ಆಷಾಢ ಮಾಸದ ಈ ದಿನಗಳಂದು ಭಕ್ತರಿಗಿಲ್ಲ ಚಾಮುಂಡೇಶ್ವರಿ ದರ್ಶನ

ಆಷಾಢ ಮಾಸದ ಈ ದಿನಗಳಂದು ಭಕ್ತರಿಗಿಲ್ಲ ಚಾಮುಂಡೇಶ್ವರಿ ದರ್ಶನ

ಮೈಸೂರು: ಕೊರೊನಾ ಮೂರನೇ ಅಲೆ‌ ಭೀತಿ ಹಿನ್ನೆಲೆ ಆಷಾಢ ಮಾಸದಲ್ಲಿ ನಾಡ ಅಧಿದೇವತೆ ಚಾಮುಂಡಿ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

ಪ್ರತಿ ಬಾರಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿತ್ತಾರೆ. ಆದ್ರೆ ಸೋಂಕು ಹರಡುವ ಭೀತಿಯಿಂದ ಈ ಸಲ ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟ, ಉತ್ತನಹಳ್ಳಿ ತ್ರಿಪುರ ಸುಂದರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಜುಲೈ 9,16, 23, 30, ಆಗಸ್ಟ್ 6, 8 ರಂದು ನಾಲ್ಕು ಆಷಾಢ ಶುಕ್ರವಾರ, ಎರಡು ದಿನ ಅಮಾವಾಸ್ಯೆ ದಿನ ಭಕ್ತರಿಗೆ ದೇಗುಲ ಪ್ರವೇಶ ಇರುವುದಿಲ್ಲ. ಹಾಗೇ ಆಷಾಢ ಮಾಸದಲ್ಲಿ ಬರುವ ಶನಿವಾರ ಭಾನುವಾರ, ಸರ್ಕಾರಿ ರಜಾ ದಿನಗಳಂದೂ ಕೂಡ ನಿರ್ಬಂಧ ವಿಧಿಸಲಾಗಿದೆ. ಇಂದಿನಿಂದ ಪ್ರತಿ ದಿನ ಸಂಜೆ 6 ಗಂಟೆಯ ನಂತರವೂ ದೇಗುಲ ಪ್ರವೇಶವನ್ನ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

The post ಆಷಾಢ ಮಾಸದ ಈ ದಿನಗಳಂದು ಭಕ್ತರಿಗಿಲ್ಲ ಚಾಮುಂಡೇಶ್ವರಿ ದರ್ಶನ appeared first on News First Kannada.

Source: newsfirstlive.com

Source link