನ್..? ಆದ್ರೆ ಮನುಷ್ಯರಿಗೆ ಅಲ್ಲ ಕಣ್ರಿ..! appeared first on News First Kannada.

Source: newsfirstlive.com

Source link