ದಿವ್ಯಾ ಉರುಡುಗ ಮೋಸ ಮಾಡಿದ್ದಾಳೆ ಅಂತ ಕಿರುಚಾಡಿದ ಪ್ರಶಾಂತ್

ಬಿಗ್‍ಬಾಸ್ ನೀಡಿದ್ದ  ನೋಟು ಮುದ್ರಿಸುವ ಟಾಸ್ಕ್ ವೇಳೆ ಏಪ್ರನ್‍ಗಾಗಿ ಮಂಜು ಹಾಗೂ ಪ್ರಶಾಂತ್ ನಡುವೆ ಕಾದಾಟ ನಡೆದಿದೆ.

ಇಬ್ಬರ ಜಗಳ ಮಧ್ಯೆ ಪ್ರವೇಶಿಸಿದ ಕ್ಯಾಪ್ಟನ್ ದಿವ್ಯಾ ಉರುಡುಗ ಮೊದಲು ಏಪ್ರನ್ ಕತ್ತಿಗೆ ಹಾಕಿಕೊಂಡಿದ್ದು ಮಂಜು ಆಗಿರುವುದರಿಂದ ಏಪ್ರನ್ ಮಂಜುಗೆ ಸೇರಬೇಕೆಂದು ಪ್ರಶಾಂತ್‍ರಿಂದ ಏಪ್ರನ್ ಹಿಂಪಡೆದು ಮಂಜುಗೆ ನೀಡುತ್ತಾರೆ. ಇದರಿಂದ ಬೇಸರಗೊಂಡ ಪ್ರಶಾಂತ್, ತಪ್ಪು ನಿರ್ಧಾರ ತೆಗೆದುಕೊಂಡು ನಮ್ಮ ಮಾರ್ಯದೆ ತೆಗಿತಿದ್ದಾಳೆ ಎಂದು ಬೈದು, ಬೆಡ್ ರೂಮ್‍ಗೆ ಹೋಗಿ ಅಳುತ್ತಾರೆ.

ಬಳಿಕ ಟಾಸ್ಕ್ ನಡೆಯುತ್ತಿದ್ದ ವೇಳೆ ಕ್ಯಾಪ್ಟನ್ ನೀವು ಇಂದು ಮೋಸದ ಆಟ ಆಡಿದ್ದೀರಾ ಎಂದು ಪ್ರಶಾಂತ್ ಹೇಳುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ನಾನು ಯಾವುದೇ ತಪ್ಪು ನಿರ್ಧಾರ ನೀಡಿಲ್ಲ ಎಂದಿದ್ದಾರೆ. ನಂತರ ಮಂಜುನೂ ಮೋಸ ಮಾಡಿದ್ದಾನೆ, ನೀನು ಕೂಡ ಮೋಸ ಮಾಡಿದ್ಯಾ ಎಂದು ಪದೇ ಪದೇ ಹೇಳುತ್ತಾರೆ. ಆಗ ದಿವ್ಯಾ ಉರುಡುಗ ಮೈಕ್ ಏನಾದರೂ ಬೇಕಾ ಎಂದು ಕೇಳುತ್ತಾರೆ. ಇದಕ್ಕೆ ಮೈಕ್‍ನನ್ನು ಮೇಲಕ್ಕೆ ಎತ್ತಿ ಹಿಡಿದುಕೊಂಡು, ಮಂಜುನೂ ಮೋಸ ಮಾಡಿದ್ದಾನೆ, ದಿವ್ಯಾ ಉರುಡುಗನೂ ಮೋಸ ಮಾಡಿದ್ದಾಳೆ ಎಂದು ಕಿರುಚುತ್ತಾರೆ. ಇದಕ್ಕೆ ದಿವ್ಯಾ ಉರುಡುಗ ಥ್ಯಾಂಕ್ಯು ಎಂದು ಅಣುಕಿಸುತ್ತಾರೆ.

blank

ನಂತರ ಅರವಿಂದ್ ಜೊತೆ ಇದೇ ವಿಚಾರವಾಗಿ ಚರ್ಚಿಸಿದ ದಿವ್ಯಾ ಉರುಡುಗ, ಟಾಸ್ಕ್ ಬುಕ್‍ನನ್ನು ಓದುತ್ತಾರೆ. ಕುತ್ತಿಗೆಗೆ ಮೊದಲು ಏಪ್ರಿನ್ ಧರಿಸುವ 5 ಮಂದಿ ಆ ಸುತ್ತಿನಲ್ಲಿ ನೋಟು ಮುದ್ರಿಸುವ ಅವಕಾಶವನ್ನು ಪಡೆಯುತ್ತಾರೆ ಎಂದು ಹೇಳುತ್ತಾರೆ. ಈ ವೇಳೆ ಪ್ರಶಾಂತ್‍ರವರು ನನ್ನ ಮಕ್ಕಳ ಮೇಲೆ ಆಣೆ ಮಾಡಿ ಹೇಳುತ್ತೇನೆ ಅವನು ಕುತ್ತಿಗೆಗೆ ಹಾಕಿಕೊಂಡಿಲ್ಲ. ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತೇನೆ ಹಾಕಿಕೊಂಡಿರಲಿಲ್ಲ ಎಂದು ವಾದಿಸಿದ್ದಾರೆ. ಜೊತೆಗೆ ಇಂದು ನಿನ್ನಲ್ಲಿ ಬೇಧ-ಭಾವವಿದೆ ಎಂದು ಕಿಡಿಕಾರಿದ್ದಾರೆ.

blank

ಇದಕ್ಕೆ ನಿಮ್ಮ ಮಾತಿನ ಮೇಲೆ ಅಲ್ಲ, ನನ್ನ ಕಣ್ಣಿನ ಮೇಲೆ ನನಗೆ ನಂಬಿಕೆ ಇದೆ, ಅವನು ಕುತ್ತಿಗೆಗೆ ಏಪ್ರನ್ ಹಾಕಿಕೊಂಡಿದ್ದನ್ನು ನೋಡಿದ್ದೇನೆ. ಆಗ ನಿಮ್ಮ ಕೈನಲ್ಲಿ ಏಪ್ರನ್ ಇತ್ತು. ಅದರ ಆಧಾರ ಮೇಲೆ ನಾನು ಮಂಜುಗೆ ಏಪ್ರನ್ ಕೊಟ್ಟಿದ್ದೇನೆ. ನನಗೆ ಗೊತ್ತಿದೆ ನಾನು ಸರಿ ಮಾಡುತ್ತಿದ್ದೇನೋ, ತಪ್ಪು ಮಾಡುತ್ತಿದ್ದೇನೋ, ನನ್ನ ಪ್ರಕಾರ ನಾನು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದೇನೆ. ನನಗೆ ಸರಿ, ತಪ್ಪು ಯಾವುದು ಎಂದು ನೀವು ಹೇಳಿಕೊಡಬೇಕಾಗಿಲ್ಲ ಎಂದು ಗುಡುಗಿದ್ದಾರೆ.

The post ದಿವ್ಯಾ ಉರುಡುಗ ಮೋಸ ಮಾಡಿದ್ದಾಳೆ ಅಂತ ಕಿರುಚಾಡಿದ ಪ್ರಶಾಂತ್ appeared first on Public TV.

Source: publictv.in

Source link