ಪೇಪರ್ ತಟ್ಟಂತ ಎಸೆದ್ರು.. ಸ್ಮಾರಕ ನಿರ್ಮಿಸಿದ್ದು ಹೆಚ್​ಡಿಕೆ ಅಲ್ಲ, ಯಡಿಯೂರಪ್ಪ -ದೊಡ್ಡಣ್ಣ

ಪೇಪರ್ ತಟ್ಟಂತ ಎಸೆದ್ರು.. ಸ್ಮಾರಕ ನಿರ್ಮಿಸಿದ್ದು ಹೆಚ್​ಡಿಕೆ ಅಲ್ಲ, ಯಡಿಯೂರಪ್ಪ -ದೊಡ್ಡಣ್ಣ

ಬೆಂಗಳೂರು: ದಿವಂಗತ ಅಂಬರೀಷ್ ಅವರ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಮಗೆ ಅವಮಾನ ಮಾಡಿದ್ದು ನಿಜ ಅಂತ ಹಿರಿಯ ನಟ ದೊಡ್ಡಣ್ಣ ಹೇಳಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ದೊಡ್ಡಣ್ಣ ಹೆಚ್​ಡಿಕೆ ವಿರುದ್ಧ ಹರಿಹಾಯ್ದರು. ಕುಮಾರಸ್ವಾಮಿ ಅವಮಾನ ಮಾಡಿದ್ದು ನಿಜ. ನಾನು ಹೋಗಿದ್ದಾಗ ಕೆಲವು ರಾಜಕಾರಣಿಗಳು ಇದ್ರು. ನಮ್ಮನ್ನ 2 ಗಂಟೆ ಕಾಯಿದಿಸಿದ ಬಳಿಕ ಒಳಗಡೆ ಬಿಟ್ರು. ನಾವು ಸ್ಮಾರಕದ ಕುರಿತು ಲೇಟರ್​ ಕೊಟ್ಟಾಗ ಕುಮಾರಸ್ವಾಮಿ ಅಹಸ್ಯ ಪಟ್ರು. ನನ್ನ ನೋಡಿ.. ಇವನು ಏನು ಮಾಡಿದ್ದಾನೆ ಅಂತ ಸ್ಮಾರಕ ಮಾಡ್ತಿರೀ? ಅಂಬರೀಶ್​ ಏನು ಸಾಧನೆ ಮಾಡಿದ್ದಾನೆ ಅಂತ ಪೇಪರ್ ತಟ್ಟಂತ ಎಸೆದ್ರು. ಆಗ ನಾನು ಏನೂ ಮಾತನಾಡಲಿಲ್ಲ ಎಂದರು

ನಾನು ಏನು ಮಾತನಾಡದೆ ಕೈಕಟ್ಟಿಕೊಂಡು ನಿಂತಿದ್ದೆ. ನಂತರ ಆ ಲೇಟರ್​ ಅಯ್ದುಕೊಂಡು ​ ಜೇಬಿನಲ್ಲಿ ಇಟ್ಟುಕೊಂಡು ಬಂದೆ. ಆಗ ನನಗೆ ಧೈರ್ಯ ತಿಂಬಿದ್ದು ಹಿರಿಯ ನಟ ಎಸ್​.ಶಿವರಾಮ್. ಬಳಿಕ ಸುಮಲತಾ ಬಳಿ ಕಣ್ಣೀರಿಟ್ಟುಕೊಂಡು ಹೋದೆ ಎಂದು ದೊಡ್ಡಣ್ಣ ಹೇಳಿದ್ರು.

ಕನ್ನಡ ಚಿತ್ರರಂಗಕ್ಕೆ ಡಾ.ರಾಜ್, ವಿಷ್ಣು, ಅಂಬಿ ಮೂವರು ದೇವರಿದ್ದಾರೆ. ಆ ದೇವರುಗಳಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ವಿಷ್ಣು ಸ್ಮಾರಕ ತಡವಾಗಿದೆ, ಸ್ಮಾರಕ ಆಗೇ ಆಗುತ್ತೆ. ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿದ್ದರು. ಇದನ್ನು ನಾವು, ಮುಂದಿನ ತಲೆಮಾರು ಸಹ ಹೇಳುತ್ತದೆ ಅಂತ ದೊಡ್ಡಣ್ಣ  ಹೆಚ್​ಡಿಕೆಗೆ ಟಾಂಗ್ ಕೊಟ್ಟರು.

blank

ಅಂಬರೀಶ್​ ಸ್ಮಾರಕ ನಿರ್ಮಿಸಿದ್ದು ಕುಮಾರಸ್ವಾಮಿ ಅಲ್ಲ, ಯಡಿಯೂರಪ್ಪ
ಅಂಬರೀಶ್ ನಿಧನರಾಗಿದ್ದಾಗ ಇದ್ದಿದ್ದು ನಾವು 4 ಜನ. ನಾನು, ವೆಂಕಟೇಶ್, ಅಭಿ, ಸುಮಲತಾ. ಅಭಿ ಹಠ ಮಾಡಿದ್ದಕ್ಕೆ ಬಾಡಿ ಮಂಡ್ಯಕ್ಕೆ ಕೊಂಡೊಯ್ದೆವು. ಸಿಎಂ ಆಗಿದ್ದ ನೀವು ಏರ್​ಲಿಫ್ಟ್ ಮಾಡಲು ಏರ್​ಫೋರ್ಸ್​ ಬಳಿ ಮಾತನಾಡಿದ್ರಿ. ಅಂಬರೀಶ್​ ಸ್ಮಾರಕ ನಿರ್ಮಿಸಿದ್ದು ಕುಮಾರಸ್ವಾಮಿ ಅಲ್ಲ, ಸಿಎಂ ಯಡಿಯೂರಪ್ಪ ಎಂದು ದೊಡ್ಡಣ್ಣ ಹೇಳಿದ್ರು.

ಪದೇ ಪದೇ ಸಿನಿಮಾದವರೆಂಬ ಪದ ಬಳಸಬೇಡಿ. ಏಕೆ ಪದೇ ಪದೇ ಸಿನಿಮಾದವರೆಂದು ಕಡೆಗಣನೆ? ಸಿನಿಮಾದವರ ಬಗ್ಗೆ ಏಕಿಷ್ಟು ಕೀಳಾಗಿ ಮಾತಾಡ್ತೀರಿ? ಮಾತಿಗೆ ಮುಂಚೆ ಗಳಗಳನೆ ಕಣ್ಣೀರು ಹಾಕ್ತೀರಿ. ನೀವು ಯಾವ ನಟರಿಗೆ ಕಡಿಮೆ ಇದ್ದೀರಿ ಹೇಳಿ? ನಮಗೆ ಚಿತ್ರರಂಗವೆಂದರೆ ತಾಯಿ ಇದ್ದಂತೆ. ಯಾರಿಗೋ ಹೇಳಿದ್ರೂ ಎಲ್ಲರಿಗೂ ನೋವಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ದೊಡ್ಡಣ್ಣ ಆಕ್ರೋಶ ಹೊರಹಾಕಿದ್ರು.

The post ಪೇಪರ್ ತಟ್ಟಂತ ಎಸೆದ್ರು.. ಸ್ಮಾರಕ ನಿರ್ಮಿಸಿದ್ದು ಹೆಚ್​ಡಿಕೆ ಅಲ್ಲ, ಯಡಿಯೂರಪ್ಪ -ದೊಡ್ಡಣ್ಣ appeared first on News First Kannada.

Source: newsfirstlive.com

Source link