‘ಅಂಬಿ ಸ್ಮಾರಕ ಯಾಕೆ? ಏನ್ ಸಾಧನೆ ಮಾಡಿದ್ದಾನೆ ಅಂತ ದೊಡ್ಡಣ್ಣ ಮೇಲೆ ಪೇಪರ್ ಎಸೆದಿದ್ರು ಹೆಚ್​ಡಿಕೆ’

‘ಅಂಬಿ ಸ್ಮಾರಕ ಯಾಕೆ? ಏನ್ ಸಾಧನೆ ಮಾಡಿದ್ದಾನೆ ಅಂತ ದೊಡ್ಡಣ್ಣ ಮೇಲೆ ಪೇಪರ್ ಎಸೆದಿದ್ರು ಹೆಚ್​ಡಿಕೆ’

ಇದೇ ರೀತಿ ಮಾತಾಡ್ಬೇಕು ಮಾತಾಡಲಿ, ಜಿಲ್ಲೆಯ ಜನಕ್ಕೆ ಒಳ್ಳೇದಾಗುತ್ತೆ. ಅವರ ನಿಜ ಸ್ವರೂಪ ಏನು ಅನ್ನೋದು ಜನಕ್ಕೆ ಗೊತ್ತಾಗಿದೆ, ಇನ್ನೂ ಬಿಚ್ಚಿಡ್ತಿದ್ದಾರೆ. ಸಂತೋಷ ಅಂತ ಸಂಸದೆ ಸುಮಲತಾ ಅಂಬರೀಷ್​ ಶಾಸಕ ರವೀಂದರ ಶ್ರೀಕಂಠಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಅಂಬರೀಶ್​ ಮುಂದೆ ಕೈಕಟ್ಟಿ ನಿಲ್ಲೋಕೆ ನಾನೇನ್​​​ ಗುಲಾಮನೇ.. ಹಿಂಗ್ಯಾಕ್ ಕೇಳಿದ್ರು ಹೆಚ್​ಡಿಕೆ?

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಾಗೂ ಶಾಸಕ ರವೀಂದರ ಶ್ರೀಕಂಠಯ್ಯ ಅವರ ಆರೋಪಗಳಿಗೆ ತಿರುಗೇಟು ಕೊಟ್ಟರು. ಅಂಬರೀಷ್​ ಅವರ ಕಾಲದಲ್ಲೇ ಗಣಿಗಾರಿಕೆ ನಡೆದಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ಇದು ಲೂಸ್​ ಟಾಕ್​​ಗೆ ನಂಬರ್​ 1 ಪಾಯಿಂಟ್​. ಜವಾಬ್ದಾರಿ ಇರಬೇಕಾದ ಶಾಸಕ ಈ ರೀತಿ ಲೂಸ್​ ಟಾಕ್ ಮಾಡೋ ಬದಲು ಆ ಕಾಲದಲ್ಲಿ ಏನೆಲ್ಲಾ ಅಕ್ರಮ ನಡೆದಿದೆ ದಾಖಲೆ ತರಲಿ. ಇಬ್ಬರೂ ಸೇರಿ ಕ್ರಮ ತೆಗೆದುಕೊಳ್ಳೋಣ. ಇಷ್ಟು ವರ್ಷ ಯಾಕೆ ಸುಮ್ಮನಿದ್ರೋ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ಅಂಬರೀಶ್ -ಶಾಸಕ ರವೀಂದ್ರ ಶ್ರೀಕಂಠಯ್ಯ ಹೊಸ ಬಾಂಬ್

ಅಂಬರೀಷ್​ ಅವರ ಹೆಸರು ಉಚ್ಛರಿಸೋದಕ್ಕೆ ಯೋಗ್ಯತೆ ಇಲ್ಲದವರೆಲ್ಲಾ ಈಗ ಲೆಫ್ಟ್,​ ರೈಟ್,​ ಸೆಂಟರ್ ಮಾತಾಡ್ತಿದ್ದಾರೆ. ನಿಮ್ಮ ಸಾಧನೆ ಅಂತ ಏನೂ ಇಲ್ವ.? ಎಂದು ರವೀಂದ್ರ ಅವರನ್ನ ಪ್ರಶ್ನಿಸಿದ್ರು. ಅಂಬರೀಷ್ ಅವರ ಕಾಲದಲ್ಲಿ​ ಅಕ್ರಮ ಆಗಿದೆ ಅಂತಿದ್ದೀರಲ್ಲ ದಾಖಲೆ ಇದ್ರೆ ಖಂಡಿತ ತೆಗೆದುಕೊಂಡು ಬಂದು ದೂರು ಕೊಡಿ. ಯಾರು ಬೇಡ ಅಂದ್ರು? ಇಷ್ಟು ವರ್ಷ ನೀವೇ ಇದ್ರಲ್ಲ. ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಕೇಳಿದ್ರು.

ಇದನ್ನೂ ಓದಿ: ‘ಅವರೇ ಮಣ್ಣಾಗೋದು.. ನನ್ನನ್ನ ಕೆರಳಿಸಬೇಡಿ..’- ಸುಮಲತಾ ಆರೋಪಕ್ಕೆ ಕಿಡಿಯಾದ ಹೆಚ್​ಡಿಕೆ

ಇನ್ನು ಅಂಬರೀಷ್​ ಸ್ಮಾರಕ ನಾನು ಮಾಡಿಸಿದ್ದು ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಮಾತನಾಡಿದ ಸುಮಲತಾ, ಅಂಬರೀಷ್​ ಅವರ ಸ್ಮಾರಕವನ್ನ ಅವರೇನು ಮಾಡಿಲ್ಲ. ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೈನ್ ಮಾಡಿ ಸ್ಮಾರಕಕ್ಕೆ ಅಪ್ರೂವಲ್ ಕೊಟ್ಟರು. ಅಂಬರೀಷ್​ ಸ್ಮಾರಕದ ಬಗ್ಗೆ ಮಾತಾಡೋಕೆ ಅವತ್ತು ದೊಡ್ಡಣ್ಣ ಹಾಗೂ ಶಿವರಾಮ್ ಹೋಗಿದ್ದಾಗ ಅವರು ಯಾವ ರೀತಿ ಮಾತಾಡಿದ್ದರು ಅನ್ನೋದನ್ನ ಅವರು ನೆನಪು ಮಾಡಿಕೊಳ್ಳಬೇಕು. ಪೇಪರ್​​ನ ಮುಖಕ್ಕೆ ಎಸೆದು ಏಕವಚನದಲ್ಲಿ ಮಾತಾಡಿದ್ದರು ಸೋ ಕಾಲ್ಡ್​​ ಸ್ನೇಹಿತ ಅಂತ ಹೆಚ್​.ಡಿ ಕುಮಾರಸ್ವಾಮಿಗೆ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ: ಪ್ರಜ್ವಲ್​ ಹೆಸರು ಹೇಳಿ ನಮ್ಮ ಕುಟುಂಬ ಒಡೆಯಲು ಮುಂದಾಗಿದ್ದೀರಾ? ಸುಮಲತಾಗೆ ಹೆಚ್​ಡಿಕೆ ಪ್ರಶ್ನೆ

ಆದಿಚುಂಚನಗಿರಿ ಶ್ರೀಗಳ ಬಳಿ ನನ್ನ ನೋವನ್ನ ಹಂಚಿಕೊಂಡಿದ್ದೆ. ಇದು ತುಂಬಾ ತಪ್ಪು ಅಂತ ಅವರು ನನಗೆ ಧೈರ್ಯ ಹೇಳಿದ್ದರು. ಅಂಬರೀಷ್​ ಸ್ಮಾರಕದ ಕ್ರೆಡಿಟ್​ ತೆಗೆದುಕೊಳ್ಳೋದಾ? ಯಾರೇ ಸಿಎಂ ಆಗಿದ್ರು ಆ ಕೆಲಸ ಮಾಡ್ತಿದ್ರು. ಇವತ್ತು ಸಿಎಂ ಬಿಎಸ್​ವೈ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ವಿಷ್ಣುವರ್ಧನ್ ಅವರ ಸ್ಮಾರಕಕ್ಕೂ ಕೊಟ್ಟಿದ್ದಾರೆ ಎಂದರು. ದೊಡ್ಡಣ್ಣ ಕಣ್ಣೀರು ಹಾಕಿದ್ರು. 40-50 ವರ್ಷಗಳಿಂದ ಸಿನಿಮಾ ರಂಗದಲ್ಲಿ ನಾನು ಸೇವೆ ಮಾಡಿರುವವನು. ಕುಮಾರಸ್ವಾಮಿ ಪೇಪರ್​ ತೆಗೆದು ನನ್ನ ಮುಖಕ್ಕೆ ಎಸೆದ್ರು ನನಗೆ ಯಾವತ್ತೂ ಈ ರೀತಿ ಅವಮಾನ ಆಗಿರಲಿಲ್ಲ ಅಂದಿದ್ರು. ನಾನ್ಯಾಕೆ ಸ್ಮಾರಕ ಮಾಡಿಸಬೇಕು. ಏನ್ ಸಾಧನೆ ಮಾಡಿದ್ದಾನೆ ಅವನು ಅಂದಿದ್ದರು ಅಂತ ಸುಮಲತಾ ವಿವರಿಸಿದ್ರು.

ಇದನ್ನೂ ಓದಿ: ‘ಅಂಬರೀಶ್​​ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗೆ ಇಲ್ಲ’

ಇದನ್ನೂ ಓದಿ: ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ..? ಸುಮಲತಾ ತೀಕ್ಷ್ಣ ಮಾತು
ಇದನ್ನೂ ಓದಿ: ಕುಮಾರಸ್ವಾಮಿ-ಸುಮಲತಾ ವಾಕ್ಸಮರ -ಹೆಚ್​ಡಿಕೆ ಗರಂ ಆಗ್ತಿರೋದು ಯಾಕೆ?
ಇದನ್ನೂ ಓದಿ: ‘ದಾರಿಯಲ್ಲಿ ಹೋಗೋ ದಾಸಪ್ಪ CM ಆಗಿದ್ದರೂ ಅಬರೀಶ್ ಸತ್ತಾಗ ಹಾಗೇ ನೋಡಿಕೊಳ್ತಿದ್ದರು’

The post ‘ಅಂಬಿ ಸ್ಮಾರಕ ಯಾಕೆ? ಏನ್ ಸಾಧನೆ ಮಾಡಿದ್ದಾನೆ ಅಂತ ದೊಡ್ಡಣ್ಣ ಮೇಲೆ ಪೇಪರ್ ಎಸೆದಿದ್ರು ಹೆಚ್​ಡಿಕೆ’ appeared first on News First Kannada.

Source: newsfirstlive.com

Source link