BIGG BOSS; ದಿವ್ಯಾ ಉರುಡುಗ ಮೋಸ ಮಾಡಿದ್ರಾ?

BIGG BOSS; ದಿವ್ಯಾ ಉರುಡುಗ ಮೋಸ ಮಾಡಿದ್ರಾ?

ದಿನದಿಂದ ದಿನಕ್ಕೆ ಬಿಗ್​ ಬಾಸ್​ ಮನೆ ಕಾವೇರುತ್ತಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಸಂಬಂಧಗಳನ್ನು ಕಟ್ಟಿಕೊಂಡು ಅಣ್ಣ ತಂಗಿ, ಬೆಸ್ಟ್​ ಫ್ರೆಂಡ್ಸ್​ ಅಂತೆಲ್ಲಾ ಹೇಳುತ್ತಿದ್ದವರು, ಈಗ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ದಿನ ಕಳೆಯುತ್ತಿದ್ದಂತೆ ಒಂದೊಂದೇ ಕೊಂಡಿ ಕಳಚುತ್ತಿದ್ದಾರೆ.

ನಿನ್ನೆಯ ಎಪಿಸೋಡ್​ ನೋಡಿದ್ರೆ ಇದು ಇನ್ನೂ ಸ್ಪಷ್ಟವಾಗಿ ಗೊತ್ತಾಗ್ತಿದೆ. ಚಿನ್ನದ ಮೊಟ್ಟೆ ಟಾಸ್ಕ್​ನ ನಂತರ ಹಣ ಕಳೆದುಕೊಂಡ ಸ್ಪರ್ಧಿಗಳು ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಅವರು ಹಣ ಗಳಿಸುವುದು ಅನಿವಾರ್ಯ ಕೂಡ ಹೌದು. ಬಿಗ್​ ಬಾಸ್​ ನೀಡಿರುವ ‘ಗಳಿಸಿ ಉಳಿಸಿ’ ಟಾಸ್ಕ್​ನ ನೋಟ್​ ಮುದ್ರಿಸುವ ಟಂಕ ಶಾಲೆಯಲ್ಲಿ ಕ್ಯಾಪ್ಟನ್​ ದಿವ್ಯಾ ಉರುಡುಗ ಹಾಗೂ ಪ್ರಶಾಂತ್​ ನಡುವೆ ದೊಡ್ಡ ಕಾಳಗ ನಡೆದಿದೆ. ಬಜರ್​ ಆದ ತಕ್ಷಣ ಮೊದಲು ಓಡಿ ಹೋಗಿ ಏಪ್ರಾನ್​ ಯಾರು ಧರಿಸುತ್ತಾರೊ ಅವರಿಗೆ ನೋಟ್​ ಮುದ್ರಿಸಲು ಅವಕಾಶ ಇರುತ್ತದೆ. ಹೀಗಾಗಿ ಎಲ್ಲರೂ ಅಲರ್ಟ್​ ಆಗಿ ಇರುತ್ತಾರೆ. ಬಜರ್​ ಆದ ತಕ್ಷಣ ಓಡಿದ ಸದಸ್ಯರು ಏಪ್ರಾನ್​ ಧರಿಸಲು ಹರಸಾಹಸ ಪಡುತ್ತಾರೆ.

blank

ಪ್ರಶಾಂತ್​ ಸಂಬರ್ಗಿ ಮೊದಲು ಹೋಗಿ ಎರಡು ಏಪ್ರಾನ್​ ತೆಗೆದುಕೊಳ್ಳುತ್ತಾರೆ. ಅದೇ ಸಮಯಕ್ಕೆ ಚಂದ್ರಚೂಡ್​ ಒಂದು ಕಸಿದುಕೊಳ್ಳಲು ಪ್ರಯತ್ನಿಸಿದ್ರೇ, ಇತ್ತ ಇನ್ನೊಂದನ್ನು ಮಂಜು ಕಸಿದಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರಶಾಂತ್​ ಚಂದ್ರಚೂಡ್​ ಅವರನ್ನು ತಳ್ಳುತ್ತಾರೆ. ಮಂಜು ಹಾಗೂ ಪ್ರಶಾಂತ್​ ಒಂದೇ ಏಪ್ರಾನ್​ಗೆ ಜೋತು ಬಿಳುತ್ತಾರೆ. ಅಷ್ಟರಲ್ಲಿ ಮಂಜು ಏಪ್ರಾನ್ ಅ​ನ್ನು ಕುತ್ತಿಗೆಗೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾರೆ.

ಕ್ಯಾಪ್ಟನ್​ ಆದ ದಿವ್ಯಾ ಉರುಡುಗ ಬಂದು ಇಬ್ಬರ ನಡುವಿನ ಗೊಂದಲಕ್ಕೆ ಕಾರಣ ಏನು ಎಂಬುವುದನ್ನು ಕೇಳುತ್ತಾರೆ. ಪ್ರಶಾಂತ್​ ಎಕ್ಸ್​ಪ್ಲೇನ್​ ಮಾಡಿ, ನಾನು ಮೊದಲು ಹಿಡಿದುಕೊಂಡಿದ್ದೇ ಮಂಜು ಬಂದ್ರು. ಇದು ಸರಿಯಲ್ಲ ಅಂತಾರೆ. ಇದಕ್ಕೆ ಮಂಜು ತರುಗೇಟು ನೀಡಿ, ಅವರು ಎರಡು ಏಪ್ರಾನ್​ ಇಡ್ಕೊಂಡಿದ್ರು, ಒಂದನ್ನ ಪ್ರಿಯಾಂಕಾ ಹಾಗೂ ಚಂದ್ರಚೂಡ್​ ಅವರು ಕಿತ್ಕೊಂಡಿದ್ರು. ನಾನು ಇನ್ನೊಂದನ್ನು ಏಳೆದು ಕುತ್ತಿಗೆಗೆ ಹಾಕಿಕೊಂಡೆ ಎನ್ನುತ್ತಾರೆ.

blank

ಇದಕ್ಕೆ ದಿವ್ಯಾ ಉರುಡುಗ ಕೊಂಚ ಕನ್​ಫ್ಯೂಸ್​ ಆಗಿ ಎಲ್ಲರ ಹತ್ತಿರ ನಡೆದ ವಿಷಯದ ಕುರಿತು ಕೇಳುತ್ತಾರೆ. ಆದ್ರೇ ನಾನು ನೋಡಿಲ್ಲ, ನೀನು ನೋಡಿಲ್ಲ ಎನ್ನುತ್ತಾರೆ. ನಂತರ ದಿವ್ಯಾ ಸ್ವಲ್ಪ ಯೋಚಿಸಿ ಮಂಜು ಏಪ್ರಾನ್​ ಹಾಕಿದ್ದನ್ನು ನಾನು ನೋಡಿದ್ದಿನಿ ಏಪ್ರಾನ್ ಮಂಜುಗೆ ಕೊಡಿ, ನಾನು ಕ್ಲೀಯರ್​ ಆಗಿದಿನಿ ಎನ್ನುತ್ತಾರೆ.

ಇದಕ್ಕೆ ಕೆರಳಿದ ಪ್ರಶಾಂತ್, ಮಂಜು ನಿಂಗೆ ಆತ್ಮಸಾಕ್ಷಿ ಇದ್ರೇ​ ನಿಜ ಹೇಳು ಎನ್ನುತ್ತಾರೆ. ರಾಂಗ್​ ಡಿಶಿಸನ್​ ಕೊಟ್ಟು ನನ್ನ ಮರ್ಯಾದೆ ಕಳಿಯುತ್ತಿದ್ದಾಳೆ ಎಂದು ಭಾವುಕಾರಾಗಿ ಬೆಡ್​ ರೂಂನಲ್ಲಿ ಅಳುತ್ತಾರೆ.

blank

ಮತ್ತೆ ದಿವ್ಯಾ ಯು ಹತ್ತಿರಾ ಬಂದು, ಕ್ಯಾಪ್ಟನ್​ ಮೋಸ ಮಾಡಿದ್ದೀರಿ ನೀವು. ಮಂಜುನೂ ಮೋಸದ ಆಟ ಆಡ್ತಿದ್ದಾನೆ. ದಿವ್ಯಾ ಮೋಸ ಮಾಡಿದ್ದಾಳೆ ಎಂದು ಕಿರುಚುತ್ತಾರೆ. ನನ್ನ ಮಗನ ಮೇಲೆ ಆಣೆ ಮಾಡ್ತಿನಿ ಮಂಜು ಏಪ್ರಾನ್​ ಹಾಕೊಂಡಿಲ್ಲ. ನೀನು ಪಾರ್ಷಿಯಾಲಿಟಿ ಮಾಡ್ತಿದ್ದಿಯಾ.

ದಿವ್ಯಾ ಥಾಂಕ್ಯೂ, ಆಣೆ ಎಲ್ಲಾ ಮಾಡ್ಬೇಡಿ, ನಾನು ಏನೂ ನೋಡಿದ್ದಿನೊ ಹಾಗೇ ನಿರ್ಧಾರ ತೆಗೆದುಕೊಂಡಿದ್ದಿನಿ. ನಂತರ ರೂಲ್ಸ್​ ಬುಕ್​ ತೆಗೆದು ಮತ್ತೆ ರೂಲ್ಸ್​ ಕುರಿತು ಪಾಠ ಮಾಡ್ತಾರೆ. ಆದ್ರೇ ಇದನ್ನು ಪ್ರಶಾಂತ್ ಖಂಡಿಸುತ್ತಾರೆ.

ಇಲ್ಲಿ ಯಾರದು ತಪ್ಪು, ಯಾರದು ಸರೀ ಎಂಬುವುದನ್ನು ಜನಗಳೇ ನಿರ್ಧರಿಸುತ್ತಾರೆ ಎಂಬುವುದು ಅವರವರ ಫ್ಯಾನ್ಸ್​ಗಳ ಲೆಕ್ಕಾಚಾರ.

The post BIGG BOSS; ದಿವ್ಯಾ ಉರುಡುಗ ಮೋಸ ಮಾಡಿದ್ರಾ? appeared first on News First Kannada.

Source: newsfirstlive.com

Source link