‘ರಾಬರ್ಟ್’ ಹೀರೋಯಿನ್ ಸಾಹಸದ ರಹಸ್ಯವೇನು..?

‘ರಾಬರ್ಟ್’ ಹೀರೋಯಿನ್ ಸಾಹಸದ ರಹಸ್ಯವೇನು..?

ರಾಬರ್ಟ್ ಸಿನಿಮಾದ ರಂಗಿನ್ ಬೆಡಗಿ ಆಶಾ ಭಟ್. ರಾಬರ್ಟ್ ಸಿನಿಮಾದ ನಂತರ ಏನ್ ಮಾಡ್ತಿದ್ದಾರೆ ಅನ್ನೋ ಸುಗಂಧ, ಸುಳಿವು ಏನು ಸಿಕ್ಕಿಲ್ಲ. ರಾಬರ್ಟ್ ಚಿತ್ರದ ವಿಶ್ವನಾಥ್ ಭಟ್ರ ಮಗಳು ಅಮೃತಾ ಕಿಕ್ ಬಾಕ್ಸ್ಸಿಂಗ್ ಮಾಡ್ತೌವ್ರೇ.. ಅರೇ ಅದ್ಯಾಕೆ..? ಹೊಸ ಆ್ಯಕ್ಷನ್ ಪಿಕ್ಚರ್ ಏನಾದ್ರು ಮಾಡ್ತಿದ್ದಾರಾ..? ಏನ್ ಸಮಾಚಾರ ಅನ್ನೋದನ್ನ ತಿಳ್ಕೊಂಡು ಬರೋಣ ಬನ್ನಿ..

blank

ಮಿಸ್ ಸುಪ್ರಾನ್ಯಾಷನಲ್, ಉಕ್ಕಿನ ನಗರಿ ಭದ್ರಾವತಿಯ ಹಲ್ ಚೆಲ್, ಆಶಾ ಭಟ್ ರಾಬರ್ಟ್​​ನಲ್ಲಿ ಮಿಂಚಿದ್ದೋ ಮಿಂಚಿದ್ದು.. ಆಮೇಲೆ ಸುಳಿವೇ ಇಲ್ಲ.. ಸೋಶಿಯಲ್ ಸಮುದ್ರಲ್ಲಿ ಬಿಟ್ರೇ ಆಶಾ ಸುಂದ್ರಿಯ ದರ್ಶನ ಯಾವುದೇ ಸಿನಿಮಾ ಸೆಟ್ನಲ್ಲಿ ಆಗಿಲ್ಲ. ಯಾವುದೇ ಸಿನಿಮಾದಲ್ಲಿ ಆಶಾ ಭಟ್ ಸದ್ಯಕ್ಕೆ ಕಂಡು ಕಂಗೊಳಿಸಿಲ್ಲ ನಿಜ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಕಿಕ್ ಬಾಕ್ಸ್ಸಿಂಗ್ ವೀಡಿಯೋ ಮೂಲಕ ವೈರಲ್ ವೈಯಾರಿಯಾಗಿ ಮಿನುಗುತ್ತಿದ್ದಾರೆ.

blank

‘ರಾಬರ್ಟ್’ ನಟಿಯನ್ನ ಕೆಣಕಿದ್ರೆ ಅವ್ರ ಕಥೆ ಮುಗಿತ್!
ಅರೇ ಇದ್ಯಾಕೆ ಕೋಮಲವಾದ ಕೈಗಳಲ್ಲಿ ಬಾಕ್ಸಾರ್ ಗ್ಲೌಸ್ ಹಾಕೊಂಡು ಕಿಕ್ ಮೇಲ್ ಕಿಕ್ ಕೊಡ್ತಿದ್ದಾರೆ ಅಂತ ಯೋಚಿಸಿದಾಗ ಥಟ್ ಅಂತ ಹೋಳೆಯೋ ಉತ್ತರ.. ಆಶಾ ಭಟ್ ಮಾರ್ಷಲ್ ಆರ್ಟ್​ನ ಹಿಂದೆ ಯಾವುದಾದ್ರು ಹೊಸ ಆ್ಯಕ್ಷನ್ ಸಿನಿಮಾ ಅಡಗಿದ್ಯಾ? ಅಥವಾ ಮಿಂಚೋ ಬಳ್ಳಿಯಂತೆ ಸ್ಲಿಮ್ ಆಂಡ್ ಫಿಟ್ ಆಗಿರೋದಕ್ಕೇನಾದ್ರು ಮಾರ್ಷಲ್ ಆರ್ಟ್ ಮೊರೆ ಹೋಗಿದ್ದಾರಾ? ಅನ್ನೊ ಕ್ಯೂಟ್ ಕ್ವಶ್ಚನ್ ಮೂಡೋದು ಸಹಜ.

blank

ಆಶಾ ಭಟ್ ಮಾರ್ಷಲ್ ಆರ್ಟ್ಸ್ ನ ಹಿಂದಿರೋ ಸೀಕ್ರೆಟ್ ಬೇರನೇ ಇದೆ. ಫಿಟ್ ಆಂಡ್ ಫೈನ್ ಆಗಿ ಫಿಗರ್ ಮೇನ್ಟೈನ್ ಮಾಡೋದಕ್ಕೆ ಮಾರ್ಷಲ್ ಆರ್ಟ್ ಅನ್ನ ಆಶಾ ಕಲಿತಿರೋದು ನಿಜ. ಆದ್ರೆ ಮತ್ತೊಂದು ಮಹತ್ತರ ಉದ್ದೇಶಕ್ಕಾಗಿ ಆಶಾ ಮಾರ್ಷಲ್ ಆರ್ಟ್ ಮೊರೆ ಹೋಗಿದ್ದಾರೆ. ಅದೇನಪ್ಪ ಅಂದ್ರೆ ಅಸ್ತ್ರ ಫೌಂಡೇಷನ್ ಎಂಬುವ ಫೌಂಡೇಷನ್ ಒಂದನ್ನ ನಡೆಸುತ್ತಿದ್ದಾರೆ. ಬಡ ಹೆಣ್ಣು ಮಕ್ಕಳಿಗೆ ಸೆಲ್ಫಿ ಡಿಫೆನ್ಸ್ ಬಗ್ಗೆ , ಹೆಣ್ಣು ಮಕ್ಕಳ ಶಿಕ್ಷಣ ಏಳಿಗೆಯ ಬದುಕಿನ ಬಗ್ಗೆ ಅಸ್ತ್ರ ಫೌಂಡೇಷನ್ ವತಿಯಿಂದ ರಾಬರ್ಟ್ ಹೀರೋಯಿನ್ ಕೆಲಸ ಮಾಡ್ತಿದ್ದಾರೆ. ಈ ಕಾರಣಕ್ಕೆ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗಾಗಿ ಮಾರ್ಷಲ್ ಆರ್ಟ್ ಕಲೆಯನ್ನ ಹೇಳಿಕೊಡು ಸಲುವಾಗಿ ಮಾರ್ಷಲ್ ಆರ್ಟ್ ಕಲೀತಿದ್ದಾರೆ ಈ ಭದ್ರಾವತಿ ಬ್ಯೂಟಿ.

ಸದ್ಯಕ್ಕಂತೂ ಯಾವ ಸಿನಿಮಾಕ್ಕೂ ಕಮಿಟ್ ಆದಂಗೆ ಕಾಣುತ್ತಿಲ್ಲ ಆಶಾ ಭಟ್. ಆದ್ರೆ ಒಂದೊಳ್ಳೆ ಕಥೆಗಾಗಿ ಕಂಟೆಂಟ್ ಫಿಲ್ಮ್ ಗಾಗಿ ಆಶಾ ಸುಂದ್ರಿ ಕಾದಿರೋದಂತು ನಿಜ.

The post ‘ರಾಬರ್ಟ್’ ಹೀರೋಯಿನ್ ಸಾಹಸದ ರಹಸ್ಯವೇನು..? appeared first on News First Kannada.

Source: newsfirstlive.com

Source link