ನಿಜಕ್ಕೂ ಬಹಳ ಖುಷಿಯಾಗುತ್ತೆ- ಅಭಿಮಾನಿ ಪ್ರೀತಿಗೆ ಡಿಂಪಲ್ ಕ್ವೀನ್ ಫಿದಾ

ಬೆಂಗಳೂರು: ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋ, ವೀಡಿಯೋಗಳನ್ನು ಆಗಾಗ ಅಪ್ಲೋಡ್ ಮಾಡುವ ಮೂಲಕ ಅವರು ತಮ್ಮ ಅಭಿಮಾನಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಂತೆಯೇ ಇದೀಗ ಅಭಿಮಾನಿಯೊಬ್ಬರ ಅಭಿಮಾನಕ್ಕೆ ಡಿಂಪಲ್ ಕ್ಷೀನ್ ಮಾರು ಹೋಗಿದ್ದಾರೆ.

ಹೌದು. ತಮ್ಮ ನೆಚ್ಚಿನ ನಟ ಅಥವಾ ನಟಿಯ ಗಮನಸೆಳೆಯಲು ಅಭಿಮಾನಿಗಳು ಏನು ಮಾಡುವುದಕ್ಕೂ ಸಿದ್ಧರಿರುತ್ತಾರೆ. ಹುಟ್ಟುಹಬ್ಬ ಬಂದರಂತೂ ತಮ್ಮದೇ ಬರ್ತ್ ಡೇ ಅನ್ನೋವಂತೆ ಆಚರಿಸುತ್ತಾರೆ. ಒಟ್ಟಿನಲ್ಲಿ ತಮ್ಮ ನೆಚ್ಚಿನ ನಟ ಅಥವಾ ನಟಿಯ ಗಮನಸೆಳೆಯುವುದು ಅವರಿಗೆ ಮುಖ್ಯವಾಗುತ್ತದೆ. ಅಂತೆಯೇ ಇಲ್ಲೊಬ್ಬರು ರಚಿತಾ ಅಭಿಮಾನಿ ತಮ್ಮ ನೆಚ್ಚಿನ ನಟಿಯ ಗಮನಸೆಳೆಯುವ ಕೆಲಸ ಮಾಡಿದ್ದಾರೆ. ಅದೇನಂದರೆ ತಮ್ಮ ಆಟೋದ ಮೇಲೆ ಡಿಂಪಲ್ ಅಂತ ಬರೆದು ರಚಿತಾ ಫೋಟೋ ಹಾಕಿದ್ದಾರೆ. ವಿಶೇಷವೆಂದರೆ ಇದನ್ನು ಸ್ವತಃ ನಟಿಯೇ ಉದ್ಘಾಟಿಸಿದಂತೆ ಮಾಡಿದ್ದಾರೆ. ಈ ಮೂಲಕ ನಟಿಯ ಮೇಲೆ ಇರುವ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಟೋ ಡ್ರೈವರ್ ಅಭಿಮಾನಕ್ಕೆ ಡಿಂಪಲ್ ಕ್ವೀನ್ ರಚಿತಾ ಭಾವುಕ

ಇತ್ತ ಇದರ ವೀಡಿಯೋವನ್ನು ನಟಿ, ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ‘ಈ ರೀತಿ ಪ್ರೀತಿ ತೋರಿಸಿದಾಗ, ನಿಜಕ್ಕೂ ಬಹಳ ಖುಷಿ ಆಗುವುದು. ನನ್ ಮನಸಾರೆ ಧನ್ಯವಾದ ಎಂದು ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ತಮ್ಮ ಅಭಿಮಾನಿ ರಿಸ್ವಾನ್ ಅವರಿಗೆ ಜಾಗೃತಿ ಕೂಡ ಮೂಡಿಸಿದ್ದಾರೆ. ಗಾಡಿಯನ್ನು ಜೋಪಾನವಾಗಿ ಓಡಿಸಿ ಎಂದು ಹೇಳಿದ್ದಾರೆ.

ಈ ಹಿಂದೆಯೂ ಅಭಿಮಾನಿಯೊಬ್ಬ ತಮ್ಮ ಫೋಟೋ ಮೇಲೆ ಹಾಕಿಸಿಕೊಂಡಿದ್ದರು. ಈ ವೇಳೆಯೂ ರಚಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಜೊತೆಗೆ ಸುದೀರ್ಘವಾಗಿ ಬರೆದುಕೊಂಡು ಅಭಿಮಾನಕ್ಕೆ ಭಾವುಕರಾಗಿದ್ದರು. ಅಲ್ಲದೆ ನನ್ನ ಕಲಾಬದುಕಿಗೆ ಜೀವ ಕೊಟ್ಟವರು ಅಭಿಮಾನಿಗಳು ಎಂದು ಬಣ್ಣಿಸಿದ್ದರು.

The post ನಿಜಕ್ಕೂ ಬಹಳ ಖುಷಿಯಾಗುತ್ತೆ- ಅಭಿಮಾನಿ ಪ್ರೀತಿಗೆ ಡಿಂಪಲ್ ಕ್ವೀನ್ ಫಿದಾ appeared first on Public TV.

Source: publictv.in

Source link