ಬಿಗ್​ ಮನೆಯಲ್ಲಿ ಸ್ನೇಹಿತರ ನಡುವೆ ಧಗಧಗಿಸಿದ ಬೆಂಕಿ..!

ಬಿಗ್​ ಮನೆಯಲ್ಲಿ ಸ್ನೇಹಿತರ ನಡುವೆ ಧಗಧಗಿಸಿದ ಬೆಂಕಿ..!

ಪ್ರಶಾಂತ್ ಅಂಡ್ ಚಕ್ರವರ್ತಿ ಬೇರೇ ಸ್ಪರ್ಧಿಗಳ ಬಗ್ಗೆ ಮಾತನಾಡೋದು ಕಾಮನ್‌. ಅವ್ರು ಹೇಗೇ ವರ್ತಿಸ್ತಾರೆ, ವೀಕ್‌ನೆಸ್‌ ಏನೂ ಹೇಗೇ ಟ್ಯಾಕಲ್ ಮಾಡ್ಬೇಕು ಅಂತಾ ದಿನಪೂರ್ತಿ ಚರ್ಚೆ ಮಾಡ್ತಾರೆ. ಈ ಚರ್ಚೆ ಮಾಡೋ ಟೈಮ್‌ನಲ್ಲಿಯೇ ಇಬ್ಬರು ಜಗಳ ಮಾಡ್ಕೊಂಡು ಬಿಟ್ರೇ ಹೇಗೇ? ನಿನ್ನೆ ಆಗಿದ್ದು ಇದೇ.

ಚಂದ್ರಚೂಡ್​ ಹಾಗೂ ಪ್ರಶಾಂತ್​ ಜೀವದ ಗೆಳೆಯರು ಎಂದು ಹೇಳಿಕೊಳ್ಳುತ್ತಿದ್ದವರು, ಈಗ ದೊಡ್ಡ ಜಗಳವನ್ನೇ ಮಾಡಿಕೊಂಡಿದ್ದಾರೆ. ಆಗಾಗ ಇಬ್ಬರ ನಡುವೆ ಹೊಗೆ ಆಡುತ್ತಲೇ ಇರುತ್ತದೆ. ಸ್ವಲ್ಪ ವೈಮನಸ್ಸಿನ ಗಾಳಿ ಬಿಸಿದ್ರೂ ಸಾಕು ಬೆಂಕಿ ಹತ್ತಿ ಧಗಧಗ ಉರಿದು ಬಿಡ್ತಾರೆ.

ಇದನ್ನೂ ಓದಿ: BIGG BOSS; ದಿವ್ಯಾ ಉರುಡುಗ ಮೋಸ ಮಾಡಿದ್ರಾ?

ಟಂಕ ಶಾಲೆಯಲ್ಲಿ ನೋಟ್​​ ಮುದ್ರಿಸುವಾಗ ಅರವಿಂದ ತಾವು ಮೊದಲು ತೆಗೆದುಕೊಂಡ ನೋಟ್​ ಕಟರ್​ ಹಾಳಾಗಿದ್ದನ್ನು ಗಮನಿಸಿ, ರಘು ಅವರು ಸೆಲೆಕ್ಟ್​ ಮಾಡಿದ್ದ ಮಷಿನ್‌ ತೆಗೆದುಕೊಳ್ಳುತ್ತಾರೆ. ಇದು ರಘು ಅವರಿಗೆ ಗೊತ್ತಿರುವುದಿಲ್ಲ. ಹಾಗೇ ಸರಿಯಾಗಿ ನೋಟ್​ ಮುದ್ರಿಸಲು ಆಗುವುದಿಲ್ಲ. ಟಾಸ್ಕ್​ ಮುಗಿದ ನಂತರ ಪ್ರಶಾಂತ್​ ಈ ಕುರಿತು ರಘು ಅವರಿಗೆ ಮನವರಿಕೆ ಮಾಡಿಕೊಡುತ್ತಾರೆ.

ಇದನ್ನೂ ಓದಿ: ಪ್ರಶಾಂತ್​ ಅವರನ್ನು ಟಾರ್ಗೆಟ್​ ಮಾಡ್ತಿದ್ದಾರಾ ಅರವಿಂದ ಕೆ.ಪಿ..?

blank

ಚಂದ್ರಚೂಡ್​: ನೀನು ನಿನ್ನ ಆಟದ ಟ್ರಾಕ್​ಗೆ ಬಾರೋ..
ಪ್ರಶಾಂತ್​: ನಾನು ಬರ್ತೀನಿ, ನೀನ್​ ಏನ್​ ಗುರು ನ್ಯಾಯದ ಪರವಾಗಿ ನಿಂತ್ಕೋಳ್ಳಲ್ಲ. ಸಾಮಾಜಿಕ ನ್ಯಾಯ ಅಂತಿಯಾ. ಆದ್ರೇ, ನೀನು ಏನ್​ ಮಾಡ್ತಿದ್ದೀಯಾ?

ಇದನ್ನೂ ಓದಿ: #BiggBoss ಬೆಸ್ಟೀಗಳ ನಡುವೆ ಬಿರುಕು.. ಕೋಪದಲ್ಲಿ ಇದೆಂಥ ಅವಾಂತರ..?!

ಚಂದ್ರಚೂಡ್​: ನಾನ್ಯಾಕೋ ರಘು ಪರವಾಗಿ ನಿಂತ್ಕೋಳ್ಳಿ..
ಪ್ರಶಾಂತ್​: ಅಲ್ಲಾ ಕಣೋ ರಘುಗೆ ಧ್ವನಿ ಇಲ್ಲ. ಮಂದಾ, ಅವನಿಗೆ ಗೊತ್ತಿರಲಿಲ್ಲ, ನಾನು ಅವನಿಗೆ ಹೇಳಲು ಪ್ರಯತ್ನಿಸಿದೆ. ಆದ್ರೇ ನೀನು ಅವನ ಪರವಾಗಿ ನಿಂತ್ಕೋಬೇಕಿತ್ತು.

ಚಂದ್ರಚೂಡ್​: ಓಕೆ, ನೀನು ಹೇಳಿದ ತಕ್ಷಣ ರಘು ಏನಾದ್ರು ವಾದ ಮಾಡ್ತಿದ್ದಾನಾ.. ಹೇಳು..
ಶಮಂತ್​: ಪ್ರಶಾಂತ್​ ಸರ್​, ರಘುದು ಅವರೇ ಮಾತಾಡ್ಬೇಕು. ನಾವಲ್ಲ.
ಚಂದ್ರಚೂಡ್​: ನೀನು ಎಲ್ಲರಿಗೂ ಏನೇನೂ ಟ್ರೈ ಮಾಡ್ತಿದ್ದಿಯಾ ಆದ್ರೇ ಅವರು ನಿನ್ನ ಲೇವಡಿ ಮಾಡ್ತಿದ್ದಾರೆ. ರಘುಗೆ ಅಷ್ಟೇಲ್ಲ ಹೇಳಿದೆ. ಆದ್ರೇ ಅವನು ಅರವಿಂದ ಹತ್ತಿರ ಬಂದು ಕಾಂಪ್ರೂ ಆದ.

ಪ್ರಶಾಂತ್​: ಓಡೋ ಕುದುರೆಗೆ ಬೆಟ್ಟಿಂಗ್​ ಕಟ್ಟಬೇಡ ರಾಜಾ, ನಾನೂ ನೋಡ್ತಿದ್ದಿನಿ. ನೀನು ಯಾರ ಮೇಲೆ ದುಡ್ಡು ಕಟ್ತಿದಿಯಾ, ಏನ್​ ಮಾಡ್ತಿದಿಯಾ ಗೊತ್ತು.

ಇದನ್ನೂ ಓದಿ: BiggBoss ಗಳಿಸು ಉಳಿಸೋರು ಯಾರು? ಮನೆಯ ಕ್ಯಾಪ್ಟನ್​ ಆಗೋರು ಇವರು..!

ಚಂದ್ರಚೂಡ್​: ನಾನು ಆತ್ಮ ಸಾಕ್ಷಿಯಾಗಿದ್ದಿನಿ, ನಿನ್ನ ನೋಡಿ ಬೇಜಾರ್​ ಆಗ್ತಿದೆ. ನೀನು ವೈಷ್ಣವಿಗೆ ಎಲ್ಲಾ ರೀತಿ ಹೇಳ್ತಿಯಾ ಆದ್ರೇ ಅವಳು ಮೊಟ್ಟೆ ಟಾಸ್ಕ್​ ಮುಗಿದ ಮೇಲೆ ಹೇಗೆ ಒಡೆದೆಯಮ್ಮಾ ಎಂದು ಕೇಳಿದ್ದಕ್ಕೆ ಪ್ರಶಾಂತ್​ ಸರ್​ ಹೇಳಿದ್ದು ಒಂದು ಬಿಟ್ಟು ಮಿಕ್ಕಿದ್ದು ಎಲ್ಲಾ ಮಾಡಿದೆ ಎಂದು ತಮಾಷೆಯಾಗಿ ಎಲ್ಲರ ಮುಂದೆ ಹೇಳಿದ್ಲು. ಆದರೆ ಅದು ತಮಾಷೆ ಆದ್ರು, ಅದರಲ್ಲಿ ಒಂದು ಅರ್ಥ ಇದೆ. ನೀನು ಅರ್ಥಾ ಮಾಡ್ಕೋ. ನೀನು ಏನೇ ಮಾಡಿದ್ರೂ ನನ್ನ ನಿನ್ನ ಪರವಾಗಿ ಯಾರೂ ನಿಲ್ಲಲ್ಲ. ನಾವೀಬ್ರು ಹೋದ್ರೇ ಸಾಕಾಗಿದೆ. ಇದನ್ನು ನೀನು ತಿಳ್ಕೋ ಎನ್ನುತ್ತಾರೆ.

ಪ್ರಶಾಂತ್​: ನಾನು ವೈಷ್ಣವಿಯನ್ನು ಕೇಳುತ್ತೇನೆ. ನಾನು ಅವಳಿಗೆ ಒಳ್ಳೆದನ್ನೇ ಹೇಳಿದ್ದೆ.
ಚಂದ್ರಚೂಡ್​: ನೀನು ಈ ಹೊಲಸು ಮಾಡ್ಬೇಡ. ನನ್ನ ನಿನ್ನ ಸ್ನೇಹಕ್ಕೆ ನಾನು ಹೇಳಿದ್ದು, ಕೇಳ್ಬೇಡ. ನಿಂಗೆ ಗೊತ್ತಾಗುತ್ತೆ ಸುಮ್ನೆ ಇರು.

ಗೇಮ್ ಶುರುವಾಗಿದ್ದೇ ಇದಾದ್ಮೇಲೆ ನೋಡಿ.. ಪ್ರಶಾಂತ್​ ವೈಷ್ಣವಿಯನ್ನೇ ಕೇಳೇ ಬಿಡ್ತಾರೆ. ನೀನು ಆ ರೀತಿ ಮಾತ್ನಾಡಿದಿಯಾ. ಇದಕ್ಕೆ ವೈಷ್ಣವಿ ಇಲ್ಲಾ ಎನ್ನುತ್ತಾಳೆ. ಆದರೆ ನಾನು ತಮಾಷೆ ಮಾಡಿದೆ. ನೀವು ಹೇಳಿದ ರೀತಿ ಆಡಿದಕ್ಕೆ ಕೈ ಜಾರುತಿತ್ತು . ಅದಕ್ಕೆ ಬೇಡ ಆಂತಾ ಬಿಟ್ಟೆ ಎನ್ನುತ್ತಾರೆ. ಅಷ್ಟರಲ್ಲಿ ಚಂದ್ರಚೂಡ್​ ಮಧ್ಯ ಪ್ರವೇಶಿಸಿ, ಪ್ರಶಾಂತ್​ ನೀನು ಮಾಡಿದ್ದು ಸರಿಯಲ್ಲ ಅಂತಾ ಜೋರಾಗಿ ಕಿರುಚೋಕೆ ಶುರು ಮಾಡ್ತಾರೆೆ.

blank

ನಾನು ನಡೆದ ವಿಚಾರ ಹೇಳಿದೆ. ನೀನು ಮಾಡಿದ್ದು ಅಸಹ್ಯ. ನೀನು ತಂದುಹಾಕಿದೆ. ನಿನ್ನ ಬೆನ್ನ ಹಿಂದೆ ಜನ ಲೇವಡಿ ಮಾಡ್ತಾರೆ. ಅದನ್ನು ತಿಳ್ಕೋ. ನನಗೆ ಬುದ್ಧಿವಾದ ಹೇಳೋಕೆ ಬಂದೆ ಅದಕ್ಕೆ ಉಗಿದೆ. ನಮಕ್​ ಹರಾಮ್​ ಕೆಲಸ ಮಾಡಿದೆ. ವೈಯಕ್ತಿಕವಾಗಿ ಮಾತನಾಡಿದ್ದನ್ನು ಹೇಳಿದೆ. ನನ್ನ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ. ನನ್ನ ಮಗನೆ ತಾಕತ್ತಿದ್ರೇ ಎಲ್ಲವನ್ನು ಅವರ ಅವರ ಮುಂದೆನೆ ಮಾತಾಡು. ಏನಿದ್ರೂ ನೇರವಾಗಿ ಹೇಳ್ತೀನಿ. ನಿನ್ನ ತರಹ ಹೇಡಿ ಅಲ್ಲ ಎನ್ನುತ್ತಾರೆ. ಇದು ದೊಡ್ಡ ಕಾಳಗವನ್ನೇ ಸೃಷ್ಟಿಸುತ್ತದೆ.

ಇತ್ತ ಪ್ರಶಾಂತ್​ ವೈಷ್ಣವಿ ಮುಂದೆ ಬಂದು ಕಣ್ಣೀರು ಇಡುತ್ತಾರೆ. ನಾನು ನೀನಗೆ ಒಂದು ಸ್ಥಾನ ನೀಡಿದ್ದೀನಿ. ಅದಕ್ಕೆ ನನಗೆ ಬೇಜಾರಾಯಿತು. ನೀನು ಹಾಗೆ ಮಾಡಲ್ಲ ಅಂತಾ ನಂಗೆ ಗೊತ್ತು ಎಂದು ಭಾವುಕರಾಗುತ್ತಾರೆ. ಹೀಗೇ ಕುಚುಕುಗಳ ನಡುವೆ ಈಗ ದೊಡ್ಡ ಬಿರುಕು ಬಿಟ್ಟಿದೆ.

The post ಬಿಗ್​ ಮನೆಯಲ್ಲಿ ಸ್ನೇಹಿತರ ನಡುವೆ ಧಗಧಗಿಸಿದ ಬೆಂಕಿ..! appeared first on News First Kannada.

Source: newsfirstlive.com

Source link