‘ದಾರಿಯಲ್ಲಿ ಹೋಗೋ ದಾಸಪ್ಪ CM ಆಗಿದ್ದರೂ ಅಬರೀಶ್ ಸತ್ತಾಗ ಹಾಗೇ ನೋಡಿಕೊಳ್ತಿದ್ದರು’

‘ದಾರಿಯಲ್ಲಿ ಹೋಗೋ ದಾಸಪ್ಪ CM ಆಗಿದ್ದರೂ ಅಬರೀಶ್ ಸತ್ತಾಗ ಹಾಗೇ ನೋಡಿಕೊಳ್ತಿದ್ದರು’

ಬೆಂಗಳೂರು: ದಿವಂಗತ ರೆಬಲ್ ಸ್ಟಾರ್​ ಅಂಬರೀಶ್ ವಿರುದ್ಧ ಹೆಚ್​​ಡಿ ಕುಮಾರಸ್ವಾಮಿ ಹೇಳಿಕೆಗಳಿಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಕ್​ಲೈನ್​.. ಹೆಚ್​​ಡಿ ಕುಮಾರಸ್ವಾಮಿ ಸಿನಿಮಾ ಕ್ಷೇತ್ರದಲ್ಲಿ ಬೆಳೆದಿರೋದು ತುಂಬಾ ಸಂತೋಷ, ಒಳ್ಳೊಳ್ಳೆ ಚಿತ್ರಗಳನ್ನ ನಿರ್ಮಾಣ ಮಾಡಿಕೊಂಡು ಬಂದಿದ್ದಾರೆ. ಆದರೆ ಕುಮಾರಸ್ವಾಮಿ, ಅಂಬರೀಶ್ ಅಣ್ಣನ ವಿರುದ್ಧ ಮಾತನಾಡ್ತಿರೋದು ತುಂಬಾ ನೋವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅಂಬರೀಶ್​ ಮುಂದೆ ಕೈಕಟ್ಟಿ ನಿಲ್ಲೋಕೆ ನಾನೇನ್​​​ ಗುಲಾಮನೇ.. ಹಿಂಗ್ಯಾಕ್ ಕೇಳಿದ್ರು ಹೆಚ್​ಡಿಕೆ?

ಈ ಹಿಂದೆ ಅವ್ರಿಗೆ ಧೈರ್ಯವಿತ್ತಾ?
ಚಿತ್ರರಂಗದ ಮೇಲೆ ಅಂಬರೀಶ್ ಮೇಲೆ ಯಾಕೆ ಆಪಾದನೆ ಮಾಡ್ತೀರಾ? ಈ ಹಿಂದೆ ಆಪಾದನೆ ಮಾಡೋಕೆ ನಿಮಗೆ ಧೈರ್ಯವಿತ್ತಾ? ಅವರು ಹೋದ್ಮೇಲೆ ಅವರ ವಿರುದ್ಧ ಹೇಳಿಕೆ ಕೊಡ್ತೀರಿ. ಇದರಿಂದ ನಮಗೆ ತುಂಬಾ ಬೇಸರವಾಗುತ್ತದೆ ಎಂದರು.

ಇದನ್ನೂ ಓದಿ: ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ಅಂಬರೀಶ್ -ಶಾಸಕ ರವೀಂದ್ರ ಶ್ರೀಕಂಠಯ್ಯ ಹೊಸ ಬಾಂಬ್

ಇದರರ್ಥ ನಂಗೆ ಗೊತ್ತಾಗ್ತಿಲ್ಲ
ಒಂದು ಕಡೆ ಅಂಬರೀಶ್ ಭ್ರಷ್ಟರು ಎಂದು ಮಾತನಾಡುತ್ತಾರೆ. ಇನ್ನೊಂದು ಕಡೆ ಸ್ನೇಹಿತ ಎಂದು ಮಾತನಾಡ್ತಾರೆ. ಬಯ್ಯೋದು, ಹೊಗಳೋದು ಮಾಡ್ತಾರೆ. ಇದರ ಅರ್ಥ ನಂಗೆ ಗೊತ್ತಾಗ್ತಿಲ್ಲ. ಅಂಬರೀಶ್ ವಿಷಯ ಮಾತನಾಡುವಾಗ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ. ಚಿತ್ರರಂಗ ನಿಮಗೆ ಏನು ಮೋಸ ಮಾಡಿದೆ? ಅದರಿಂದ ಯಾವ ಥರಾ ಲಾಭ ಮಾಡಿಕೊಂಡಿದ್ದೀರಾ ಅನ್ನೋದು ಗೊತ್ತು, ನಿಮ್ಮ ಮನೆಯಲ್ಲೂ ಸಿನಿಮಾದವ್ರು ಇದ್ದಾರೆ. ನೆನಪಿರಲಿ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ‘ಅವರೇ ಮಣ್ಣಾಗೋದು.. ನನ್ನನ್ನ ಕೆರಳಿಸಬೇಡಿ..’- ಸುಮಲತಾ ಆರೋಪಕ್ಕೆ ಕಿಡಿಯಾದ ಹೆಚ್​ಡಿಕೆ

ನೀವು ಸಿಎಂ ಆಗಿದ್ದಾಗ ಚಿತ್ರರಂಗಕ್ಕೆ ಏನು ಮಾಡಿದ್ದೀರಾ? ನಿಮ್ಮ ಮನಸ್ಥಿತಿ ಏನು ಅನ್ನೋದು ಎಲ್ಲರಿಗೂ ಗೊತ್ತು. ಹೀಗಾಗಿ ನಿಮ್ಮ ಬಳಿ ಯಾರೂ ಏನೂ ಕೇಳಿಲ್ಲ. ಅಂಬರೀಶ್ ಸತ್ತಾಗ ನಾನು ಮಂಡ್ಯಗೆ ಕರೆದುಕೊಂಡು ಹೋಗಿದ್ದೇನೆ ಎಂದು ಹೇಳ್ತೀರಿ.. ಸ್ವಾಮಿ ನಮ್ಮ ಬಳಿ ದಾಖಲೆ ಇದೆ. ‘ಅಭಿ ಒತ್ತಾಯ ಮಾಡಿದರು. ಮಂಡ್ಯಕ್ಕೆ ಮೃತದೇಹ ತೆಗೆದುಕೊಂಡು ಹೋಗಬೇಕು ಎಂದು’ ಅಂತಾ ನಿಮ್ಮ ಬಾಯಾರೇ ನೀವೇ ಹೇಳಿದ್ದೀರಿ ಸ್ವಾಮಿ.. ಸಾವಿನ ರಾಜಕಾರಣ ಈಗ ಯಾಕೆ ಮಾಡುತ್ತೀರಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪ್ರಜ್ವಲ್​ ಹೆಸರು ಹೇಳಿ ನಮ್ಮ ಕುಟುಂಬ ಒಡೆಯಲು ಮುಂದಾಗಿದ್ದೀರಾ? ಸುಮಲತಾಗೆ ಹೆಚ್​ಡಿಕೆ ಪ್ರಶ್ನೆ

ನಿಮಗೆ ಪುಣ್ಯ ಬಂದಿದೆ
ಅಂಬರೀಶ್ ಅಣ್ಣನ ಬಗ್ಗೆ ಯಾರು ಮಾತನಾಡಿಲ್ಲ ಹೇಳಿ? ದಾರಿಯಲ್ಲಿ ಹೋಗುವ ದಾಸಪ್ಪ ಸಿಎಂ ಆಗಿದ್ದರನೂ ಇಂತಹ ಕೆಲಸಗಳನ್ನ ಮಾಡಿಯೇ ಮಾಡ್ತಾರೆ. ಸರ್ಕಾರದ ಗೌರವದೊಂದಿಗೆ ಕಳುಹಿಸಿಕೊಟ್ಟಿದ್ದೀರಿ ಎಂದು ಹೇಳ್ತೀರಿ. ಮೊನ್ನೆ ಸಂಚಾರಿ ವಿಜಯ್ ಮೃತಪಟ್ಟಾಗಲೂ ಸರ್ಕಾರಿ ಗೌರವದಿಂದ ಅಂತ್ಯಕ್ರಿಯೆ ಮಾಡಲಾಗಿದೆ. ನೀವು ಸ್ವಂತವಾಗಿ ಏನು ಮಾಡಿದ್ದೀರಿ? ಅದರಿಂದ ನಿಮಗೆ ಒಂದಿಷ್ಟು ಲಾಭವಾಗಿದೆ. ಪುಣ್ಯ ಬಂದಿದೆ ಅಂತಾ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ: ‘ಅಂಬರೀಶ್​​ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗೆ ಇಲ್ಲ’

ಇದನ್ನೂ ಓದಿ: ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ..? ಸುಮಲತಾ ತೀಕ್ಷ್ಣ ಮಾತು

ಇದನ್ನೂ ಓದಿ: ಕುಮಾರಸ್ವಾಮಿ-ಸುಮಲತಾ ವಾಕ್ಸಮರ -ಹೆಚ್​ಡಿಕೆ ಗರಂ ಆಗ್ತಿರೋದು ಯಾಕೆ?

The post ‘ದಾರಿಯಲ್ಲಿ ಹೋಗೋ ದಾಸಪ್ಪ CM ಆಗಿದ್ದರೂ ಅಬರೀಶ್ ಸತ್ತಾಗ ಹಾಗೇ ನೋಡಿಕೊಳ್ತಿದ್ದರು’ appeared first on News First Kannada.

Source: newsfirstlive.com

Source link