ಮತ್ತೆ ವ್ಯಾಕ್ಸಿನ್ ಕೊರತೆ ಎದುರಾಗುತ್ತಾ? -ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೇಳಿದ್ದೇನು?

ಮತ್ತೆ ವ್ಯಾಕ್ಸಿನ್ ಕೊರತೆ ಎದುರಾಗುತ್ತಾ? -ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೇಳಿದ್ದೇನು?

ನವದೆಹಲಿ: ಜುಲೈ ತಿಂಗಳಲ್ಲಿ 12 ಕೋಟಿಗೂ ಹೆಚ್ಚು ಡೋಸ್​ಗಳ ಲಸಿಕೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗಲಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸದ್ಯ ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ನಡೆಯುತ್ತಿದ್ದು ಲಸಿಕೆಗೆ ಡಿಮ್ಯಾಂಡ್ ಹೆಚ್ಚಾಗಿದೆ. ಆದರೆ  ಅಗತ್ಯವಿರುಷ್ಟು ಡೋಸ್ ಲಸಿಕೆ ಲಭ್ಯವಿಲ್ಲ ಅನ್ನೋ ಆರೋಪಗಳು ದೇಶದ ವಿವಿಧ ಭಾಗಗಳಿಂದ ಕೇಳಿ ಬರ್ತಿದೆ.

ಆದರೆ  ಈ ಆರೋಪವನ್ನ ತಳ್ಳಿ ಹಾಕಿರುವ ಆರೋಗ್ಯ ಸಚಿವಾಲಯ, ರಾಜ್ಯಗಳಿಗೆ ಮೊದಲೇ ಎಷ್ಟು ಲಸಿಕೆಯನ್ನ ನೀಡಲಾಗುತ್ತೆ ಅಂತ ಮಾಹಿತಿಯನ್ನ ಕೊಟ್ಟಿರುತ್ತೇವೆ. ಖಾಸಗಿ ಆಸ್ಪತ್ರೆಗಳಿಗೆ ನೀಡುವ ಲಸಿಕೆ ಪ್ರಮಾಣವೂ ಇದರಲ್ಲಿರುತ್ತೆ ಅಂತ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

The post ಮತ್ತೆ ವ್ಯಾಕ್ಸಿನ್ ಕೊರತೆ ಎದುರಾಗುತ್ತಾ? -ರಾಜ್ಯಗಳಿಗೆ ಕೇಂದ್ರ ಸರ್ಕಾರ ಹೇಳಿದ್ದೇನು? appeared first on News First Kannada.

Source: newsfirstlive.com

Source link