ಛೇ.. ಎಂಥ ಟ್ರಾಜಿಡಿ ನೋಡಿ; ಟ್ರ್ಯಾಕ್ಟರ್​ ಹರಿದು 5 ವರ್ಷದ ಬಾಲಕ ಸಾವು ನಂತರ ಚಾಲಕ ಏನ್​​ಮಾಡ್ದಾ ಗೊತ್ತಾ?

ಛೇ.. ಎಂಥ ಟ್ರಾಜಿಡಿ ನೋಡಿ; ಟ್ರ್ಯಾಕ್ಟರ್​ ಹರಿದು 5 ವರ್ಷದ ಬಾಲಕ ಸಾವು ನಂತರ ಚಾಲಕ ಏನ್​​ಮಾಡ್ದಾ ಗೊತ್ತಾ?

ಚಾಮರಾಜನಗರ: ಟ್ರಾಕ್ಟರ್ ಹರಿದು ಗಾಯಗೊಂಡಿದ್ದ 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಸವಕನಪಾಳ್ಯದಲ್ಲಿ ನಡೆದಿದೆ. ಇತ್ತ ಬಾಲಕ ಸಾವನ್ನಪ್ಪಿದ ವಿಷಯ ತಿಳಿಯುತ್ತಿದಂತೆ ಟ್ರ್ಯಾಕ್ಟರ್ ಚಲಾಯಿಸಿದ್ದ ಯುವಕ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ.

blank

ಬಾಲಕ ಹರ್ಷ(5) ಟ್ರ್ಯಾಕ್ಟರ್​ ಹರಿದು ಸಾವನ್ನಪ್ಪಿದ್ದು, ಟ್ರ್ಯಾಕ್ಟರ್​ ಚಲಾಯಿಸುತ್ತಿದ್ದ ಸುನೀಲ್ (23) ಆತ್ಮಹತ್ಯಗೆ ಶರಣಾಗಿದ್ದಾನೆ. ನಿನ್ನೆ ಕ್ರಿಕೆಟ್ ಆಡಲು ಮೈದಾನ ಸಮತಟ್ಟು ಮಾಡುತ್ತಿದ್ದಾಗ ಅಪಘಾತ ನಡೆದಿದೆ. ಆಟದ ಮೈದಾನದಲ್ಲಿ ನಿಂತಿದ್ದ ಟ್ರ್ಯಾಕ್ಟರ್ ಅನ್ನು ಸುನೀಲ್​ ಚಲಾಯಿಸಿದ್ದ. ಕೂಡಲೇ ಘಟನೆಯಲ್ಲಿ ಗಾಯಗೊಂಡಿದ್ದ ಬಾಲಕನ್ನು ಗುಂಡ್ಲುಪೇಟೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ದಾರಿ ನಡುವೆಯೇ ಬಾಲಕ ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಣೆ ಮಾಡಿದ್ದರು. ಬಾಲಕ ಸಾವನ್ನಪ್ಪಿದ ವಿಷಯ ತಿಳಿದು ಮೈಸೂರಿಗೆ ತೆರಳಿ ಸುನೀಲ್ (23) ಮನೆಯ ರೂಮ್​ನಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೇಗೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

The post ಛೇ.. ಎಂಥ ಟ್ರಾಜಿಡಿ ನೋಡಿ; ಟ್ರ್ಯಾಕ್ಟರ್​ ಹರಿದು 5 ವರ್ಷದ ಬಾಲಕ ಸಾವು ನಂತರ ಚಾಲಕ ಏನ್​​ಮಾಡ್ದಾ ಗೊತ್ತಾ? appeared first on News First Kannada.

Source: newsfirstlive.com

Source link