‘ಫೋನ್ ಟ್ಯಾಪಿಂಗ್ ನಿಮಗೆ ಅಭ್ಯಾಸ ತಾನೆ? ಶ್ರೀಗಳ ಫೋನ್ ಕೂಡ ಟ್ಯಾಪ್ ಆಗಿತ್ತು.. ಇದು ಫ್ಯಾಕ್ಟ್​’

‘ಫೋನ್ ಟ್ಯಾಪಿಂಗ್ ನಿಮಗೆ ಅಭ್ಯಾಸ ತಾನೆ? ಶ್ರೀಗಳ ಫೋನ್ ಕೂಡ ಟ್ಯಾಪ್ ಆಗಿತ್ತು.. ಇದು ಫ್ಯಾಕ್ಟ್​’

ಬೆಂಗಳೂರು: ಸಂಸದೆ ಸುಮಲತಾ ಅಂಬರೀಷ್​​, ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಹೆಚ್​ಡಿಕೆ ಮಾಡಿದ್ದ ಆರೋಪಗಳಿಗೆ ತಿರುಗೇಟು ಕೊಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ, ಕುಮಾರಸ್ವಾಮಿಯೇ ಭ್ರಷ್ಟಾಚಾರದಲ್ಲಿ ತೊಡಗಿ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ಹೇಳಿದ್ರು.

ಇದನ್ನೂ ಓದಿ: ‘ಅಂಬಿ ಸ್ಮಾರಕ ಯಾಕೆ? ಏನ್ ಸಾಧನೆ ಮಾಡಿದ್ದಾನೆ ಅಂತ ದೊಡ್ಡಣ್ಣ ಮೇಲೆ ಪೇಪರ್ ಎಸೆದಿದ್ರು ಹೆಚ್​ಡಿಕೆ

ಸುಮಲತಾ ಎಡ ಬಲದಲ್ಲಿ ಇರುವವರೇ ಅಕ್ರಮ ಗಣಿಗಾರಿಕೆ ಡೀಲಿಂಗ್​ಗೆ ಇಳಿದಿದ್ದಾರೆ. ಅದರ ಸಂಬಂಧ ನಮ್ಮ ಬಳಿ ವಿಡಿಯೋ ಇದೆ. ಚುನಾವಣೆ ಬಂದಾಗ ರಿಲೀಸ್​ ಮಾಡ್ತೀನಿ ಎಂದು ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಸುಮಲತಾ ಟಾಂಗ್ ಕೊಟ್ಟರು. ಚುನಾವಣೆ ಬಂದಾಗ ಯಾಕೆ? ಈಗಲೇ ರಿಲೀಸ್ ಮಾಡಿ. ನನಗೆ ಯಾವ ಭಯನೂ ಇಲ್ಲ. ಎಡ ಬಲ ಡೀಲಿಂಗ್ ಮಾಡೋಕೆ ನಾನು ಯಾರನ್ನೂ ಇಟ್ಟುಕೊಂಡಿಲ್ಲ. ಅದೆಲ್ಲಾ ಅವರ ಅಭ್ಯಾಸ. ಅವರು ಬಳಸುವ ಭಾಷೆಯಲ್ಲೇ ಗೊತ್ತಾಗುತ್ತೆ ಬೆಳಗಾದ್ರೆ ಅವರು ಯಾವ್ಯಾವ ಡೀಲಿಂಗ್ಸ್​ ಮಾಡ್ತಾರೆ, ಯಾವ್ಯಾವ ಕೆಲಸಕ್ಕೆ ಯಾರನ್ನ ಅಪಾಯಿಂಟ್​ ಮಾಡಿದ್ದಾರೆ ಗೊತ್ತಾಗುತ್ತೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಅಂಬರೀಶ್​ ಮುಂದೆ ಕೈಕಟ್ಟಿ ನಿಲ್ಲೋಕೆ ನಾನೇನ್​​​ ಗುಲಾಮನೇ.. ಹಿಂಗ್ಯಾಕ್ ಕೇಳಿದ್ರು ಹೆಚ್​ಡಿಕೆ?

ಕೇಂದ್ರ ಪುರಸ್ಕೃತ ಯೋಜನೆಗಳನ್ನ ಇಂಪ್ಲಿಮೆಂಟ್​ ಮಾಡೋ ಕೆಲಸ ಸಂಸದರದ್ದು. ಅದ್ರಲ್ಲಿ ಪಿಎಂಜಿಎಸ್​ವೈ ಅಡಿ ರಸ್ತೆಗಳನ್ನ ಅಪ್ರೂವ್​ ಮಾಡಿಸಿ ನಾವು ಹಾಕ್ತೀವಿ. ಅದನ್ನ ಅಪ್ರೂವ್ ಮಾಡಿ ಎಷ್ಟು ತಿಂಗಳಾದ್ರೂ ಕೆಲಸ ಆರಂಭ ಆಗಿರಲ್ಲ. ಇದನ್ನ ಸಭೆಯಲ್ಲಿ ಪ್ರಶ್ನಿಸಿದಾಗ ಅಲ್ಲಿನ ಸ್ಥಳೀಯ ಶಾಸಕರು ಇದಕ್ಕೆ ವಿರೋಧಿಸುತ್ತಿದ್ದಾರೆ ಅಂದಿದ್ರು. ಸ್ಥಳೀಯರನ್ನ ವಿಚಾರಿಸಿದಾಗ, ಇಲ್ಲಿ ಪ್ರತಿಯೊಂದಕ್ಕೂ ಅಡ್ಡಿ, ಒಂದು ಉದ್ಘಾಟನೆ ಮಾಡೋಕೂ ಬಿಡ್ತಿಲ್ಲ ಅಂದ್ರು. ಯಾಕಂದ್ರೆ ಕಮಿಷನ್ ಬಂದ್ರೆನೇ ಬಿಡ್ತೀವಿ, ಇಲ್ಲವಾದ್ರೆ ಯಾವುದೇ ಯೋಜನೆಗೂ ಬಿಡಲ್ಲ ಅಂತಾರೆ. ಹೀಗೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರಕ್ಕೆ ನಿಂತಿದ್ದೀರ ಎಂದು ಹೆಚ್​ಡಿಕೆ ವಿರುದ್ಧ ಆರೋಪ ಮಾಡಿದ್ರು.

ಇದನ್ನೂ ಓದಿ: ಅಕ್ರಮ ಕಲ್ಲು ಗಣಿಗಾರಿಕೆ ಆರಂಭಿಸಿದ್ದೇ ಅಂಬರೀಶ್ -ಶಾಸಕ ರವೀಂದ್ರ ಶ್ರೀಕಂಠಯ್ಯ ಹೊಸ ಬಾಂಬ್

ಪ್ರತಿ ಕೆಲಸದಲ್ಲೂ ಭ್ರಷ್ಟಾಚಾರ.. ಹಿಂದಿಯಲ್ಲಿ ಒಂದು ಮಾತಿದೆ ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟೆ ಅಂತ.. ಅಂದ್ರೆ ಯಾರು ಕಳ್ಳನಾಗಿರ್ತಾನೋ ಅವನೇ ಬಂದು ಪೊಲೀಸ್​ ಮೇಲೆ ಆರೋಪ ಮಾಡ್ತಾನಂತೆ. ಆ ರೀತಿ ಇವರು. ನನ್ನ ಬಗ್ಗೆ ದೂರುಗಳಿದ್ರೆ ಎರಡು ವರ್ಷದಿಂದ ಯಾಕೆ ಕಾಯುತ್ತಿದ್ರಿ? ನಾನು ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ಶುರು ಮಾಡಿದ್ದಕ್ಕೆ ನನ್ನ ಮೇಲೆ ಪಾಯಿಂಟ್​ ಮಾಡ್ತಿದ್ದಾರೆ.​ ಈ ರೆಕಾರ್ಡ್ಸ್​ ಎಲ್ಲಾ ಕದ್ದು ಮುಚ್ಚಿ ಇಟ್ಟುಕೊಂಡಿದ್ರಾ? ಕದ್ದು ಮುಚ್ಚಿ ಫೋನ್ ಟ್ಯಾಪಿಂಗ್ ಮಾಡೋದೆಲ್ಲಾ ನಿಮಗೆ ಆಗಿರೋ ಅಭ್ಯಾಸ ತಾನೆ.? ಸಿಬಿಐ ತನಿಖೆ ನಡೀತಿದ್ಯೋ ಇಲ್ವೋ, ನೀವೇ ಮಾಹಿತಿ ಪಡೆದುಕೊಳ್ಳಿ. ಯಾವ ಕಳ್ಳನೂ ನಾನು ಕಳ್ಳ ಅಂತ ಹೇಳ್ತಾನಾ? ಎಂದು ಪ್ರಶ್ನೆ ಮಾಡಿದ್ರು.

ಇದನ್ನೂ ಓದಿ: ‘ಅವರೇ ಮಣ್ಣಾಗೋದು.. ನನ್ನನ್ನ ಕೆರಳಿಸಬೇಡಿ..’- ಸುಮಲತಾ ಆರೋಪಕ್ಕೆ ಕಿಡಿಯಾದ ಹೆಚ್​ಡಿಕೆ

ಫೋನ್ ಟ್ಯಾಪಿಂಗ್ ವಿಚಾರವಾಗಿ ಮಾತನಾಡಲು ಸಿಬಿಐ ಅಧಿಕಾರಿಗಳು ಎರಡು ಬಾರಿ ನನ್ನನ್ನು ಭೇಟಿಯಾಗಿದ್ದರು. ಯಾರ್ಯಾರು ಆಗ ಪೊಲೀಸ್​ ಇನ್​ಚಾರ್ಜ್​ ಇದ್ರು ಆ ಮಾಹಿತಿ ಎಲ್ಲಾ ಪಡೆದುಕೊಂಡ್ರು. ನಿಮ್ಮ ಫೋನ್ ಟ್ಯಾಪಿಂಗ್ ಆಗ್ತಿದೆ ಅಂತ ಕೆಲ ನಂಬರ್​ಗಳನ್ನ ಕೊಟ್ಟಿದ್ದರು. ಒತ್ತಡ ತಂದು ತಡೆಯೋ ಕೆಲಸ ಮಾಡ್ತಾರಾ ಅಂತ ನಾನು ಕೇಳಿದಾಗ.. ಖಂಡಿತ ಇಲ್ಲ ನಾವು ಇಂಡಿಪೆಂಡೆಂಟ್​ ಏಜೆನ್ಸಿ, ನಾವು ಯಾವುದೇ ಇನ್​ಫ್ಲುಯೆನ್ಸ್​ಗೆ ಒಳಗಅಗಲ್ಲ.. ತನಿಖೆ ಮುಗಿದ ಮೇಲೆ ವರದಿ ಕೊಡ್ತೀವಿ ಅಂದ್ರಿದ್ರು ಅಂತ ಸುಮಲತಾ ತಿಳಿಸಿದ್ರು.

ಇದನ್ನೂ ಓದಿ: ಪ್ರಜ್ವಲ್​ ಹೆಸರು ಹೇಳಿ ನಮ್ಮ ಕುಟುಂಬ ಒಡೆಯಲು ಮುಂದಾಗಿದ್ದೀರಾ? ಸುಮಲತಾಗೆ ಹೆಚ್​ಡಿಕೆ ಪ್ರಶ್ನೆ

ಚುಂಚನಗಿರಿ ಶ್ರೀಗಳ ಫೋನ್ ಟ್ಯಾಪ್ ಆಗಿತ್ತು
ಆದಿಚುಂಚನಗಿರಿ ಶ್ರೀಗಳ ಫೋನ್​ ಕೂಡ ಟ್ಯಾಪ್ ಆಗಿತ್ತು. ಅವರನ್ನ ರಾಜಕೀಯದಲ್ಲಿ ಎಳೆಯೋದು ಸರಿಯಲ್ಲ. ಆದ್ರೂ ಇದು ಫ್ಯಾಕ್ಟ್. ಇವರ ಪ್ರತಿಯೊಂದು ಕೆಲಸಗಳನ್ನ ಎಕ್ಸ್​ಪೋಸ್​ ಮಾಡದೆ ನನಗೆ ಬೇರೆ ವಿಧಿಯಲ್ಲ. ಅವರ ಫೋನ್ ಟ್ಯಾಪಿಂಗ್ ನಡೆದಿತ್ತು ಅಂತ ಸುಮಲತಾ ಹೇಳಿದ್ರು

ಇದನ್ನೂ ಓದಿ: ‘ಅಂಬರೀಶ್​​ ಬಗ್ಗೆ ಮಾತಾಡುವ ಯೋಗ್ಯತೆ ಅವರಿಗೆ ಇಲ್ಲ’

ಮಂಡ್ಯಗೆ ಅಂಬರೀಷ್​ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ಕಷ್ಟ ಆಗುತ್ತೆ.. ಅಭಿಮಾನಿಗಳು ಬಂದ್ರೆ ಸಾರ್ವಜನಿಕರಿಗೆ ತೊಂದರೆ ಆಗುತ್ತೆ. ಅಭಿಷೇಕ್ ಅವರು ಆಸೆ ಪಡ್ತಿದ್ದಾರೆ ಮಂಡ್ಯಕ್ಕೆ ತೆಗೆದುಕೊಂಡು ಹೋಗಬೇಕು ಅಂತ. ಆದ್ರೆ ಕಷ್ಟ ಆಗುತ್ತೆ. ನಾನು ಬಸ್​ ವ್ಯವಸ್ಥೆ ಮಾಡುತ್ತೇನೆ ನೀವೇ ಬನ್ನಿ ಅಂತ ಕುಮಾರಸ್ವಾಮಿಯೇ ಸ್ಪಷ್ಟವಾಗಿ ವಿಡಿಯೋದಲ್ಲಿ ಹೇಳಿದ್ದರು. ಅವರು ಮರೆತಿದ್ದಾರಾ? ಸುಳ್ಳು ಹೇಳ್ತಿದ್ದಾರಾ? ಎಂದು ಕೇಳಿದ್ರು.

ಇದನ್ನೂ ಓದಿ: ಹೆಚ್​​ಡಿಕೆ ಆಡಿಯೋ ಅಸ್ತ್ರ; ಇವ್ರು ಟೆರರಿಸಂ ನಡೆಸುತ್ತಿದ್ದಾರಾ..? ಸುಮಲತಾ ತೀಕ್ಷ್ಣ ಮಾತು

ರಾಜಕಾರಣಕ್ಕೆ ಅಂಬರೀಷ್ ಹೆಸರು ಬೇಡ
ರಾಜ್​ಕುಮಾರ್ ಅವರಾಗಲೀ,​ ವಿಷ್ಣುವರ್ಧನ್ ಆಗಲೀ, ಅಂಬರೀಷ್​ ಆಗಲೀ ಅವರ ಬಗ್ಗೆ ಮಾತಾಡಲು ಸ್ವಲ್ಪ ಸಂಸ್ಕಾರ ಇರಬೇಕು. ರಾಜ್​ಕುಮಾರ್ ಅವರ ಅಂತ್ಯಸಂಸ್ಕಾರ ಮಾಡಿದಾಗಲೂ ಯಾರು ಸಿಎಂ ಆಗಿದ್ದರು ಹೇಳಿ? ಇವರೇ. ತಿಳಿದುಕೊಳ್ಳಿ ಅವರ ಮಾತಿನಲ್ಲಿ ಸತ್ಯ ಎಷ್ಟಿದೆ ಅಂತ? ನಿಮಗೆ ನೈತಿಕತೆ, ಸಂಸ್ಕಾರ ಇದ್ರೆ ನಿಮ್ಮ ಕೆಳಮಟ್ಟದ ರಾಜಕಾರಣಕ್ಕೆ ಅಂಬರೀಷ್​ ಅವರ ಹೆಸರು ಬಳಸೋಕೆ ಹೋಗ್ಬೇಡಿ ಅಂದ್ರು.

ಇದನ್ನೂ ಓದಿ: ಕುಮಾರಸ್ವಾಮಿ-ಸುಮಲತಾ ವಾಕ್ಸಮರ -ಹೆಚ್​ಡಿಕೆ ಗರಂ ಆಗ್ತಿರೋದು ಯಾಕೆ?

ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡಿದ್ರೆ.. ನಿಮಗೂ ಅದಕ್ಕೂ ಸಂಬಂಧ ಇಲ್ಲ ಅಂದ್ರೆ ನೀವ್ಯಾಕೆ ಇಷ್ಟೊಂದು ರಿಯಾಕ್ಟ್ ಆಗ್ಬೇಕು? ನಿಮಗೂ ಅದಕ್ಕೂ ಏನು ಸಂಬಂಧ? ಏನು ಲಾಭ ಪಡೀತಿದ್ದೀರ ಎಂದು ಕುಮಾರಸ್ವಾಮಿಗೆ ಸುಮಲತಾ ಟಾಂಗ್ ಕೊಟ್ಟರು.

ಇದನ್ನೂ ಓದಿ: ‘ದಾರಿಯಲ್ಲಿ ಹೋಗೋ ದಾಸಪ್ಪ CM ಆಗಿದ್ದರೂ ಅಬರೀಶ್ ಸತ್ತಾಗ ಹಾಗೇ ನೋಡಿಕೊಳ್ತಿದ್ದರು’

The post ‘ಫೋನ್ ಟ್ಯಾಪಿಂಗ್ ನಿಮಗೆ ಅಭ್ಯಾಸ ತಾನೆ? ಶ್ರೀಗಳ ಫೋನ್ ಕೂಡ ಟ್ಯಾಪ್ ಆಗಿತ್ತು.. ಇದು ಫ್ಯಾಕ್ಟ್​’ appeared first on News First Kannada.

Source: newsfirstlive.com

Source link