ಕೊಹ್ಲಿಗೆ ಹಿನ್ನಡೆ.. ಶ್ರೀಲಂಕಾದಿಂದ ಇಂಗ್ಲೆಂಡ್​ಗೆ ಹಾರಲ್ಲ ಪೃಥ್ವಿ- ಪಡಿಕ್ಕಲ್..!

ಕೊಹ್ಲಿಗೆ ಹಿನ್ನಡೆ.. ಶ್ರೀಲಂಕಾದಿಂದ ಇಂಗ್ಲೆಂಡ್​ಗೆ ಹಾರಲ್ಲ ಪೃಥ್ವಿ- ಪಡಿಕ್ಕಲ್..!

ಟೀಮ್ ಇಂಡಿಯಾದಲ್ಲಿ ಎದಿದ್ದ ಗೊಂದಲಗಳಿಗೆ, ಅಂತೂ ತೆರೆ ಬಿದ್ದಿದೆ. ಶುಭ್​​ಮನ್ ಗಿಲ್​ನಿಂದ ಈಗ ಕನ್ನಡಿಗ ಮಯಾಂಕ್​ಗೆ, ಲಕ್ ಖುಲಾಯಿಸಿದೆ.. ಆದ್ರೆ ಟೀಮ್ ಇಂಡಿಯಾ ನಾಯಕ ಕೊಹ್ಲಿಗೆ ಹಿನ್ನಡೆಯುಂಟಾಗಿದೆ.

ಇದನ್ನೂ ಓದಿ: ಲಂಕಾ ಸರಣಿ ಟೀಂ ಇಂಡಿಯಾಗೆ ಮಾತ್ರವಲ್ಲ, ಕೋಚ್​ ​ದ್ರಾವಿಡ್ ಪಾಲಿಗೂ ಚಾಲೆಂಜಿಂಗ್​ ಸಿರೀಸ್!

ಶುಭ್​ಮನ್ ಗಿಲ್​​ ಇಂಜುರಿ ಬಳಿಕ ಹುಟ್ಟುಕೊಂಡಿದ್ದ ಹಲವು ಗೊಂದಲಗಳಿಗೆ, ಬಿಸಿಸಿಐ ಫುಲ್​ಸ್ಟಾಪ್ ಹಾಕಿದೆ. ರೋಹಿತ್ ಜೊತೆಗೆ ಓಪನಿಂಗ್ ಯಾರು..? ಗಿಲ್ ರಿಪ್ಲೇಸ್​ಮೆಂಟ್ ಯಾರ್ ಆಗ್ತಾರೆ..? ವಿರಾಟ್​ ಕೊಹ್ಲಿಯ ಅಣತಿಯಂತೆ, ಲಂಕಾದಿಂದ​ ಪೃಥ್ವಿ ಶಾ ಮತ್ತು ಪಡಿಕ್ಕಲ್ ಇಂಗ್ಲೆಂಡ್ ಫ್ಲೈಟ್​ ಏರ್ತಾರಾ..? ಸೆಲೆಕ್ಟರ್ಸ್ ವರ್ಸಸ್​ ಟೀಮ್ ಮ್ಯಾನೇಜ್​​​ಮೆಂಟ್ ನಡುವೆ ಕೋಲ್ಡ್​ವಾರ್​.. ಈ ಎಲ್ಲಾ ವಿವಾದಗಳಿಗೂ ಕೊನೆಗೆ ತೆರೆ ಬಿದ್ದಿದೆ..

ರೋಹಿತ್ ಜೊತೆ ಮಯಾಂಕ್ ಓಪನಿಂಗ್ ಕನ್ಫರ್ಮ್​..!
ಶುಭ್​​ಮನ್ ಗಿಲ್ ತಂಡದಿಂದ​ ಔಟ್​ ಆದ ಬೆನ್ನಲ್ಲೇ, ಓಪನಿಂಗ್ ಸ್ಲಾಟ್​ಗೆ ಪೈಪೋಟಿ ಏರ್ಪಟ್ಟಿತ್ತು. ಮಯಾಂಕ್, ಕೆ.ಎಲ್.ರಾಹುಲ್ ಜೊತೆಗೆ, ಹನುಮ ವಿಹಾರಿ ಕೂಡ ಆರಂಭಿಕ ಸ್ಥಾನದ ಆಕಾಂಕ್ಷಿಯಾಗಿದ್ದರು. ಅಭಿಮನ್ಯು ಈಶ್ವರನ್ ಸಹ​ ಕಾಂಪಿಟೇಟರ್ ಆಗಿದ್ದರು. ಆದ್ರೀಗ ಬಿಸಿಸಿಐ ಈ ವಿಚಾರದಲ್ಲಿ, ಸ್ಪಷ್ಟ ನಿಲುವು ತೆಗೆದುಕೊಂಡಿದೆ. ಶುಭಮನ್​​​ ಗಿಲ್ ರಿಪ್ಲೇಸ್ ಇಲ್ಲ ಅಂತ, ಓಪನ್​ ಆಗೇ ತಿಳಿಸಿದೆ. ಇದರಿಂದಾಗಿ ಮಯಾಂಕ್​ ಲೈನ್​ ಕ್ಲಿಯರ್ ಆಗಿದೆ.  ಹೌದು..! ಈಗಾಗಲೇ ಕೆ.ಎಲ್.ರಾಹುಲ್​ರನ್ನ ಮಧ್ಯಮ ಕ್ರಮಾಂಕದಲ್ಲಿ ಆಡಿಸಲು, ಮ್ಯಾನೇಜ್​​ಮೆಂಟ್ ನಿರ್ಧರಿಸಿದೆ. ಹೀಗಾಗಿ ರೋಹಿತ್ ಶರ್ಮಾ ಜೊತೆ ಮಯಾಂಕ್, ಇನ್ನಿಂಗ್ಸ್​ ಆರಂಭಿಸೋದು ಕನ್ಫರ್ಮ್ ಆಗಿದೆ

ಇದನ್ನೂ ಓದಿ: ಆಯ್ಕೆ ಸಮಿತಿ, ಮ್ಯಾನೇಜ್​​ಮೆಂಟ್ ನಡುವೆ ಭಿನ್ನಾಭಿಪ್ರಾಯ -ಕೊಹ್ಲಿಗೆ ಅಸಮಾಧಾನ?

ಲಂಕಾದಿಂದ ನೇರ ಮನೆಗೆ ಹಿಂತಿರುಗಲಿದ್ದಾರೆ ಪೃಥ್ವಿ-ಪಡಿಕ್ಕಲ್
ಲಂಕಾ ಸರಣಿಗಾಗಿ ಸಜ್ಜಾಗುತ್ತಿರುವ ಪೃಥ್ವಿ ಶಾ ಹಾಗೂ ಪಡಿಕ್ಕಲ್​, ಲಂಕಾ ಟೂರ್​​ನಲ್ಲೇ ಮುಂದುವರಿಯಲಿದ್ದಾರೆ. ಈ ಬಗ್ಗೆ ಸ್ವತಃ ಬಿಸಿಸಿಐ, ಉಭಯ ಆಟಗಾರರನ್ನ ಇಂಗ್ಲೆಂಡ್​ಗೆ ಕಳಿಸೋದಿಲ್ಲ ಅಂತ ಹೇಳಿದೆ. ಇದರಿಂದಾಗಿ ಶ್ರೀಲಂಕಾ ಸರಣಿ ಬಳಿಕ ಪೃಥ್ವಿ ಮತ್ತು ಪಡಿಕ್ಕಲ್, ಭಾರತಕ್ಕೆ ವಾಪಸ್​ ಆಗಲಿದ್ದಾರೆ. ಪೃಥ್ವಿ ಶಾ ಹಾಗೂ ಪಡಿಕ್ಕಲ್​ರನ್ನ ತಂಡಕ್ಕೆ ಸೇರಿಸಿಕೊಳ್ಳಲು ಕ್ಯಾಪ್ಟನ್ ಕೊಹ್ಲಿ​ಗೆ ಒಲವಿದ್ರೂ, ಹಿನ್ನಡೆಯಂತೂ ಆಗಿದೆ.

ಇದನ್ನೂ ಓದಿ: ಶ್ರೀಲಂಕಾ ಬ್ಯಾಟಿಂಗ್ ಕೋಚ್​​ಗೆ ಕೊರೊನಾ; ಭಾರತ-ಲಂಕಾ ಸರಣಿಗೆ ‘ಕೊರೊನಾ ಕಂಟಕ’?

The post ಕೊಹ್ಲಿಗೆ ಹಿನ್ನಡೆ.. ಶ್ರೀಲಂಕಾದಿಂದ ಇಂಗ್ಲೆಂಡ್​ಗೆ ಹಾರಲ್ಲ ಪೃಥ್ವಿ- ಪಡಿಕ್ಕಲ್..! appeared first on News First Kannada.

Source: newsfirstlive.com

Source link