‘ನನ್ನ ಮಗುವನ್ನ ನಾನು ಕಳ್ಕೊಂಡಿದ್ದೀನಿ’ -ಅಮ್ಮನ ಅಗಲಿಕೆ ನೋವಲ್ಲಿ ಕಣ್ಣೀರಿಟ್ಟ ದುನಿಯಾ ವಿಜಯ್

‘ನನ್ನ ಮಗುವನ್ನ ನಾನು ಕಳ್ಕೊಂಡಿದ್ದೀನಿ’ -ಅಮ್ಮನ ಅಗಲಿಕೆ ನೋವಲ್ಲಿ ಕಣ್ಣೀರಿಟ್ಟ ದುನಿಯಾ ವಿಜಯ್

ಬೆಂಗಳೂರು: ನಮ್ಮ ಮನೆಯಲ್ಲಿ ಅಮ್ಮ 21 ದಿನಗಳ ಕಾಲ ಮಗು ರೀತಿ ಇದ್ರು. ನನ್ನ ಮಗುವನ್ನ ನಾನು ಕಳ್ಕೊಂಡಿದ್ದೀನಿ ಎಂದು ನಟ ದುನಿಯಾ ವಿಜಯ್ ಅಮ್ಮನ ಅಗಲಿಕೆಯ ನೋವಿನಲ್ಲಿ ಕಣ್ಣೀರಿಟ್ಟಿದ್ದಾರೆ.

ನಿನ್ನೆ ಅನಾರೋಗ್ಯದಿಂದ ನಿಧನರಾಗಿದ್ದ ನಟ ದುನಿಯಾ ಅವರ ತಾಯಿ ನಾರಾಯಣಮ್ಮ ಅವರ ಅಂತ್ಯಸಂಸ್ಕಾರವನ್ನು ಅವರ ಸ್ವಗ್ರಾಮ ಆನೇಕಲ್​​ನ ಕುಂಬಾರಹಳ್ಳಿಯಲ್ಲಿ ನೆರವೇರಿಸಲಾಗುತ್ತಿದ್ದು, ಪಾರ್ಥೀವ ಶರೀರವನ್ನು ಹೊಸಕೇರೆಹಳ್ಳಿ ನಿವಾಸದಿಂದ ಕುಂಬಾರನ ಹಳ್ಳಿ ಗ್ರಾಮಕ್ಕೆ ತರಲಾಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಯ್ ಅವರು, ನಮ್ಮ ಮನೆಯಲ್ಲಿ ಅಮ್ಮ 21 ದಿನಗಳ ಕಾಲ ಮಗು ರೀತಿ ಇದ್ರು. ನನ್ನ ಮಗುವನ್ನು ನಾನು ಕಳ್ಕೊಂಡಿದ್ದೀನಿ ಎಂದು ಕಣ್ಣೀರಿಟ್ಟರು.

blank

ನಾನು ನನ್ನ ಎಲ್ಲಾ  ಅಭಿಮಾನಿಗಳಲ್ಲಿ  ನನ್ನ ತಾಯಿಯನ್ನ ಕಾಣ್ತೀನಿ. ನನ್ನ ನಿರ್ದೇಶನದ ಮೊದಲ ಸಿನಿಮಾ ಸಲಗ ನೋಡೋ ಆಸೆ ಅವರಿಗಿತ್ತು. ಆದರೆ ಅದು ಈಡೇರಲಿಲ್ಲ, ಆ ನೋವು ನನಗಿದೆ. ಅಮ್ಮನ ಆಸೆಯಂತೆಯೇ ಎಲ್ಲಾ ನಡೆಯುತ್ತಿದೆ. ಅಮ್ಮನಿಗೆ ಕಾಶಿ ಅಂದರೆ ತುಂಭಾ ಇಷ್ಟ. ಅದಕ್ಕೆ ಕಾಶಿಯಿಂದ ಗಂಗಾಜಲ ತರಿಸಲಾಗಿತ್ತು. ಗಂಗಾಜಲವನ್ನು ಕುಡಿದ ನಂತರವೇ ಅಮ್ಮ ನಮ್ಮನ್ನು ಅಗಲಿದರು. ಅವರ ಇಚ್ಚೆಯಂತೆ ಅವರ ಹೇಳಿದ್ದ ಸ್ಥಳದಲ್ಲಿಯೇ ಅಂತ್ಯ ಕ್ರಿಯೆ ನೆರವೇರಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ವಿಜಿ ತಾಯಿ ನಾರಾಯಣಮ್ಮರ ಅಂತಿಮ ದರ್ಶನ ಪಡೆದ ಸ್ಯಾಂಡಲ್​​​ವುಡ್​​ ನಟ ನಟಿಯರು

blank

The post ‘ನನ್ನ ಮಗುವನ್ನ ನಾನು ಕಳ್ಕೊಂಡಿದ್ದೀನಿ’ -ಅಮ್ಮನ ಅಗಲಿಕೆ ನೋವಲ್ಲಿ ಕಣ್ಣೀರಿಟ್ಟ ದುನಿಯಾ ವಿಜಯ್ appeared first on News First Kannada.

Source: newsfirstlive.com

Source link