ಶ್ರೀಲಂಕಾ ಬ್ಯಾಟಿಂಗ್ ಕೋಚ್​​ಗೆ ಕೊರೊನಾ; ಭಾರತ-ಲಂಕಾ ಸರಣಿಗೆ ‘ಕೊರೊನಾ ಕಂಟಕ’?

ಶ್ರೀಲಂಕಾ ಬ್ಯಾಟಿಂಗ್ ಕೋಚ್​​ಗೆ ಕೊರೊನಾ; ಭಾರತ-ಲಂಕಾ ಸರಣಿಗೆ ‘ಕೊರೊನಾ ಕಂಟಕ’?

ನವದೆಹಲಿ: ಜುಲೈ 13 ರಿಂದ ನಡೆಯಲಿರೋ ಶ್ರೀಲಂಕಾ- ಭಾರತ ಕ್ರಿಕೆಟ್ ಸರಣಿಗೆ ಕೊರೊನಾ ಕಾಟ ಶುರುವಾಗಿದೆ. ಮೊದಲ ಟಿ-20 ಪಂದ್ಯ ಆರಂಭಕ್ಕೂ 5 ದಿನಗಳ ಮೊದಲೇ ಶ್ರೀಲಂಕಾ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲಾವರ್​ಗೆ ಕೊರೊನಾ ಪಾಸಿಟಿವ್ ಬಂದಿದೆ.

ಇಂಗ್ಲೆಂಡ್ ಸರಣಿ ಮುಗಿಸಿಕೊಂಡು ಬಂದ ಕೋಚ್​​ ಗ್ರ್ಯಾಂಟ್​​​​​​ ಫ್ಲಾವರ್​​ಗೆ ಆರ್​​ಟಿಪಿಸಿಆರ್​ ಟೆಸ್ಟ್​ ವೇಳೆ ಕೊರೊನಾ ಸಿಮ್ಟಮ್ಸ್​ ಇರೋದು ದೃಢಪಟ್ಟಿದೆ. ಸದ್ಯ ಕೊರೊನಾ ಸೋಂಕು ಇರೋದ್ರಿಂದ ಕೋಚ್​ ಗ್ರ್ಯಾಂಟ್ ಕ್ವಾರೆಂಟೀನ್​ಗೆ ಒಳಗಾಗಿದ್ದಾರೆ.. ಶ್ರೀಲಂಕಾ ವಿರುದ್ಧ ಭಾರತ, 3 ಟಿ-20 ಹಾಗೂ 3 ಏಕದಿನ ಸರಣಿ ನಡೆಯಲಿದೆ.

The post ಶ್ರೀಲಂಕಾ ಬ್ಯಾಟಿಂಗ್ ಕೋಚ್​​ಗೆ ಕೊರೊನಾ; ಭಾರತ-ಲಂಕಾ ಸರಣಿಗೆ ‘ಕೊರೊನಾ ಕಂಟಕ’? appeared first on News First Kannada.

Source: newsfirstlive.com

Source link