ಕೇಂದ್ರ ಸಂಪುಟದಲ್ಲಿ ರಾಜ್ಯ ನಾಯಕರು: ಪೂಜೆ ನಡೆಸಿ ಅಧಿಕಾರ ಸ್ವೀಕರಿಸಿದ ಶೋಭಾ ಕರಂದ್ಲಾಜೆ

ಕೇಂದ್ರ ಸಂಪುಟದಲ್ಲಿ ರಾಜ್ಯ ನಾಯಕರು: ಪೂಜೆ ನಡೆಸಿ ಅಧಿಕಾರ ಸ್ವೀಕರಿಸಿದ ಶೋಭಾ ಕರಂದ್ಲಾಜೆ

ನವದೆಹಲಿ: ನೂತನ ಸಚಿವ ಸಂಪುಟ ಸೇರಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ಇಂದು ದೆಹಲಿಯ ತಮ್ಮ ಕಚೇರಿಯಲ್ಲಿ ಪೂಜೆ ಕೈಗೊಂಡರು. ನೂತನ ಕೇಂದ್ರ ಸಚಿವರಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ಅವರು ಇಂದು ತಮ್ಮ ನೂತನ ಕಚೇರಿಯಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಿ ಕಚೇರಿಯ ಕಾರ್ಯಾರಂಭ ಮಾಡಿದ್ದಾರೆ. ಈ ಪೂಜಾ ಕಾರ್ಯದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬಿಜೆಪಿ ನಾಯಕ ಸಿ. ಟಿ ರವಿ ಸೇರಿದಂತೆ ಸಚಿವರ ಕುಟುಂಬಸ್ಥರು ಭಾಗಿಯಾಗಿ ಸಚಿವರಿಗೆ ಶುಭ ಕೋರಿದ್ದಾರೆ. blank

ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಭಗವಂತ ಖೂಬಾ  ಇಂದು ದೆಹಲಿಯ ಶಾಸ್ತ್ರೀ ಭವನದಲ್ಲಿರುವ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದರು. ಒಂದೆರಡು ದಿನದಲ್ಲಿ ಖಾತೆಯ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ, ಮೋದಿಯವರು ನನಗೆ ಆದರ್ಶ ವ್ಯಕ್ತಿಯಾಗಿದ್ದು ಅವರ ಮಾರ್ಗದರ್ಶನ ಪಡೆದು ಅವರಂತೆಯೇ ಪ್ರಮಾಣಿಕ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಬಿಜೆಪಿ ನಾಯಕ ಸಿ.ಟಿ ರವಿ ಭಾಗಿಯಾಗಿ ನೂತನ ಸಚಿವರಿಗೆ ಶುಭ ಕೋರಿದ್ದಾರೆ.

blank

ಕೇಂದ್ರದ ನೂತನ ಕೌಶಲ್ಯಾಭಿವೃದ್ಧಿ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ಕೂಡ ಇಂದು ತಮ್ಮ ಕಚೇರಿಯ ಕಾರ್ಯಾರಂಭ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರ ಕುಟುಂಬ ಸದಸ್ಯರು, ಪಕ್ಷದ ನಾಯಕರು ಭಾಗವಹಿಸಿ ನೂತನ ಸಚಿವರಿಗೆ ಶುಭ ಕೋರಿದ್ದಾರೆ.

blankನೂತನ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಚಿವರಾದ ಎ. ನಾರಾಯಣಸ್ವಾಮಿ ಅವರು ಕೂಡ ಇಂದು ತಮ್ಮ ಕಚೇರಿಯಲ್ಲಿ ಸರಳವಾಗಿ ಪೂಜೆ ಸಲ್ಲಿಸುವ ಮೂಲಕ ಕಚೇರಿಯ ಕಾರ್ಯಾರಂಭ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಚಿವರ ಕುಟುಂಬ ಸದಸ್ಯರು, ಪಕ್ಷದ ನಾಯಕರು ಭಾಗವಹಿಸಿ ಸಚಿವರಿಗೆ ಶುಭ ಕೋರಿದ್ದಾರೆ.

blank

The post ಕೇಂದ್ರ ಸಂಪುಟದಲ್ಲಿ ರಾಜ್ಯ ನಾಯಕರು: ಪೂಜೆ ನಡೆಸಿ ಅಧಿಕಾರ ಸ್ವೀಕರಿಸಿದ ಶೋಭಾ ಕರಂದ್ಲಾಜೆ appeared first on News First Kannada.

Source: newsfirstlive.com

Source link