ಅಕ್ರಮ ಮದ್ಯ ಮಾರಾಟ; ಎಮ್ಮೆಗಳಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳರು

ಅಕ್ರಮ ಮದ್ಯ ಮಾರಾಟ; ಎಮ್ಮೆಗಳಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳರು

ನವದೆಹಲಿ: ಎಮ್ಮೆಗಳಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮೂವರು ಪೊಲೀಸರ ಬಲೆಗೆ ಸಿಕ್ಕಿಬಿದ್ದ ವಿಚಿತ್ರ ಪ್ರಕರಣವೊಂದು ಬಯಲಿಗೆ ಬಂದಿದೆ. ತಮ್ಮ ಮನೆಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮೂವರು ದುಷ್ಕರ್ಮಿಗಳನ್ನು ಬಂಧಿಸಿದ್ದೇವೆ ಎಂದು ಖುದ್ದು ಪೊಲೀಸ್​​ ಅಧಿಕಾರಿ ದಿಲೀಪ್​​ ಸಿನ್ಹಾ ಬಲ್ದೇವ್​​​ ಸ್ಪಷ್ಟಪಡಿಸಿದ್ದಾರೆ.

ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ರೈತನೋರ್ವನ ಮನೆಯಲ್ಲಿ ಎಮ್ಮೆಗಳು ನೀರು ಎಂದುಕೊಂಡು ಮದ್ಯವನ್ನು ಸೇವಿಸಿವೆ. ಮದ್ಯ ಸೇವಿಸಿದ ಬಳಿಕ ಎಮ್ಮೆಗಳ ವರ್ತನೆಯಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿದೆ. ಯಾರೇ ಬಂದರೂ ತನ್ನ ಕೊಂಬಿನಿಂದ ತಿವಿಯಲು ಹೋಗುವುದು, ದಾಳಿ ಮಾಡುವುದು ಹೀಗೆ ಎಮ್ಮೆಗಳು ವರ್ತಿಸಿವೆ.

ಎಮ್ಮೆಗಳನ್ನು ನಿಯಂತ್ರಿಸಲಾಗದೆ ರೈತ ಪಶುವೈದ್ಯರನ್ನು ಕರೆದಿದ್ದಾರೆ. ಪಶುವೈದ್ಯ ಎಮ್ಮೆ ಕುಡಿದ ನೀರನ್ನು ಪರೀಕ್ಷಿಸಿದರೆ ಅದರಲ್ಲಿ ಮದ್ಯ ಮಿಶ್ರಣವಾಗಿರುವುದು ತಿಳಿದು ಬಂದಿದೆ. ವೈದ್ಯರ ಖಚಿತ ಮಾಹಿತಿ ಮೇರೆಗೆ ಬಂದ ಪೊಲೀಸರಿಗೆ ರೈತರು ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ. ಬಳಿಕ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ರೈತರನ್ನು ಬಂಧಿಸಿದ್ದಾರೆ.

The post ಅಕ್ರಮ ಮದ್ಯ ಮಾರಾಟ; ಎಮ್ಮೆಗಳಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳರು appeared first on News First Kannada.

Source: newsfirstlive.com

Source link