‘ಪ್ರತಾಪ್ ಸಿಂಹ ಇದಕ್ಕೆ ಮೊದಲು ಆನ್ಸರ್ ಮಾಡಲಿ, ನಂತ್ರ ಮಂಡ್ಯ ವಿಷಯಕ್ಕೆ ಬನ್ನಿ’ -ಸುಮಲತಾ

‘ಪ್ರತಾಪ್ ಸಿಂಹ ಇದಕ್ಕೆ ಮೊದಲು ಆನ್ಸರ್ ಮಾಡಲಿ, ನಂತ್ರ ಮಂಡ್ಯ ವಿಷಯಕ್ಕೆ ಬನ್ನಿ’ -ಸುಮಲತಾ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್​​, ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದಿದ್ದಾರೆ. ಇಂದು ಸುಮಲತಾ, ಮಾಜಿ ಸಿಎಂ ಹೆಚ್.​ಡಿ ಕುಮಾರಸ್ವಾಮಿ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಹಲವು ಆರೋಪಗಳಿಗೆ ಉತ್ತರ ಕೊಟ್ಟರು.

ಈ ವೇಳೆ ವರದಿಗಾರರು, ನಿಮ್ಮ ಕುಮಾರಸ್ವಾಮಿ ವಾಕ್ಸಮರದ ಮಧ್ಯೆ ಬಿಜೆಪಿಯವರು ಯಾಕೆ ಮಾತಾಡ್ತಿದ್ದಾರೆ? ಮೈಸೂರು ಸಂಸದರಿಗೆ ಇದ್ರಲ್ಲಿ ಏನು ಉತ್ಸಾಹ ಎಂದು ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಸುಮಲತಾ, ಅವರಿಗೆ ಏನು ಉತ್ಸಾಹನೋ ಏನೋ ಗೊತ್ತಿಲ್ಲ. ಪಾಪ ಅವರು ಒಂದು ಸಣ್ಣ ಗೊಂದಲದಲ್ಲಂತೂ ಇದ್ದಾರೆ. ಅವರು ಮೈಸೂರು ಸಂಸದರಾ? ಮಂಡ್ಯ ಸಂಸದರಾ? ಅಂತ ಫಸ್ಟು ಕ್ಲಾರಿಟಿ ತೆಗೆದುಕೊಳ್ಳಬೇಕು. ಇನ್ನೊಂದು ಅವರು ಜೆಡಿಎಸ್​ನಲ್ಲಿ ಇದ್ದಾರಾ, ಬಿಜೆಪಿಯಲ್ಲಿ ಇದ್ದಾರಾ? ಅದನ್ನೂ ಕ್ಲಾರಿಟಿ ತೆಗೆದುಕೊಂಡು ಮಾತಾಡಿದ್ರೆ ಸರಿ ಅಂದುಕೊಂಡಿದ್ದೇನೆ ಎಂದರು.

ಕೊರೊನಾ ವಿಚಾರದಲ್ಲಿ ಮೈಸೂರಲ್ಲಿ ಹಲವಾರು ತೊಂದರೆಗಳಿವೆ. ಅತೀ ಹೆಚ್ಚು ಸಾವುಗಳಾಗಿದ್ದವು. ಅದನ್ನೆಲ್ಲಾ ಪಕ್ಕಕ್ಕೆ ಇಟ್ಟು, ಅಕ್ರಮ ಗಣಿಗಾರಿಕೆ ಮಾಡುತ್ತಿರೊ ಕಂಪನಿಯನ್ನ ಯಾಕೆ ಸಮರ್ಥನೆ ಮಾಡಿಕೊಂಡು ಬರುತ್ತಿದ್ದಾರೆ? ಈ ಪ್ರಶ್ನೆ ಅವರನ್ನೇ ಕೇಳಬೇಕು. ಅಷ್ಟೇ ಅಲ್ಲ ಕೊರೊನಾ ವಿಷಯ ನಡೀತಿರಬೇಕಾದ್ರೆ ಆ ಟೈಮಲ್ಲಿ ನೀವು ರಾಜಕಾರಣ ಮಾಡ್ಕೊಂಡು, ಒಬ್ಬ ಒಳ್ಳೆ ಆಫೀಸರ್​ನ, ಒಬ್ಬ ಮಹಿಳಾ ಅಧಿಕಾರಿಗೆ ಅವಮಾನ ಮಾಡಿ ಅವರ ವರ್ಗಾವಣೆಯಾಗುವಂತೆ ಎಲ್ಲಾ ಮಾಡಿದ್ದೀರ. ಕೊರೊನಾ ವಿಷಯದಲ್ಲಿ ಇವೆಲ್ಲಾ ಬೇಕಿತ್ತಾ? ಇದನ್ನ ಎಲ್ಲರೂ ಕೇಳ್ತಾರೆ. ನಾನು ಇಷ್ಟು ದಿನ ಕೇಳಿಲ್ಲ. ಪಬ್ಲಿಕ್​​ನಲ್ಲಿ ನಡೀತಿದೆ. ಅದಕ್ಕೆ ಮೊದಲು ಆನ್ಸರ್ ಮಾಡಿ, ಆಮೇಲೆ ಮಂಡ್ಯ ವಿಷಯಕ್ಕೆ ಬನ್ನಿ ಎಂದು ಪ್ರತಾಪ್ ಸಿಂಹಗೆ ತಿರುಗೇಟು ಕೊಟ್ಟರು.

The post ‘ಪ್ರತಾಪ್ ಸಿಂಹ ಇದಕ್ಕೆ ಮೊದಲು ಆನ್ಸರ್ ಮಾಡಲಿ, ನಂತ್ರ ಮಂಡ್ಯ ವಿಷಯಕ್ಕೆ ಬನ್ನಿ’ -ಸುಮಲತಾ appeared first on News First Kannada.

Source: newsfirstlive.com

Source link