ಟೋಕಿಯೋದಲ್ಲಿ ಒಲಂಪಿಕ್ಸ್​ ಮುಗಿಯೋವರೆಗೂ ವೈರಸ್ ಎಮರ್ಜೆನ್ಸಿ ಘೋಷಣೆ

ಟೋಕಿಯೋದಲ್ಲಿ ಒಲಂಪಿಕ್ಸ್​ ಮುಗಿಯೋವರೆಗೂ ವೈರಸ್ ಎಮರ್ಜೆನ್ಸಿ ಘೋಷಣೆ

ಟೋಕಿಯೋದಲ್ಲಿ ಮಾರಕ ಕೊರೊನಾ ಆರ್ಭಟ ಮುಂದುವರೆದಿದೆ. ಈ ವೈರಸ್​ ತಡೆಗೆ ಜಪಾನ್​​ ಪ್ರಧಾನಿ ಯೋಶಿಹೈಡ್ ಸುಗಾ ದಿಢೀರ್​​ ಟೋಕಿಯೊದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಮುಂದಿನ ಸೋಮವಾರದಿಂದ ತುರ್ತು ಪರಿಸ್ಥಿತಿ ಜಾರಿಗೆ ಬರಲಿದ್ದು, ಇದು ಆ.​22 ವರೆಗೂ ಇರಲಿದೆ ಎಂದಿದ್ದಾರೆ. ಇದರ ಪರಿಣಾಮ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ 2020ರ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ನೋಡಲು ಪ್ರೇಕ್ಷಕರಿಗೆ ಅವಕಾಶ ಇಲ್ಲದಂತಾಗಿದೆ.

ಹೌದು, ಟೋಕಿಯೊ ಒಲಿಂಪಿಕ್ಸ್ 2020 ಕ್ರೀಡಾಕೂಟವು ಪ್ರೇಕ್ಷಕರಿಲ್ಲದೆಯೇ ನಡೆಸಲು ಜಪಾನ್​​ ಸರ್ಕಾರ ತೀರ್ಮಾನಿಸಿದೆ. ಕ್ರೀಡಾಕೂಟ ಆಯೋಜಕರು ಜು.8 ರಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕೊರೊನಾ ತೀವ್ರಗೊಳ್ಳುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಖುದ್ದು ಜಪಾನ್ ಒಲಿಂಪಿಕ್ ಸಚಿವ ತಮಾಯೊ ಮಾರುಕಾವಾ ಸ್ಪಷ್ಟಪಡಿಸಿದ್ದಾರೆ.

ಇನ್ನು, ಪ್ರೇಕ್ಷಕರಿಲ್ಲದೇ ಕ್ರೀಡಾಕೂಟ ನಡೆಸುತ್ತಿರುವುದಕ್ಕೆ ನನ್ನ ವಿಷಾದವಿದೆ. ಈಗಾಗಲೇ ಟಿಕೆಟ್ ಖರೀದಿಸಿರುವ ಪ್ರೇಕ್ಷಕರಿಗೆ ಕ್ಷಮೆಯಾಚಿಸುತ್ತೇನೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯೊಂದಿಗೆ ಚರ್ಚಿಸಿದ ಬಳಿಕವೇ ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು ತಮಾಯೊ ಮಾರುಕಾವಾ.

ಟೋಕಿಯೋ ಒಲಿಂಪಿಕ್ಸ್‌ ಕಳೆದ ವರ್ಷವೇ ಆಯೋಜನೆ ಮಾಡಬೇಕಾಗಿತ್ತು. ಕೊರೊನಾ ವೈರಸ್‌ ತೀವ್ರಗೊಂಡಿದ್ದ ಕಾರಣ ಕ್ರೀಡಾಕೂಟವನ್ನು 2021ಕ್ಕೆ ಮುಂದೂಡಲಾಗಿತ್ತು. ಒಂದು ವರ್ಷ ಮುಂದೂಡಲ್ಪಟ್ಟ ಒಲಿಂಪಿಕ್ಸ್ ಈ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ. ಈ ಮಧ್ಯೆಯೇ ಜಪಾನ್​ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದೆ.

The post ಟೋಕಿಯೋದಲ್ಲಿ ಒಲಂಪಿಕ್ಸ್​ ಮುಗಿಯೋವರೆಗೂ ವೈರಸ್ ಎಮರ್ಜೆನ್ಸಿ ಘೋಷಣೆ appeared first on News First Kannada.

Source: newsfirstlive.com

Source link