ಮೂರನೇ ಡೋಸ್‍ಗಾಗಿ ಫೈಜರ್‌ನಿಂದ ಅರ್ಜಿ

ನವದೆಹಲಿ: ಡೆಲ್ಟಾ, ಡೆಲ್ಟಾ ಪ್ಲಸ್ ಹೀಗೆ ಕೋವಿಡ್ ಸೋಂಕಿನ ಹೊಸ ಹೊಸ ರೂಪಾಂತರಿ ತಳಿಗಳ ಆತಂಕ ಹೊತ್ತಲ್ಲೇ 2ನೇ ಡೋಸ್ ಪಡೆದವರಿಗೆ 3ನೇ ಡೋಸ್ ಲಸಿಕೆ ಕೊಡುವ ಬಗ್ಗೆ ಚರ್ಚೆ ಆರಂಭ ಆಗಿದೆ.

ಬ್ರಿಟನ್ ಬಳಿಕ ಈಗ ಅಮೆರಿಕದಲ್ಲಿ ಮೂರನೇ ಡೋಸ್ ಲಸಿಕೆ ಕೊಡುವ ಸಾಧ್ಯತೆ ಇದೆ. ಆಗಸ್ಟ್‍ನಲ್ಲಿ 3ನೇ ಡೋಸ್ ಲಸಿಕೆ ವಿತರಣೆಗೆ ಅನುಮತಿ ಕೇಳಿ ಫೈಜರ್ ಕಂಪನಿ ಅರ್ಜಿ ಸಲ್ಲಿಸಲಿದೆ. ಮೂರನೇ ಡೋಸ್ ಕೊಟ್ಟರೆ ಆಗ ಪ್ರತಿಕಾಯ ಶೇಕಡಾ 5ರಿಂದ 10 ಪಟ್ಟು ಹೆಚ್ಚಾಗಲಿದ್ದು, ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ವೈರಸ್ ವಿರುದ್ಧವೂ ಪರಿಣಾಮಕಾರಿಯಾಗಲಿದೆ ಎಂದು ಆರಂಭಿಕ ಅಧ್ಯಯನದಲ್ಲಿ ತಿಳಿದುಬಂದಿದೆ ಎಂದು ಫೈಜರ್ ಹೇಳಿದೆ.

ಆಸ್ಟ್ರಾಜೆನಿಕಾದ ಕೋವಿಡ್ ಲಸಿಕೆಯ 2ನೇ ಡೋಸ್ ತೆಗೆದುಕೊಂಡವರಿಗೆ 6 ತಿಂಗಳ ಬಳಿಕ 3ನೇ ಡೋಸ್ ಕೊಟ್ಟರೆ ರೋಗ ನಿರೋಧಕ ಶಕ್ತಿ ಅತ್ಯಧಿಕವಾಗಿರಲಿದೆ ಎಂದು ಆಕ್ಸ್ ಫರ್ಡ್ ವಿವಿ ಅಧ್ಯಯನ ತಿಳಿಸಿದೆ. ಬ್ರಿಟನ್‍ನಲ್ಲಿ ಸೆಪ್ಟೆಂಬರ್ ವೇಳೆ 3ನೇ ಡೋಸ್ ಲಸಿಕೆ ವಿತರಣೆ ಆರಂಭ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ನಿಜಕ್ಕೂ ಬಹಳ ಖುಷಿಯಾಗುತ್ತೆ- ಅಭಿಮಾನಿ ಪ್ರೀತಿಗೆ ಡಿಂಪಲ್ ಕ್ವೀನ್ ಫಿದಾ

ರೋಗ ನಿರೋಧಕ ಶಕ್ತಿ ಕಡಿಮೆ ಆದ ಹಿನ್ನೆಲೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಡೋಸ್ ನೀಡಲು ನಿರ್ಧರಿಸಲಾಗಿದೆ. 2 ಡೋಸ್ ಪಡೆದ ಬಳಿಕ ಎಷ್ಟು ದಿನಗಳ ಕಾಲ ಪ್ರತಿಕಾಯ ಉಳಿಯುತ್ತೆ ಅಂತಾ ಸಾಬೀತು ಆಗಿಲ್ಲ. ದೇಹದಲ್ಲಿ ಉತ್ಪತ್ತಿಯಾದ ರೋಗ ನಿರೋಧಕ ಶಕ್ತಿ 8 ತಿಂಗಳ ಬಳಿಕ ನಶಿಸಿ ಹೋಗುತ್ತಿದೆ. ಹೀಗಾಗಿ 3ನೇ ಡೋಸ್ ನೀಡುವುದರ ಬಗ್ಗೆ ಐಸಿಎಂಆರ್ ಸಲಹೆ ನೀಡಿದೆ.

ಶೇ.4.5 ನಷ್ಟು ರೋಗ ನಿರೋಧಕ ಶಕ್ತಿ ಇದ್ದು ಡೆಲ್ಟಾ ವೈರಸ್ ವೈರಸ್ ಬಂದರೆ, ಶೇ.3.2ನಷ್ಟು ರೋಗ ನಿರೋಧಕ ಶಕ್ತಿ ಕುಗ್ಗುವುದರ ಬಗ್ಗೆ ಫ್ರಂಟ್ ಲೈನ್ ವಾರಿಯರ್ಸ್ ಮೇಲೆ ನಡೆದ ಅಧ್ಯಯನದಲ್ಲಿ ಬಯಲಾಗಿದೆ. ಹಾಗಾಗಿ 3ನೇ ಡೋಸ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಟ್ರ್ಯಾಕ್ಟರ್ ಹರಿದು ಬಾಲಕ ಸಾವು- ವಿಷಯ ತಿಳಿದ ಚಾಲಕ ಆತ್ಮಹತ್ಯೆ

The post ಮೂರನೇ ಡೋಸ್‍ಗಾಗಿ ಫೈಜರ್‌ನಿಂದ ಅರ್ಜಿ appeared first on Public TV.

Source: publictv.in

Source link