ಎರಡು ಬೈಕ್​ಗಳ ನಡುವೆ ಮುಖಾಮುಖಿ; ಇಬ್ಬರು ಸವಾರರು ದುರ್ಮರಣ

ಎರಡು ಬೈಕ್​ಗಳ ನಡುವೆ ಮುಖಾಮುಖಿ; ಇಬ್ಬರು ಸವಾರರು ದುರ್ಮರಣ

ವಿಜಯಪುರ: ಜಿಲ್ಲೆಯಲ್ಲಿ ಎರಡು ಬೈಕ್​​ಗಳು​​ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ನಿಡಗುಂದಿ ಸಮೀಪದ ಬೇನಾಳ ಹತ್ತಿರ ಸಂಭವಿಸಿದ ಈ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಬೈಕ್​​​​ ಸವಾರರು ಸಾವನ್ನಪ್ಪಿದ್ದಾರೆ.

ಇನ್ನು, ಬೈಕ್​​ನ ಹಿಂಬದಿಯಲ್ಲಿ ಕೂತಿದ್ದ ತಾಯಿ ಮಗನಿಗೆ ತೀವ್ರ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನು ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ ವೈದ್ಯರು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅಪಘಾತ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಬೈಕ್​ ಸವಾರರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

The post ಎರಡು ಬೈಕ್​ಗಳ ನಡುವೆ ಮುಖಾಮುಖಿ; ಇಬ್ಬರು ಸವಾರರು ದುರ್ಮರಣ appeared first on News First Kannada.

Source: newsfirstlive.com

Source link