ಸಾರಿಗೆ ನೌಕರರಿಗೆ ಗುಡ್​ನ್ಯೂಸ್: ನಾಲ್ಕೂ ನಿಗಮಗಳಿಗೆ ಒಟ್ಟು 325 ಕೋಟಿ ಅನುದಾನ ಬಿಡುಗಡೆ

ಸಾರಿಗೆ ನೌಕರರಿಗೆ ಗುಡ್​ನ್ಯೂಸ್: ನಾಲ್ಕೂ ನಿಗಮಗಳಿಗೆ ಒಟ್ಟು 325 ಕೋಟಿ ಅನುದಾನ ಬಿಡುಗಡೆ

ಬೆಂಗಳೂರು: ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ಜೂನ್ ತಿಂಗಳ ವೇತನಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆ. ಮಾಡಲಾಗಿದೆ. ಒಟ್ಟು 16,250 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.

ಏಪ್ರಿಲ್ ಮೇ ತಿಂಗಳು ಹಾಗೂ ಜೂನ್ ಅರ್ಧ ತಿಂಗಳ ವೇತನಕ್ಕಾಗಿ ಹಣ ಬಿಡುಗಡೆ ಮಾಡಲಾಗಿದ್ದು. ಕೆಎಸ್ಆರ್ಟಿಸಿಗೆ 10,176 ಲಕ್ಷ, ಬಿಎಂಟಿಸಿಗೆ 9,862 ಲಕ್ಷ ಬಿಡುಗಡೆ ಮಾಡಲಾಗಿದೆ. ಇನ್ನು ವಾಯುವ್ಯ ಸಾರಿಗೆ ಸಂಸ್ಥೆಗೆ 6,642 ಲಕ್ಷ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 5,820 ಲಕ್ಷ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ನಾಲ್ಕೂ ನಿಗಮಕ್ಕೆ 32,500 ಲಕ್ಷ ( 325 ಕೋಟಿ) ಏಪ್ರಿಲ್, ಮೇ ತಿಂಗಳ ವೇತನಕ್ಕಾಗಿ ಬಿಡುಗಡೆ ಮಾಡಲಾಗಿದೆ. ಹಾಗೇ ಜೂನ್ ತಿಂಗಳ ಅರ್ಧದಷ್ಟು ಸಂಬಳಕ್ಕಾಗಿ 16,250.00 ಲಕ್ಷ ಬಿಡುಗಡೆ ಮಾಡಲಾಗಿದೆ.

ಜೂನ್ ತಿಂಗಳ ವೇತನಕ್ಕಾಗಿ 325 ಕೋಟಿ ಹಣಕ್ಕೆ ನಿಗಮಗಳು ಬೇಡಿಕೆ ಇಟ್ಟಿದ್ದವು. ದ್ಯ ಕೋವಿಡ್ ಹಿನ್ನಲೆ ಆರ್ಥಿಕ ಸಂಕಷ್ಟ ನೆಪವೊಡ್ಡಿ 162 ಕೋಟಿ 50 ಲಕ್ಷ ಮಾತ್ರ ಬಿಡುಗಡೆ. ಹಣದಲ್ಲಿ ಸಿಬ್ಬಂದಿಯ ವೇತನವನ್ನು ಮಾತ್ರ ನೀಡಬೇಕು.. ಇತರೆ ಆರ್ಥಿಕ ಸೌಲಭ್ಯ, ಹಾಗೂ ಭತ್ಯೆಗಳನ್ನ ನೀಡಕೂಡದು ಎಂದು ಎಲ್ಲಾ ನಿಗಮಕ್ಕೂ ಸರ್ಕಾರದಿಂದ ಆದೇಶ ರವಾನೆಯಾಗಿದೆ.

The post ಸಾರಿಗೆ ನೌಕರರಿಗೆ ಗುಡ್​ನ್ಯೂಸ್: ನಾಲ್ಕೂ ನಿಗಮಗಳಿಗೆ ಒಟ್ಟು 325 ಕೋಟಿ ಅನುದಾನ ಬಿಡುಗಡೆ appeared first on News First Kannada.

Source: newsfirstlive.com

Source link