ಲಂಕಾ ಸರಣಿ ಟೀಂ ಇಂಡಿಯಾಗೆ ಮಾತ್ರವಲ್ಲ, ಕೋಚ್​ ​ದ್ರಾವಿಡ್ ಪಾಲಿಗೂ ಚಾಲೆಂಜಿಂಗ್​ ಸಿರೀಸ್!

ಲಂಕಾ ಸರಣಿ ಟೀಂ ಇಂಡಿಯಾಗೆ ಮಾತ್ರವಲ್ಲ, ಕೋಚ್​ ​ದ್ರಾವಿಡ್ ಪಾಲಿಗೂ ಚಾಲೆಂಜಿಂಗ್​ ಸಿರೀಸ್!

ಲಂಕಾ ಪ್ರವಾಸ ಟೀಮ್​ ಇಂಡಿಯಾ ಪಾಲಿಗೆ, ಸವಾಲಿನ ಸರಣಿ. ಹಲವು ಆಟಗಾರರಿಗೆ ತಮ್ಮನ್ನ ತಾವು ಪ್ರೂವ್​ ಮಾಡಿಕೊಳ್ಳಲೇ ಬೇಕಾದ ಸವಾಲು ಎದುರಾಗಿದ್ರೆ, ಇನ್ನು ಕೆಲವರಿಗೆ ಸ್ಥಾನ ಗಿಟ್ಟಿಸಿಕೊಳ್ಳೋದೇ ಚಾಲೆಂಜ್​ ಆಗಿದೆ. ಕೋಚ್​​ ಆಗಿ ಆಯ್ಕೆಯಾಗಿರೋ ರಾಹುಲ್​ ದ್ರಾವಿಡ್​​ ಮುಂದೂ, ಸವಾಲಿನ ಬೆಟ್ಟವಿದೆ.

ಕೋಚ್​​ ದ್ರಾವಿಡ್​​ ಮುಂದೆ ಸವಾಲುಗಳ ಬೆಟ್ಟ..!
ದ್ರಾವಿಡ್​ ಮೇಲೆಯೇ ನಿಂತಿದೆ ತಂಡದ ಯಶಸ್ಸು..!

ಲಂಕಾ ಸರಣಿ ಟೀಮ್​ ಇಂಡಿಯಾ ಆಟಗಾರರ ಪಾಲಿನ, ಟೆಸ್ಟಿಂಗ್​ ಸಿರೀಸ್. ಸ್ಥಾನವನ್ನ ಭದ್ರಪಡಿಸಿಕೊಳ್ಳಬೇಕು ಅಂದ್ರೆ, ಈ ಸರಣಿಯಲ್ಲಿ ಮಾಸ್ಟರ್​​ ಕ್ಲಾಸ್​ ಪ್ರದರ್ಶನವನ್ನ ನೀಡೋ ಸವಾಲು, ಆಟಗಾರರ ಮುಂದಿದೆ. ಕೇವಲ ಆಟಗಾರರು ಮಾತ್ರವಲ್ಲ, ಟೀಮ್​ ಇಂಡಿಯಾ ಕೋಚ್​​ ​ದ್ರಾವಿಡ್ ಮಾಸ್ಟರ್​​ ಪಾಲಿಗೂ, ಇದು ಚಾಲೆಂಜಿಂಗ್​ ಸಿರೀಸ್​​.

ಇದನ್ನೂ ಓದಿ: ಶ್ರೀಲಂಕಾ ಬ್ಯಾಟಿಂಗ್ ಕೋಚ್​​ಗೆ ಕೊರೊನಾ; ಭಾರತ-ಲಂಕಾ ಸರಣಿಗೆ ‘ಕೊರೊನಾ ಕಂಟಕ’?

blank

ಖಾಯಂ ನಾಯಕ ವಿರಾಟ್​​ ಕೊಹ್ಲಿ ಅಲಭ್ಯತೆಯಲ್ಲಿ, ಧವನ್​ ಹೆಗಲಿಗೆ ನಾಯಕನ ಜವಾಬ್ದಾರಿಯನ್ನೇನೋ ಹೊರಿಸಲಾಗಿದೆ. ಆದ್ರೆ ಇಡೀ ತಂಡದ ಸಂಪೂರ್ಣ ಜವಾಬ್ದಾರಿ ಬಿದ್ದಿರೋದು, ಕೋಚ್​ ದ್ರಾವಿಡ್​​ ಮೇಲೆ. ನಾಯಕನಾಗಿ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್​ ತಂಡವನ್ನೇ ಸಮರ್ಥವಾಗಿ ಮನ್ನಡೆಸಲಾಗದ ಧವನ್​, ಏಕಾಂಗಿಯಾಗಿ ಟೀಮ್ ಇಂಡಿಯಾವನ್ನ ಮುನ್ನಡೆಸೋದು, ಕಷ್ಟ ಸಾಧ್ಯ. ಇದು ಸಹಜವಾಗಿಯೇ ದ್ರಾವಿಡ್​​​ ಜವಾಬ್ದಾರಿಯನ್ನ ಹೆಚ್ಚಿಸಿದೆ.

ಇದನ್ನೂ ಓದಿ: ತೆರೆ ಮೇಲೆ ಬರಲಿದ್ಯಂತೆ ‘ದಿ ವಾಲ್’ ಜೀವನ ಕಥೆ.. ದ್ರಾವಿಡ್​ ಪಾತ್ರದಲ್ಲಿ ಮಿಂಚಲಿರೋ ನಟ ಯಾರು?

ನಿವೃತ್ತಿ ಬಳಿಕ ರಾಹುಲ್​ ದ್ರಾವಿಡ್​​

  • 2014-15 ಮೆಂಟರ್​, RR​
  • 2016-17 ಮೆಂಟರ್​, DD​​
  • 2016-18 ಕೋಚ್​​, ಭಾರತ U-19
  • 2019 ನಿರ್ದೇಶಕ, NCA

ಟೀಮ್​ ಇಂಡಿಯಾ ಮುಂದೆ ಸವಾಲುಗಳ ಬೆಟ್ಟ
ಸರಣಿಗಾಗಿ ಸಮರ್ಥ ಗೇಮ್​​ ಪ್ಲಾನ್​, ಸ್ಮಾರ್ಟ್​​ ಸ್ಟಾರ್ಟಜಿ ಸಿದ್ಧವಾಗಬೇಕಿದೆ. ಇದರ ಜೊತೆಗೆ ಪ್ರತಿಯೊಂದು ಸ್ಲಾಟ್​​ಗೆ, ಬೆಸ್ಟ್​​ ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ. ಇರುವ 20 ಬೆಸ್ಟ್​​ ಆಟಗಾರರಲ್ಲಿ, ದಿ ಬೆಸ್ಟ್​ ಅನ್ನೋ ಹನ್ನೊಂದು ಆಟಗಾರರನ್ನ, ಆರಿಸೋದು ದೊಡ್ಡ ತಲೆನೋವಾಗಿದೆ. ಈ ಎಲ್ಲಾ ವಿಚಾರಗಳಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳೋದು, ಅನಾನುಭವಿ ನಾಯಕ ಧವನ್​ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಹೀಗಾಗಿ ಕೋಚ್​ ದ್ರಾವಿಡ್,​​ ಪ್ರವಾಸದಲ್ಲಿ ಡಿಸಿಷನ್​ ಮೇಕರ್​ ರೋಲ್​ ಪ್ಲೇ ಮಾಡಬೇಕಿದೆ.

ಇದನ್ನೂ ಓದಿ: ಮತ್ತೆ ಟೀಮ್​ ಇಂಡಿಯಾ ಜೆರ್ಸಿ ತೊಟ್ಟ ದ್ರಾವಿಡ್​​: ಯುವ ಕ್ರಿಕೆಟರಿಗೆ ಹೇಳಿದ ಕಿವಿಮಾತೇನು..?

blank

ಈ ಪ್ರವಾಸದಲ್ಲೇ ನಾನೆಷ್ಟು ಸಮರ್ಥ ಕೋಚ್​​ ಅನ್ನೋದನ್ನೂ, ದಿ ವಾಲ್​ ನಿರೂಪಿಸಬೇಕಿದೆ. ಈ ಎಲ್ಲಾ ಸವಾಲುಗಳನ್ನ ದ್ರಾವಿಡ್​​​​ ಹೇಗೆ ಮೆಟ್ಟಿ ನಿಲ್ತಾರೆ..? ಚಾಲೆಂಜಸ್​​ಗಳನ್ನ ಮೀರಿ ಯಶಸ್ಸನ್ನ ಸಾಧಿಸ್ತಾರಾ…? ಕಾದು ನೋಡಬೇಕಿದೆ.

ಇದನ್ನೂ ಓದಿ: ಲಂಕಾ ನಾಡಲ್ಲಿ ಯುವ ತಂಡಕ್ಕೆ ದ್ರಾವಿಡ್​​ ಮಾಸ್ಟರ್ -ಭಾರತದ ಖಾಯಂ ಹೆಡ್​​ ಕೋಚ್​ ಆಗ್ತಾರಾ ದಿ ವಾಲ್​?

The post ಲಂಕಾ ಸರಣಿ ಟೀಂ ಇಂಡಿಯಾಗೆ ಮಾತ್ರವಲ್ಲ, ಕೋಚ್​ ​ದ್ರಾವಿಡ್ ಪಾಲಿಗೂ ಚಾಲೆಂಜಿಂಗ್​ ಸಿರೀಸ್! appeared first on News First Kannada.

Source: newsfirstlive.com

Source link