ಬಾಗಲಕೋಟೆಯಲ್ಲಿ ಬಾರೀ ಮಳೆ.. ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಕಳೆದ ಜನ

ಬಾಗಲಕೋಟೆಯಲ್ಲಿ ಬಾರೀ ಮಳೆ.. ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಕಳೆದ ಜನ

ಬಾಗಲಕೋಟೆ: ಜಿಲ್ಲೆಯ ಬದಾಮಿ ತಾಲ್ಲೂಕಿನ ವಿವಿಧ ಕಡೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆ ನೀರು ಕುಳಗೇರಿ ಕ್ರಾಸ್​​ನಲ್ಲಿರುವ ನಾಲ್ಕೈದು‌ ಮನೆಗಳಿಗೆ ನುಗ್ಗಿದೆ. ಅಸ್ಲಮ್‌ ದಾಸ್ಯಾಳ ಎಂಬುವವರ ಮನೆ ಸೇರಿದಂತೆ ಐದು‌ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಜಮೀನಿಗೆ ನುಗ್ಗಿದ ಮಳೆ ನೀರು.. ಪಪ್ಪಾಯಿ, ದಾಳಿಂಬೆ ಗಿಡ ಬೆಳೆದಿದ್ದ ರೈತ ಕಂಗಾಲು

blank

ಪಾತ್ರೆ-ಪಗಡೆ, ಮನೆಯಲ್ಲಿರುವ ವಿವಿಧ ವಸ್ತುಗಳು ಜಲಾವೃತಗೊಂಡಿದ್ದವು. ಹೀಗಾಗಿ ಬುಟ್ಟಿ, ಬಕೆಟ್ ನಿಂದ ನಿವಾಸಿಗಳು ನೀರನ್ನು ರಾತ್ರಿಯಿಂದ ಬೆಳಗ್ಗೆವರೆಗೂ ಹೊರ ಹಾಕಿದ ಪ್ರಸಂಗ ಕೂಡ ನಡೆದಿದೆ. ಮಳೆ ಬಂದಾಗೆಲ್ಲಾ ಚರಂಡಿ ನೀರು ಮನೆಗೆ ನುಗ್ಗುತ್ತೆ. ಈ ಬಗ್ಗೆ ಗ್ರಾಪಂ ಸಿಬ್ಬಂದಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಅಂತಾ ನಿವಾಸಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ: ಎಚ್ಚರಿಕೆ: ನಾಳೆಯಿಂದ 3-4 ದಿನ ರಾಜ್ಯಾದ್ಯಂತ ವ್ಯಾಪಕ ಮಳೆ ಸಾಧ್ಯತೆ

The post ಬಾಗಲಕೋಟೆಯಲ್ಲಿ ಬಾರೀ ಮಳೆ.. ರಾತ್ರಿಯೆಲ್ಲಾ ನಿದ್ದೆಯಿಲ್ಲದೇ ಕಳೆದ ಜನ appeared first on News First Kannada.

Source: newsfirstlive.com

Source link