ಪ್ರಶಾಂತ್, ಚಕ್ರವರ್ತಿ ಜಗಳಕ್ಕೆ ದಿವ್ಯಾ ಸುರೇಶ್ ಕಾಮೆಂಟ್

ಪ್ರಶಾಂತ್ ಸಂಬರ್ಗಿ ಹಾಗೂ ಚಕ್ರವರ್ತಿ ಚಂದ್ರಚೂಡ್‍ರವರು ವೈಷ್ಣವಿಯವರ ವಿಚಾರವಾಗಿ ದೊಡ್ಮನೆಯಲ್ಲಿ ಜಗಳವಾಡಿದ್ದಾರೆ.

ಟಾಸ್ಕ್ ವಿಚಾರವಾಗಿ ಸಂಬರಗಿ ವೈಷ್ಣವಿಗೆ ಸಲಹೆ ನೀಡಿದ್ದರ ಬಗ್ಗೆ ಮಾತನಾಡಿದ್ದನ್ನು ಚಕ್ರವರ್ತಿ ಸಂಬರಗಿ ಬಳಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸಂಬರಗಿ ವೈಷ್ಣವಿ ಬಳಿ ಕೇಳಿದ್ದು, ನಾನು ಆ ರೀತಿ ಹೇಳಿಲ್ಲ ಎಂದು ವೈಷ್ಣವಿ ಖಡಕ್ ಆಗಿ ಉತ್ತರಿಸಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಚಕ್ರವರ್ತಿ, ಇಂತಹ ಹೊಲಸು ಕೆಲಸ ಮಾಡಬೇಡ. ನಾನು ಕೇಳಬೇಡ ಅಂದ್ರೂ ವೈಷ್ಣವಿ ಬಳಿ ಯಾಕೆ ಕೇಳಿದೆ. ಇದು ಹೊಲಸು ಕೆಲಸ, ನಾಮಕರಮ್ ಎಂದೆಲ್ಲಾ ಪ್ರಶಾಂತ್‍ರವರಿಗೆ ಚಕ್ರವರ್ತಿ ಸಿಕ್ಕಾಪಟ್ಟೆ ಎಲ್ಲರ ಮುಂದೆ ಬೈದಿದ್ದಾರೆ.

ಈ ಮಧ್ಯೆ ಗಾರ್ಡನ್ ಏರಿಯಾದಲ್ಲಿ ದಿವ್ಯಾ ಸುರೇಶ್, ಪ್ರಿಯಾಂಕ, ರಘು ಕುಳಿತುಕೊಂಡಿರುತ್ತಾರೆ. ಈ ವೇಳೆ ಇವರಿಬ್ಬರ ಜಗಳ ನೋಡುತ್ತಾ ದಿವ್ಯಾ ಸುರೇಶ್, ಇಲ್ಲಿ ಇಬ್ಬರು ಕುಳಿತುಕೊಂಡು ಹೇಗೆ ಎಂದು ಲೆಕ್ಕಾಚಾರ ಹಾಕಿಕೊಂಡು ಪ್ಲಾನ್ ಮಾಡಿಕೊಳ್ಳುತ್ತಾರೆ. ನಂತರ ಎಲ್ಲಾ ಒಂದೇ ಬಾರಿಗೆ ಈ ತರಹ ಬ್ಲಾಸ್ಟ್ ಆಗುತ್ತದೆ ಆಗ ಜಗಳವಾಡುತ್ತಾರೆ. ಬಳಿಕ ಎಲ್ಲಾ ಕಾವು ಕಡಿಮೆಯಾದ ಮೇಲೆ ಮತ್ತೆ ಇದೇ ಸೋಫಾ ಮೇಲೆ ಬಂದು ಕುಳಿತುಕೊಳ್ಳುತ್ತಾರೆ. ಹಾಗೇ ಮಾಡೋಣ, ಹೀಗೆ ಮಾಡೋಣ ಎಂದು ಮಾತನಾಡುತ್ತಾರೆ. ಮತ್ತೆ ಸಂಜೆ ಇನ್ನೊಂದು ಯಾವುದಾದರೂ ವಿಚಾರಕ್ಕೆ ಜಗಳ ಆಡುತ್ತಾರೆ. ಜನರಲ್ ಆಗಿ ಹೇಳುತ್ತೇನೆ, ಚಕ್ರವರ್ತಿಯವರು ಸುಳ್ಳು ಹೇಳಿದರೂ ಸತ್ಯ ತಲೆಯ ಮೇಲೆ ಹೊಡೆದಂತೆ ಹೇಳುತ್ತಾರೆ. ನಾನು ಹೇಳುತ್ತಿರುವುದೇ ಸರಿ ಎಂದು ವಾದಿಸುತ್ತಾರೆ ಎಂದು ದಿವ್ಯಾ ಸುರೇಶ್ ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ: ಮತ್ತೆ ಚಕ್ರವರ್ತಿ ಸಂಬರಗಿ ಮಧ್ಯೆ ಫೈಟ್

The post ಪ್ರಶಾಂತ್, ಚಕ್ರವರ್ತಿ ಜಗಳಕ್ಕೆ ದಿವ್ಯಾ ಸುರೇಶ್ ಕಾಮೆಂಟ್ appeared first on Public TV.

Source: publictv.in

Source link