ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ: ಹೆಚ್‍ಡಿಕೆಗೆ ರಾಕ್‍ಲೈನ್ ವಾರ್ನಿಂಗ್

– ಅಂಬರೀಶ್ ಸಾವಿನಲ್ಲಿ ಯಾಕೆ ರಾಜಕೀಯ ಮಾಡ್ತೀರಾ?
-ಅಂಬರೀಶ್ ಬದುಕಿದ್ದಾಗ ಮಾತಾಡಬೇಕಿತ್ತು

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ, ಅಂಬರೀಶ್ ಮೇಲೆ ಯಾಕೆ ಇಷ್ಟು ಆಪಾದನೆ ಮಾಡ್ತಿದ್ದೀರಾ. ಅವರು ಬದುಕಿದ್ದಾಗ ಮಾತಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರಿಗೆ ರಾಕ್ ಲೈನ್ ವೆಂಕಟೇಶ್ ವಾರ್ನಿಂಗ್ ಕೊಟ್ಟಿದ್ದಾರೆ.

ಕುಮಾಸ್ವಾಮಿ ಅವರು ನೀಡಿರುವ ಹೇಳಿಕೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂಬರೀಶ್ ವಿಷಯ ಮಾತಾಡೋವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಿ. ಚಿತ್ರರಂಗ ನಿಮಗೇನು ಮೋಸ ಮಾಡಿದೆ. ಹೇಗೆ ಲಾಭ ಮಾಡಿಕೊಂಡಿದ್ದೀರಾ ಎಲ್ಲರಿಗೂ ಗೊತ್ತು. ಯಾಕೆ ಚಿತ್ರರಂಗಕ್ಕೆ ಬೈತೀರಾ. ನೀವು ಸಿಎಂ ಆಗಿದ್ದಾಗ ಚಿತ್ರರಂಗಕ್ಕೆ ಏನ್ ಮಾಡಿದ್ದೀರಾ.? ಅಂಬರೀಶ್ ಮೇಲೆ ಯಾಕೆ ಇಷ್ಟು ಆಪಾದನೆ ಮಾಡ್ತಿದ್ದೀರಾ. ಅವರು ಬದುಕಿದ್ದಾಗ ಮಾತಾಡಬೇಕಿತ್ತು. ಅವರು ಹೋದ ಮೇಲೆ ಯಾಕೆ ಇಂತಹ ಹೇಳಿಕೆ ಕೊಡುತ್ತಿದ್ದೀರಾ? ಇದು ನಮಗೆ ಬೇಜಾರು ತರುವ ವಿಷಯವಾಗಿದೆ ಎಂದು ಕಿಡಿಕಾರಿದ್ದಾರೆ.

ಮಿನಿಸ್ಟರ್ ಆದಾಯ ಅಯಮ್ಮನ ಗಂಡ ಏನ್ ಮಾಡಿದ್ರು ಅಂತ ಹಿಂದೆ ಮುಂದೆ ಇರೋರನ್ನ ಕೇಳಿ ಅಂತಾರೆ. ಒಂದು ಕಡೆ ಬೈತಾರೆ, ಮತ್ತೊಂದು ಕಡೆ ಹೊಗಳುತ್ತಾರೆ. ಈ ತರಹ ಮಾತಾಡೋಕೆ ನಿಮಗೆ ಅಧಿಕಾರ ಕೊಟ್ಟವರು ಯಾರು? ಕುಮಾರಸ್ವಾಮಿ ನಾನು ಮಂಡ್ಯಕ್ಕೆ ಅಂಬಿ ಮೃತ ಶರೀರ ಕರೆದುಕೊಂಡು ಹೋಗಿದ್ದು ಅಂತ ಹೇಳಿದ್ರಿ. ಸಾವಿನ ರಾಜಕೀಯ ಯಾಕೆ ಮಾಡ್ತೀರಾ? ಅಭಿ ಒತ್ತಾಯ ಮಾಡಿ ಮಂಡ್ಯಕ್ಕೆ ಕರೆದುಕೊಂಡು ಹೋಗಬೇಕು ಅಂದ ಅಂತ ನೀವೇ ಹೇಳಿದ್ರಿ, ದಾರಿಯಲ್ಲಿ ಹೋಗೋ ದಾಸಪ್ಪ ಸಿಎಂ ಆಗಿದ್ರು ಅವತ್ತು ಅಂಬರೀಶ್‍ಗೆ ಗೌರವ ಕೊಡುತ್ತಿದ್ದರು. ನಾನೇ ಮಾಡಿದೆ ನಾನೇ ಮಾಡಿದೆ ಅಂತ ಯಾಕೆ ಹೇಳ್ತೀರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಬರೀಶ್ ಮೃತ ದೇಹದ ಮುಂದೆ ಮಂಡ್ಯಕ್ಕೆ ಹೋಗೋ ವಿಚಾರ ಅಲ್ಲಿ ಮಾತಾಡಲು ಸಾಧ್ಯವಾಗಿಲ್ಲ. ಸಿಎಂ ಹೇಳಿದಂತೆ ಮಾಡಿ ಅಂತ ಸುಮಲತಾ ಹೇಳಿದ್ರು. ಆದ್ರೆ ಅಭಿ ಮಂಡ್ಯಕ್ಕೆ ಹೋಗಬೇಕು ಅಂತ ಹೇಳಿದ್ರು. ಆಗ ಸುಮಲತಾ ಅಭಿ ಹೇಳಿದಂತೆ ಮಾಡಿ ಅಂತ ಹೇಳಿದ್ರು. ಮಂಡ್ಯಕ್ಕೆ ಕರೆದುಕೊಂಡು ಹೋಗಬೇಕು ಅಂತ ಸುಮಲತಾ, ಅಭಿ ಹೇಳಿದ್ರು. ಈಗ ಯಾಕೆ ತಿರುಚಿ ಮಾತಾಡ್ತೀರಾ. ಕುಮಾರಸ್ವಾಮಿ ಅವ್ರು ಕೆಟ್ಟ ಮನಸ್ಥಿತಿ ಬಿಟ್ಟು ಬಿಡಿ. ಇನ್ನು ಬೆಳೆಯಿತ್ತೀರಾ. ಅಂಬರೀಶ್ ಬಗ್ಗೆ ಮಾತಾಡೋರು 10 ಸಾರಿ ಯೋಚನೆ ಮಾಡಿ ಮಾತಾಡಿ ರಾಕ್ ಲೈನ್ ಎಚ್ಚರಿಕೆ ನೀಡಿದ್ದಾರೆ.

The post ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ: ಹೆಚ್‍ಡಿಕೆಗೆ ರಾಕ್‍ಲೈನ್ ವಾರ್ನಿಂಗ್ appeared first on Public TV.

Source: publictv.in

Source link