ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ಚೆಕ್ ನೀಡಿದ BMICAPA

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ಚೆಕ್ ನೀಡಿದ BMICAPA

ಬೆಂಗಳೂರು: ಬೆಂಗಳೂರು-ಮೈಸೂರು ಇನ್​ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನಾ ಪ್ರಾಧಿಕಾರ ಇಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ರೂಪಾಯಿ ಚೆಕ್​ನ್ನು ನೀಡುವ ಮೂಲಕ ಕೋವಿಡ್ ವಿರುದ್ಧದ ರಾಜ್ಯ ಸರ್ಕಾರದ ಹೋರಾಟಕ್ಕೆ ಸಾಥ್ ನೀಡಿದೆ.

ಬೆಂಗಳೂರು-ಮೈಸೂರು ಇನ್​ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಂ. ಜಯದೇವ ಅವರ ನೇತೃತ್ವದಲ್ಲಿ ಮತ್ತು ನಿವೃತ್ತ ಪೊಲೀಸ್ ಮಹಾ ನಿರ್ದೇಶ ಶಂಕರ್ ಬಿದರಿ ಮುಂತಾದವರ ಉಪಸ್ಥಿತಿಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಯೋಗ ಎರಡು ಕೋಟಿ ರೂಪಾಯಿ ಚೆಕ್​ ಅನ್ನು ಹಸ್ತಾಂತರಿಸಿದೆ.

blank

 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನ ಭೇಟಿಯಾಗಿ ಚೆಕ್ ಮೂಲಕ 2 ಕೋಟಿ ನೆರವನ್ನು ಬಿಎಂಐಸಿಎಪಿಎ ನಿಯೋಗ ನೀಡಿದೆ. ಕೋವಿಡ್ ಸಾಂಕ್ರಾಮಿಕದ ಸಲುವಾಗಿ ಈ ನೆರವಿನ ಚೆಕ್ ನೀಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

The post ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 2 ಕೋಟಿ ಚೆಕ್ ನೀಡಿದ BMICAPA appeared first on News First Kannada.

Source: newsfirstlive.com

Source link