ಯುವಕರೇ ನೀವೂ ಮೋಸ ಹೋಗಬೇಡಿ; ಗೂಗಲ್​​, IBMನಲ್ಲಿ ಕೆಲ್ಸ ಕೊಡ್ಸೋದಾಗಿ ಏನ್​ಮಾಡಿದ್ರು ನೋಡಿ

ಯುವಕರೇ ನೀವೂ ಮೋಸ ಹೋಗಬೇಡಿ; ಗೂಗಲ್​​, IBMನಲ್ಲಿ ಕೆಲ್ಸ ಕೊಡ್ಸೋದಾಗಿ ಏನ್​ಮಾಡಿದ್ರು ನೋಡಿ

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಅದೆಷ್ಟೇ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಲಾಕ್​ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಹಲವು ಸಂಸ್ಥೆಗಳು ಉದ್ಯೋಗಿಗಳಿಗೆ ಸಂಬಳ ಕೂಡ ಕೊಡಲಾಗದೆ ಸಂಕಷ್ಟ ಎದುರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯೋಗ ಹುಡುಕಾಟದಲ್ಲಿದ್ದ ಯುವಕರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇನೆ ಎಂದು ನಂಬಿಸಿ ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.

blank

ಮುಂಬೈನ ಪ್ರತಿಷ್ಠಿತ ಕಂಪನಿಯಲ್ಲಿ ಒಳ್ಳೆ ಕೆಲಸದಲ್ಲಿದ್ದ ಆರೋಪಿ ‌ರಾಘವನ್ ಶ್ರೀನಿವಾಸನ್ ದುಡ್ಡು ಹೊಡೆಯೋ ಪ್ಲಾನ್ ಮಾಡಿ, ಬೆಂಗಳೂರಿಗೆ ಬಂದು ಕನ್ಸಲ್ಟೆನ್ಸಿ ತೆರೆದು ಜಾಬ್ ಆಫರ್ ನೀಡೋಕೆ ಶುರು ಮಾಡಿದ್ದ. ಇದಕ್ಕೆ ಆರೋಪಿ ವಿಆರ್​​ಆರ್ ವೆಂವರ್ಸ್ ಅನ್ನೋ ಕಂಪನಿಯನ್ನ ಶುರು ಮಾಡಿದ್ದ. ಕೊರೊನಾ ಸಂಕಷ್ಟದ ಸಮಯವನ್ನು ನೋಡ್ಕೊಂಡು ಐಡಿಯಾ ಮಾಡಿದ್ದ ಆರೋಪಿ, ಕೆಲಸ ಹುಡುಕಾಡ್ತಿದ್ದ ನಿರುದ್ಯೋಗಿಗಳಿಗೆ ಹಾಗೂ ವಿದೇಶದಲ್ಲಿ ಕೆಲಸ ಮಾಡ್ಬೇಕು ಅನ್ನೋ ಆಸೆ ಇಟ್ಕೊಂಡ ಯುವಕರಿಗೆ ಬಲೆ ಬೀಸಿದ್ದ.

blank

ಕೆನಡಾ, ಅಮೆರಿಕಾ ಸೇರಿದಂತೆ ದೊಡ್ಡ ದೊಡ್ಡ ದೇಶಗಳ ಸಾಫ್ಟ್​​​ವೇರ್​​ ಕಂಪನಿಗಳಲ್ಲಿ ಹಾಗೂ ಮೈಕ್ರೋಸಾಫ್ಟ್, ಗೂಗಲ್, ಐಬಿಎಮ್ ಕಂಪನಿಯಲ್ಲಿ ಉದ್ಯೋಗ ಕೊಡಿಸ್ತೀನಿ ಅಂತಾ ಭರವಸೆ ನೀಡುತ್ತಿದ್ದ. ಯುವಕರನ್ನು ನಂಬಿಸಲು ಸತ್ಯಾ ನಡೆಲ್ಲಾ, ಸುಂದರ್ ಪಿಚ್ಚೈ ಸೇರಿದಂತೆ ಹಲವರು ಪರಿಚಯ, ಅವರಿಂದ ಮೇಲ್​ ಕೂಡ ಬಂದಿದೆ ಎಂದು ಅವರಿಂದ ಮೇಲ್ ಮಾಡಿಸಿಕೊಂಡಂತೆ ಫೇಕ್ ಮೇಲ್‌ಗಳನ್ನು ತೋರಿಸುತ್ತಿದ್ದ. ಹೀಗೆ 50ಕ್ಕೂ ಹೆಚ್ಚು ನಿರುದ್ಯೋಗಿಗಳಿಗೆ ನಂಬಿಸಿ ಹಣ ಬೇಡಿಕೆ‌ ಇಟ್ಟಿದ್ದ.

blank

ರಿಜಿಸ್ಟ್ರೇಷನ್ ಫೀಸ್, ಕನ್ಸಲ್ಟಿನ್ಸಿ ಫೀಸ್ ಅಂತಾ ಒಬ್ಬೊಬ್ಬರಿಂದ ನಾಲ್ಕೈದು ಲಕ್ಷ ಕಟ್ಟಿಸಿಕೊಂಡಿದ್ದ ಬಳಿಕ ಫೇಕ್ ಆಪರ್
ಲೇಟರ್ ಕಳಿಸಿ ಜಾಬ್ ಆಗಿದೆ ಅಂತಾ ನಂಬಿಸಿದ್ದ. ಯಾವಾಗ ಫಾರಿನ್‌ಗೆ ಹೋಗೋದು ಅಂತಾ ಆಕಾಂಕ್ಷಿಗಳು ಕೇಳ್ದಾಗ ಕೊರೊನಾ ಲಾಕ್ ಡೌನ್ ಅಂತಾ ಸಬೂಬು ಹೇಳಿ ಪದೇ ಪದೇ ದಿನಾಂಕ ಮುಂದೂಡುತ್ತಿದ್ದ. ಇದರಿಂದ ಅನುಮಾನಗೊಂಡ ಯುವಕರು ಆರೋಪಿ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಸದ್ಯ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿರೋ ಇಂದಿರಾನಗರ ಪೊಲೀಸರು, ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ ಆರೋಪಿ ಮಾಸ್ಟರ್ ಮೈಂಡ್ ಐಡಿಯಾ ಕೇಳಿ ಪೊಲೀಸರೇ ಶಾಕ್ ಆಗಿದ್ದು, ಸದ್ಯ ಎಷ್ಟು ಜನರಿಗೆ ಮೋಸ‌ ಮಾಡಿದ್ದಾನೆ? ಎಷ್ಟು ಕೋಟಿ ವಂಚಿಸಿದ್ದಾನೆ ಎಂಬ ಬಗ್ಗೆ ಮಾಹಿತಿ ಹಾಕುತ್ತಿದ್ದಾರೆ.

The post ಯುವಕರೇ ನೀವೂ ಮೋಸ ಹೋಗಬೇಡಿ; ಗೂಗಲ್​​, IBMನಲ್ಲಿ ಕೆಲ್ಸ ಕೊಡ್ಸೋದಾಗಿ ಏನ್​ಮಾಡಿದ್ರು ನೋಡಿ appeared first on News First Kannada.

Source: newsfirstlive.com

Source link