ವಿಶೇಷ ಪೂಜೆ ಸಲ್ಲಿಸಿ ಕಚೇರಿ ಪ್ರವೇಶ ಮಾಡಿದ ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷ

ವಿಶೇಷ ಪೂಜೆ ಸಲ್ಲಿಸಿ ಕಚೇರಿ ಪ್ರವೇಶ ಮಾಡಿದ ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷ

ಬೆಂಗಳೂರು: ನಮಗೆ ದೆಹಲಿಯಿಂದ ಬರುವ ನಿರ್ದೇಶನಗಳೇ ಅಂತಿಮ ಅಂತಾ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಹೇಳಿದ್ದಾರೆ.

ರಕ್ಷಾ ರಾಮಯ್ಯ ಅವರು ಕೆಪಿಸಿಸಿ ಯುವ ಘಟಕದ ಅಧ್ಯಕ್ಷರಾಗಿ ಸರಳ ಪೂಜೆ, ಪುನಸ್ಕಾರದೊಂದಿಗೆ ನಿನ್ನೆ ಕಚೇರಿ ಪ್ರವೇಶ ಮಾಡಿದರು. ಮೌರ್ಯ ಸರ್ಕಲ್​ ಬಳಿಯಿರುವ ಕೆಪಿಸಿಸಿ ಕಚೇರಿಯಲ್ಲಿ ತಮ್ಮ ನೂತನ ಕೊಠಡಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರವೇಶ ಮಾಡಿದರು.

blank

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಇಂದು ಸರಳ ಪೂಜೆಯ ಮೂಲಕ ಕಚೇರಿ ಪ್ರವೇಶ ಮಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಆಷಾಢ ಆರಂಭವಾಗಿರೋದ್ರಿಂದ ಇಂದು ಒಳ್ಳೆಯ ಸಮಯದಲ್ಲಿ ಕಚೇರಿ ಪೂಜೆ ನಡೆಸಲಾಗಿದೆ. ನಮಗೆ ದೆಹಲಿಯಿಂದ ಬರುವ ನಿರ್ದೇಶನಗಳೇ ಅಂತಿಮ ಎಂದರು.

ದೆಹಲಿ ನಾಯಕರು ನಮಗೆ ಕೊಟ್ಟಿರುವ ಅವಕಾಶ ಸದುಪಯೋಗ ಮಾಡಿಕೊಳ್ತೇವೆ. ಕಳೆದು ಆರು ತಿಂಗಳುಗಳಿಂದಲೂ ನಿರಂತರವಾಗಿ ಪಕ್ಷ ಸಂಘಟನೆ ಕೆಲಸ ನಡೀತಿದೆ. ಇನ್ಮುಂದೆ ಇನ್ನಷ್ಟು ಸಂಘಟಿತವಾಗಿ ಕೆಲಸ ಮಾಡ್ತೇವೆ. ನಮ್ಮ ಹೈಕಮಾಂಡ್ ನಾಯಕರಾದ ಕೃಷ್ಣ ಅಲ್ಲವಾರು ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರ ಮಾರ್ಗದರ್ಶನದಂತೆ ಕೆಲಸ ಮಾಡ್ತೇವೆ ಎಂದರು.

The post ವಿಶೇಷ ಪೂಜೆ ಸಲ್ಲಿಸಿ ಕಚೇರಿ ಪ್ರವೇಶ ಮಾಡಿದ ರಾಜ್ಯ ಕಾಂಗ್ರೆಸ್​ನ ಯುವ ಘಟಕದ ಅಧ್ಯಕ್ಷ appeared first on News First Kannada.

Source: newsfirstlive.com

Source link