ಅಮೆರಿಕದಿಂದ ತಲೈವಾ ರಿಟರ್ನ್- ಅಭಿಮಾನಿಗಳಲ್ಲಿ ಸಂಭ್ರಮ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಯುಎಸ್‍ನಿಂದ ಚೆನ್ನೈಗೆ ಬಂದಿಳಿದ್ದಿದ್ದು, ವಿಮಾನ ನಿಲ್ದಾಣದಿಂದ ಬರುತ್ತಿದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಲೈವಾ ಅವರು ತಮ್ಮ ಪತ್ನಿ ಲತಾ ಅವರೊಂದಿಗೆ ಯುಎಸ್‍ನಲ್ಲಿ ಮೂರು ವಾರ ಕಳೆದ ನಂತರ ಇಂದು ಮಧ್ಯರಾತ್ರಿಯಲ್ಲಿ ಚೆನ್ನೈಗೆ ಬಂದಿಳಿದಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ತಮ್ಮ ಕಾರಿನ ಕಡೆ ನಡೆದುಕೊಂಡು ಹೋಗುತ್ತಿದ್ದು, ಅವರು ನೀಲಿ ಶರ್ಟ್, ಕಪ್ಪು ಟೋಪಿ ಮತ್ತು ಫೇಸ್ ಮಾಸ್ಕ್ ಧರಿಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ಅವರನ್ನು ನೋಡಲು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಕಾಯುತ್ತಿದ್ದರು. ಇದನ್ನೂ ಓದಿ: ಒಂದು ರೀತಿ ನನ್ನ ಮಗನನ್ನು ನಾನು ಕಳ್ಕೊಂಡಂತೆ ಭಾಸವಾಗ್ತಿದೆ: ಕಣ್ಣೀರಿಟ್ಟ ವಿಜಿ

ರಜನಿಕಾಂತ್ ಮತ್ತು ಅವರ ಪತ್ನಿ ಲತಾ ಅವರೊಂದಿಗೆ ಯುಎಸ್‍ನಲ್ಲಿರುವ ಮಾಯೊ ಕ್ಲಿನಿಕ್‍ನಲ್ಲಿ ಆರೋಗ್ಯ ತಪಾಸಣೆಗಾಗಿ ಹೋಗಿದ್ದರು. ಅವರ ಆರೋಗ್ಯ ತಪಾಸಣೆ ಮುಗಿದ ನಂತರ ಯುಎಸ್‍ನಲ್ಲಿ ವಾರಗಳು ಕಳೆದು ಅಲ್ಲಿ ಅವರ ಅಭಿಮಾನಿಗಳನ್ನು ಭೇಟಿಯಾದರು.

ರಜಿನಿಕಾಂತ್‍ಗೆ 2016ರಲ್ಲಿ ಮೂತ್ರಪಿಂಡದ ಸಮಸ್ಯೆ ಇರುವುದರಿಂದ ವರ್ಷಕ್ಕೆ ಒಂದು ಬಾರಿಯಂತೆ ಯುಎಸ್‍ಗೆ ಅವರು ಹೋಗಿ ಬರುತ್ತಿದ್ದರು. ‘ಅನ್ನತ್’ ಶೂಟಿಂಗ್ ಅನ್ನು ಪುನಾರಾಂಭಿಸಲು ರಜನಿ ಚೆನ್ನೈಗೆ ಮರಳಿದ್ದಾರೆ. ಇದನ್ನೂ ಓದಿ: ಸುಮಲತಾಗೆ ಯಾರೂ ಇಲ್ಲ ಅಂದ್ಕೋಬೇಡಿ, ಜೂ. ರೆಬೆಲ್ ಸ್ಟಾರ್ ಇದ್ದಾನೆ: ರಾಕ್‍ಲೈನ್ ವೆಂಕಟೇಶ್

ಕೋವಿಡ್-19 2ನೇ ಅಲೆ ಬರುವ ಮೊದಲೇ ಇದರ ಬಹುಪಾಲು ಶೂಟಿಂಗ್ ಪೂರ್ಣಗೊಂಡಿದೆ. ಇತ್ತೀಚೆಗೆ ಚಿತ್ರದ ಪ್ರೊಡಕ್ಷನ್ ಹೌಸ್ ‘ಸನ್ ಪಿಕ್ಚರ್ಸ್’ ದೀಪಾವಳಿಯ ‘ನವಂಬರ್ 04’ ರಂದು ಅನ್ನತ್ ರಿಲೀಸ್ ಆಗುತ್ತದೆ. ‘ಸಿರುಥೈ ಶಿವಾ’ ನಿರ್ದೇಶನದ ಅಣ್ಣಾಥೆ ಗ್ರಾಮೀಣ ಮನರಂಜನೆಯ ಕಥೆಯಾಗಿದೆ. ಈ ಸಿನಿಮಾದಲ್ಲಿ ರಜಿನಿಕಾಂತ್, ನಯನತಾರಾ, ಕೀರ್ತಿ ಸುರೇಶ್, ಮೀನಾ, ಖುಷ್ಬು, ಪ್ರಕಾಶ್ ರಾಜ್ ಮತ್ತು ಸೂರಿ ನಟಿಸಿದ್ದಾರೆ. ಈ ಚಿತ್ರಕ್ಕೆ ‘ಡಿ ಇಮ್ಮನ್’ ಸಂಗೀತ ಸಂಯೋಜಿಸಿದ್ದಾರೆ.

The post ಅಮೆರಿಕದಿಂದ ತಲೈವಾ ರಿಟರ್ನ್- ಅಭಿಮಾನಿಗಳಲ್ಲಿ ಸಂಭ್ರಮ appeared first on Public TV.

Source: publictv.in

Source link