ಕೊರೊನಾ ತಗ್ಗುತ್ತಿದ್ದಂತೆ ಕಲಬುರಗಿಯಲ್ಲಿ ಡೆಂಘೀ ಹಾವಳಿ, 50 ಪ್ರಕರಣ ವರದಿ

ಕೊರೊನಾ ತಗ್ಗುತ್ತಿದ್ದಂತೆ ಕಲಬುರಗಿಯಲ್ಲಿ ಡೆಂಘೀ ಹಾವಳಿ, 50 ಪ್ರಕರಣ ವರದಿ

ಕಲಬುರಗಿ: ಕೊರೊನಾ ಹಾವಳಿ ಇನ್ನೇನು ಕಡಿಮೆಯಾಯ್ತು ಎನ್ನುವಾಗಲೇ ಕಲಬುರಗಿಯಲ್ಲಿ ಡೆಂಘೀ ಹಾವಳಿ ಶುರುವಾಗಿದೆ. ಕಲಬುರಗಿ ನಗರದ ಬಿದ್ದಾಪುರ ಕಾಲೋನಿಯಲ್ಲಿ ಸುಮಾರು 50 ಜನರಿಗೆ ಡೆಂಘೀ ಕಾಣಿಸಿಕೊಂಡಿದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಹಲವಾರು ಮಂದಿ ಕಳೆದ 20 ದಿನಗಳಿಂದ ಡೆಂಘೀ ಜ್ವರದಿಂದ ಬಳಲುತ್ತಿದ್ದಾರೆ.

blankಬಹುತೇಕರು ಸಾವಿರಾರು ರೂಪಾಯಿ ಖರ್ಚು ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವೊಂದು ಕುಟುಂಬದಲ್ಲಿ ಎಲ್ಲಾ ಸದಸ್ಯರಿಗೂ ಡೆಂಘೀ ಜ್ವರ ಕಾಣಿಸಿಕೊಂಡಿದೆ. ಬಿದ್ದಾಪುರ ಕಾಲೋನಿಯ ಪ್ರತಿ ಮನೆಯಲ್ಲಿ ಒಬ್ಬರು ಇಬ್ಬರಂತೆ ಜ್ವರದಿಂದ ಬಳಲಿದ್ದಾರೆ.

blankಕೊರೊನಾ ಭಯ ಇನ್ನೂ ದೂರವಾಗಿಲ್ಲ.. ಆಗಲೇ ಡೆಂಘೀ ಭೀತಿ ಶುರುವಾಗಿದ್ದು, ಇದಕ್ಕೆ ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ. ಡೆಂಘೀಯಿಂದ ಬಳಲುತ್ತಿದ್ರು ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಬಡಾವಣೆಯ ಹಲವು ಕಡೆ ಸ್ವಚ್ಛತೆ ಇಲ್ಲ. ಕಸ ವಿಲೇವಾರಿ, ಸ್ವಚ್ಛತೆಗಾಗಿ ಪ್ರತಿ‌ ತಿಂಗಳು ಪಾಲಿಕೆ ಕೋಟಿ ಕೋಟಿ ಖರ್ಚು ಮಾಡುತ್ತದೆ. ಆದ್ರೆ ಕಲಬುರಗಿ ನಗರದಲ್ಲಿ ಸ್ವಚ್ಛತೆ ಮಾತ್ರ ಕಾಣುತ್ತಿಲ್ಲ ಎಂದು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ  ವಿರುದ್ಧ  ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

The post ಕೊರೊನಾ ತಗ್ಗುತ್ತಿದ್ದಂತೆ ಕಲಬುರಗಿಯಲ್ಲಿ ಡೆಂಘೀ ಹಾವಳಿ, 50 ಪ್ರಕರಣ ವರದಿ appeared first on News First Kannada.

Source: newsfirstlive.com

Source link