‘ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಅನ್ನೋದಾದ್ರೆ.. ಯೆಸ್ ನಾವು ನಟೋರಿಯಸ್’

‘ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಅನ್ನೋದಾದ್ರೆ.. ಯೆಸ್ ನಾವು ನಟೋರಿಯಸ್’

ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದು.. ಪದೇ ಪದೇ ನನ್ನ ತಂದೆಯ ಸಾವಿನ ವಿಚಾರ ತರಬೇಡಿ.. ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ ಎಂದಿದ್ದಾರೆ.

ಒಬ್ಬ ಮಗನಾಗಿ ನನಗೆ ನೋವಾಗತ್ತೆ.. ಅವರು ಅಂದಿನ ಸಿಎಂ ಆಗಿದ್ದಾಗ ಏನು ಹೇಳಿದ್ರು..? ನಿಮ್ಮ ಬಳಿಯೇ ದಾಖಲೆ ಇದೆ. ಟೈಂ ವ್ಯರ್ಥ ಮಾಡೋದು ಬೇಡ.. ಅಂದಿನ ದಾಖಲೆ ತೆಗೆದು ನೋಡಿ. ನವೆಂಬರ್ 24, 2018ರಂದು ಏನು ಮಾತಾಡಿದ್ರು..?

ಮನೆಯಲ್ಲಿ ಯಾರನ್ನಾದ್ರೂ ಕಳೆದುಕೊಂಡಾಗ ಮಾತಾಡುವ ಪರಿಸ್ಥಿತಿಯಲ್ಲಿ ಇರುತ್ತಾರಾ? ಅವತ್ತು ನಮ್ಮಮ್ಮ ಗಂಡನ ಕಳೆದುಕೊಂಡು ನೋವಲ್ಲಿದ್ರು.. ಅಂದು ಅಮ್ಮ ಏನೂ ಮಾತಾಡಿಲ್ಲ..? ಅಕ್ರಮ ಗಣಿಗಾರಿಕೆ ಧ್ವನಿ ಎತ್ತಿದ್ದು ನಟೋರಿಯಸ್ಸಾ? ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಆದ್ರೆ ಯೆಸ್ ನಾವು ನಟೋರಿಯಸ್..

ಇದನ್ನೂ ಓದಿ: ಪೇಪರ್ ತಟ್ಟಂತ ಎಸೆದ್ರು.. ಸ್ಮಾರಕ ನಿರ್ಮಿಸಿದ್ದು ಹೆಚ್​ಡಿಕೆ ಅಲ್ಲ, ಯಡಿಯೂರಪ್ಪ -ದೊಡ್ಡಣ್ಣ

ರಾಜಕೀಯವಾಗಿ ಏನು ಬೇಕಾದರೂ ವಿರೋಧ ಮಾಡಿ.. ಆದ್ರೆ ವೈಯಕ್ತಿಕ ವಿಚಾರಗಳಿಗೆ ಬರಬೇಡಿ ನಮಗೂ ಮಗನಾಗಿ ನೋವಾಗುತ್ತೆ. ಯಾರೂ ನಿಮ್ಮನ್ನು ವಿರೋಧಿಸ್ತಿಲ್ಲ ಅಂದ್ರೆ ನೀವು ಏನೂ ಮಾಡಿಲ್ಲ ಅಂತ ಅರ್ಥ. ವಿಲನ್ ಇಲ್ಲದೆ ಹೀರೋ ಸಾಧ್ಯವೇ ? ನಮ್ಮನ್ನ ಯಾಕೆ ವಿರೋಧಿಸುತ್ತಿದ್ದಾರೆ..? ಅವರ ಮನಸ್ಸಿನಲ್ಲಿ ಏನಿದೆಯೋ ನನಗೆ ಗೊತ್ತಿಲ್ಲ ಎಂದು ಅಭಿಷೇಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ‘ಪ್ರತಾಪ್ ಸಿಂಹ ಇದಕ್ಕೆ ಮೊದಲು ಆನ್ಸರ್ ಮಾಡಲಿ, ನಂತ್ರ ಮಂಡ್ಯ ವಿಷಯಕ್ಕೆ ಬನ್ನಿ’ -ಸುಮಲತಾ

The post ‘ಅಕ್ರಮದ ಬಗ್ಗೆ ಮಾತಾಡೋದು ನಟೋರಿಯಸ್ ಅನ್ನೋದಾದ್ರೆ.. ಯೆಸ್ ನಾವು ನಟೋರಿಯಸ್’ appeared first on News First Kannada.

Source: newsfirstlive.com

Source link