ವಾಹನ ಸವಾರರಿಗೆ ಗುಡ್​​​ನ್ಯೂಸ್: ಇನ್ಮುಂದೆ ದಾಖಲೆಗಳನ್ನ ಜೊತೆಯಲ್ಲಿ ಇರಿಸಿಕೊಳ್ಳಲೇಬೇಕಿಲ್ಲ.. ಆದ್ರೆ..

ವಾಹನ ಸವಾರರಿಗೆ ಗುಡ್​​​ನ್ಯೂಸ್: ಇನ್ಮುಂದೆ ದಾಖಲೆಗಳನ್ನ ಜೊತೆಯಲ್ಲಿ ಇರಿಸಿಕೊಳ್ಳಲೇಬೇಕಿಲ್ಲ.. ಆದ್ರೆ..

ಬೆಂಗಳೂರು: ನಗರದ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಗುಡ್​ನ್ಯೂಸ್ ಕೊಟ್ಟಿದ್ದಾರೆ. ಡಿ ಎಲ್, ಆರ್ ಸಿ, ಇನ್ಸೂರೆನ್ಸ್, ಫಿಟ್ನೆಸ್ ವಾಯುಮಾಲಿನ್ಯ ಪ್ರಮಾಣ ಪತ್ರ.. ಈ ಎಲ್ಲಾ ದಾಖಲೆಗಳನ್ನು ಇನ್ನು ಮುಂದೆ ವಾಹನ ಸವಾರರು ಡಿಜಿ ಲಾಕರ್ ಮತ್ತು ಎಂಪರಿ ವಾಹನ್ ಆ್ಯಪ್​ಗಳ ಮೂಲಕವೂ ತೋರಿಸಬಹುದಾಗಿದೆ.

ಬೆಂಗಳೂರು ಸಂಚಾರ ವಿಭಾಗ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಈ ಕುರಿತು ಮಾಹಿತಿ ನೀಡಿದ್ದು.. ಸಂಚಾರ ಪೊಲೀಸರು, ಆರ್ ಟಿ ಒ ಅಧಿಕಾರಿಗಳ ಪರಿಶೀಲನೆ ವೇಳೆ ವಾಹನ ಸವಾರರು ಡಿಜಿ ಲಾಕರ್ ಮತ್ತು ಎಂಪರಿ ವಾಹನ್ ಆ್ಯಪ್​ಗಳ ಮೂಲಕವೂ ತೋರಿಸಬಹುದಾಗಿದೆ ಎಂದಿದ್ದಾರೆ.

ಭೌತಿಕವಾಗಿ ಕೆಲ ದಾಖಲೆಗಳನ್ನು ವಾಹನ ಸವಾರರು ತೆಗೆದುಕೊಂಡು ಹೋಗಲು ಕಿರಿಕಿರಿಯಾಗಬಹುದು.. ಈ ಹಿನ್ನಲೆ ಎಂಪರಿ ವಾಹನ್ ಅಥವಾ ಡಿಜಿ ಲಾಕರ್ ಆ್ಯಪ್ ಮೂಲಕ ಎಲ್ಲಾ ದಾಖಲೆಗಳನ್ನ ಡೌನ್ ಲೋಡ್ ಮಾಡಿಕೊಳ್ಳಬಹುದು.. ಈ ಆ್ಯಪ್ ಗಳ ಮೂಲಕ ದಾಖಲೆ ತೋರಿಸಿದ್ರೆ ಅಸಲಿ ದಾಖಲೆಗಳನ್ನು ವಾಹನ ಸವಾರರು ತಮ್ಮೊಂದಿಗೆ ಇಟ್ಟುಕೊಳ್ಳುವ ಅಗತ್ಯತೆ ಇರುವುದಿಲ್ಲ.. ವಾಹನ ಸವಾರರು ಡಿಜಿಲಾಕರ್ ಮೂಲಕ ತೋರಿಸುವ ದಾಖಲೆಗಳನ್ನ ಸಂಚಾರ ಪೊಲೀಸರು ಪರಿಶೀಲನೆ ನಡೆಸಬಹುದು.. ಒರಿಜಿನಲ್ ದಾಖಲೆ ಅಥವಾ ಭೌತಿಕ ದಾಖಲೆ ಕಡ್ಡಾಯವಾಗಿ ಬೇಕು ಎಂದು ವಾಹನ ಸವಾರರನ್ನು ಸಂಚಾರ ಪೊಲೀಸರು ಪೀಡಿಸುವಂತಿಲ್ಲ.. ಡಿಜಿ ಲಾಕರ್​ನಲ್ಲಿ ದಾಖಲೆ ತೋರಿಸಿದ್ರೆ ಪರಿಶೀಲನೆ ನಡೆಸಿ ವಾಹನ ಸವಾರರನ್ನ ಬಿಟ್ಟುಕಳಿಸಬಹುದು ಎಂದಿದ್ದಾರೆ..

The post ವಾಹನ ಸವಾರರಿಗೆ ಗುಡ್​​​ನ್ಯೂಸ್: ಇನ್ಮುಂದೆ ದಾಖಲೆಗಳನ್ನ ಜೊತೆಯಲ್ಲಿ ಇರಿಸಿಕೊಳ್ಳಲೇಬೇಕಿಲ್ಲ.. ಆದ್ರೆ.. appeared first on News First Kannada.

Source: newsfirstlive.com

Source link